ChatGPT ಪ್ರತಿಸ್ಪರ್ಧಿ ಭಾರತ್ ಜಿಪಿಟಿ ಅಭಿವೃದ್ಧಿಗೆ ಬೆಂಗಳೂರಿನ ಸಂಸ್ಥೆ ಎಸ್‌ಎಂಎಲ್ ಹೂಡಿಕೆ!
ಚಾಟ್‌ಜಿಪಿಟಿ ಹೊಸ ಕ್ರಾಂತಿ ಮಾಡಿದೆ. ಇಂಗ್ಲೀಷ್ ಭಾಷೆಯಲ್ಲಿ ಉಪಯೋಗಿಸಬಲ್ಲ ಚಾಟ್‌ಜಿಪಿಟಿಗೆ ಪ್ರತಿಸ್ಪರ್ಧಿಯಾಗಿ ಕನ್ನಡ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಬಳಸಬಹುದಾದ ಮೇಡ್ ಇನ್ ಇಂಡಿಯಾ ಭಾರತ್ ಜಿಪಿಟಿ ಅಭಿವೃದ್ಧಿಪಡಿಸಲಾಗುತ್ತಿದೆ. ವಿಶೇಷ ಅಂದರೆ ಇದಕ್ಕೆ ಬೆಂಗಳೂರಿನ ಎಸ್‌ಎಂಎಲ್ ಸಂಸ್ಥೆ ಹೂಡಿಕೆ ಮಾಡುತ್ತಿದೆ.
ಬೆಂಗಳೂರು(ಡಿ.30) ಡಿಜಿಟಲ್ ಯುಗದಲ್ಲಿ ಆಗಿರುವ ಮಹತ್ತರ ಬದಲಾವಣೆ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಿದೆ. ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಚಾಟ್‌ಜಿಪಿಟಿ ತಂತ್ರಜ್ಞಾನ ದಿನನಿತ್ಯದ ಬದುಕಿಗೆ ಹಾಸುಹೊಕ್ಕಿದೆ. ಆದರೆ ಚಾಟ್‌ಜಿಪಿಟಿ ಪ್ರಮುಖವಾಗಿ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬಳಕೆ ಮಾಡಲು ಸಾಧ್ಯವಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಭಾರತದ ಭಾಷೆಗಳಲ್ಲಿ ಬಳಸಬಲ್ಲ ಭಾರತ್ ಜಿಪಿಟಿ ಅಭಿವೃದ್ಧಿ ಮಾಡಲಾಗುತ್ತಿದೆ. ಭಾರತ್ ಜಿಪಿಟಿಗೆ ಜಿಯೈ ಕೈಜೋಡಿಸಿದೆ. ವಿಶೇಷ ಅಂದರೆ ಇದೀಗ ಭಾರತ್ ಜಿಪಿಟಿ ಅಭಿವೃದ್ಧಿಗೆ ಬೆಂಗಳೂರಿನ ಎಸ್‌ಎಂಎಲ್ ಸಂಸ್ಥೆ ಹೂಡಿಕೆ ಮಾಡಿದೆ.
ಬೆಂಗಳೂರು ಮೂಲದ ಎಸ್‌ಎಂಎಲ್ ಪ್ರೈವೇಟ್ ಲಿಮಿಟೆಡ್ ಈಗ ಭಾರತ ಮತ್ತು ಬೃಹತ್ ಭಾಷಾ ಪ್ರತಿಷ್ಠಾನದ ಮಾದರಿಗಳ ರಚನೆಯಲ್ಲಿ ಕೆಲಸ ಮಾಡುತ್ತಿರುವ ಭಾರತ್‌ಜಿಪಿಟಿ ಒಕ್ಕೂಟದ ಸಂಶೋಧನೆಗೆ ಹೂಡಿಕೆ ಮಾಡಿದೆ. ಈ ನಿರ್ಧಾರ ಭಾರತದ ಆರ್ಟಿಫೀಶಿಯಲ್ ಇಂಟಿಲಿಜೆನ್ಸ್ ಕ್ಷೇತ್ರದ ಮಹತ್ವದ ಮೈಲಿಗಲ್ಲಾಗಿದೆ. ಭಾರತ ದೇಶದಲ್ಲಿರುವ ವಿಶಾಲವಾದ ಜನಸಂಖ್ಯೆಯ ಹೊರತಾಗಿಯೂ, ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪ್ರಾತಿನಿಧ್ಯವು ಕಡಿಮೆಯಾಗಿದೆ, ಇದು ಕಲಿಕೆ ಮತ್ತು ಸಂವಹನದ ಅಂತರವನ್ನು ಸೃಷ್ಟಿಸಿತ್ತು. ಭಾರತ್‌ಜಿಪಿಟಿಯ ಮೂಲಕ ನಾವು ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದ್ದೇವೆ. ಅತಿ ಶೀಘ್ರದಲ್ಲೇ ಭಾರತ್ ಜಿಪಿಟಿ ಒಕ್ಕೂಟದಿಂದ ಮೊದಲ ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು SML ಪ್ರೈವೇಟ್ ಲಿಮಿಟೆಡ್‌ನ ಸಿಇಇ ಡಾ. ವಿಷ್ಣುವರ್ಧನ್ ಹೇಳಿದ್ದಾರೆ.
ಡೀಪ್‌ಫೇಕ್ ಬಗ್ಗೆ ಪ್ರಧಾನಿ ಮೋದಿ ಕಳವಳ: ಕೃತಕ ಬುದ್ಧಿಮತ್ತೆಯ ದುರ್ಬಳಕೆ ಬಗ್ಗೆ ಅತಂಕ
ಭಾರತ್ ಜಿಪಿಟಿಯ ರಚನೆಯ ಹೊಣೆಯನ್ನು ಹೊಣೆಯನ್ನು ಹೊತ್ತಿರುವ ಐಐಟಿ ಬಾಂಬೆಯ ಪ್ರೊ.ಗಣೇಶ್ ರಾಮಕೃಷ್ಣನ್ ನೇತೃತ್ವದ ತಂಡದಲ್ಲಿ ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಹೈದರಾಬಾದ್, ಐಐಟಿ ಕಾನ್ಪುರ್, ಐಐಟಿ ಮಂಡಿ, ಐಐಟಿ ಹೈದರಾಬಾದ್, ಐಐಎಂ ಇಂದೋರ್ ಮತ್ತು ಭಾಷಿನಿ (ಮೀಟಿಯ ಅಂಗಸಂಸ್ಥೆ) ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ಶೈಕ್ಷಣಿಕ ಸದಸ್ಯರನ್ನು ಒಳಗೊಂಡಿದೆ. ಅಲ್ಲದೇ, ರಿಲಯನ್ಸ್ ಜಿಯೋ ಮತ್ತು ನ್ಯಾಸ್ಕಾಮ್ ಸಂಸ್ಥೆಗಳು ಈ ಒಕ್ಕೂಟದ ಜೊತೆ ಕೈಜೋಡಿಸಿವೆ.
ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಸಂಪೂರ್ಣ ಸಾಮರ್ಥ್ಯವನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಭಾರತ್‌ಜಿಪಿಟಿ ನೆರವಾಗಲಿದೆ. ಈ ಸಾರ್ವಜನಿಕ - ಖಾಸಗಿ ಸಹಭಾಗಿತ್ವವು (PPP) ಅಡಿಪಾಯ ಮಾದರಿಗಳು, ಸಂಭಾಷಣಾ ಏಜೆಂಟ್‌ಗಳು, ತಾಂತ್ರಿಕ ವಿಧಾನಗಳು, AI- ಆಧಾರಿತ ಅಪ್ಲಿಕೇಶನ್‌ಗಳು ಮತ್ತು ಡೇಟಾಸೆಟ್ ಸೇರಿದಂತೆ ವೈವಿಧ್ಯಮಯ ಆವಿಷ್ಕಾರಗಳು ದೇಶದಾದ್ಯಂತ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸಲು ನೆರವಾಗಲಿದೆ ಎಂದು ಐಐಟಿ ಬಾಂಬೆಯ ಪ್ರೊ. ಗಣೇಶ್ ರಾಮಕೃಷ್ಣನ್ ಹೇಳಿದ್ದಾರೆ.
ಡೇಂಜರಸ್ AI! ಯಾವ್ಯಾವ ದೇಶಗಳು ಚಾಟ್ ಜಿಪಿಟಿ ಬ್ಯಾನ್ ಮಾಡಿದೆ ನೋಡಿ..