F-16 ಫೈಟಿಂಗ್ ಫಾಲ್ಕನ್ ಒಂದು ಎಂಜಿನ್ ಹೊಂದಿರುವ ಅಮೇರಿಕನ್ ಬಹುಪಾತ್ರದ ಯುದ್ಧ ವಿಮಾನ. ಇದು ಮೊದಲ ಬಾರಿಗೆ ಜನವರಿ 1974 ರಲ್ಲಿ ಹಾರಾಟ ನಡೆಸಿತು. ಇದನ್ನು 28 ದೇಶಗಳು US ನಿಂದ ಖರೀದಿಸಿವೆ.
Kannada
BVR ಕ್ಷಿಪಣಿಗಳಿಂದ ಸಜ್ಜುಗೊಂಡಿದೆ F-16
F-16 ತನ್ನ ಕಾಲದ ಅತ್ಯಾಧುನಿಕ ಯುದ್ಧ ವಿಮಾನವಾಗಿತ್ತು. ವಾಯುಗಾಮಿ ರಾಡಾರ್ ಮತ್ತು BVR ಕ್ಷಿಪಣಿಗಳು ಇದನ್ನು ಉತ್ತಮ ಯುದ್ಧ ವಿಮಾನವನ್ನಾಗಿ ಮಾಡಿತು. ಪಾಕಿಸ್ತಾನ ಹಳೆಯ F-16 ಗಳನ್ನು ಹೊಂದಿದೆ.
Kannada
ದ್ವಿ ಎಂಜಿನ್‌ನ ಯುದ್ಧ ವಿಮಾನ ಸುಖೋಯ್ Su-30 MKI
ಸುಖೋಯ್ Su-30 MKI ಎರಡು ಎಂಜಿನ್ ಮತ್ತು ಎರಡು ಆಸನಗಳನ್ನು ಹೊಂದಿರುವ ಯುದ್ಧ ವಿಮಾನ. ಇದು ಬಹುಪಾತ್ರದ ಜೊತೆಗೆ ವಾಯು ಯುದ್ಧದಲ್ಲಿ ಅತ್ಯಂತ ಸಮರ್ಥವಾಗಿದೆ.
Kannada
ಭಾರತೀಯ ವಾಯುಪಡೆಯ ಪ್ರಮುಖ ಯುದ್ಧ ವಿಮಾನ ಸುಖೋಯ್
ಭಾರತೀಯ ವಾಯುಪಡೆಯಲ್ಲಿ 2002 ರಲ್ಲಿ ಮೊದಲ ಸುಖೋಯ್ ವಿಮಾನ ಸೇರ್ಪಡೆಯಾಯಿತು. ಇದನ್ನು ಭಾರತ ಸರ್ಕಾರದ ಕಂಪನಿ HAL ರಷ್ಯಾದಿಂದ ಪರವಾನಗಿ ಪಡೆದು ತಯಾರಿಸುತ್ತದೆ. ಸುಖೋಯ್ ಭಾರತೀಯ ವಾಯುಪಡೆಯ ಪ್ರಮುಖ ಯುದ್ಧ ವಿಮಾನ.
Kannada
ಬ್ರಹ್ಮೋಸ್ ಕ್ಷಿಪಣಿಯಿಂದ ಸಜ್ಜುಗೊಂಡಿದೆ ಸುಖೋಯ್
ಭಾರತೀಯ ವಾಯುಪಡೆಯಲ್ಲಿ ಸುಮಾರು 260 ಸುಖೋಯ್ ವಿಮಾನಗಳಿವೆ. ಇದನ್ನು 300 ಕಿ.ಮೀ. ವರೆಗೆ ಗಾಳಿಯಿಂದ ನೆಲಕ್ಕೆ ಹೊಡೆಯುವ ಬ್ರಹ್ಮೋಸ್ ಕ್ಷಿಪಣಿಯಿಂದ ಸಜ್ಜುಗೊಳಿಸಿ ಅತ್ಯಂತ ಅಪಾಯಕಾರಿಯನ್ನಾಗಿ ಮಾಡಲಾಗಿದೆ.
Kannada
ಸುಖೋಯ್‌ಗಿಂತ ಗಾತ್ರದಲ್ಲಿ ಚಿಕ್ಕದಾಗಿದೆ F-16
ಸುಖೋಯ್ 30 ವಿಮಾನ 21.935 ಮೀಟರ್ ಉದ್ದವಿದೆ. ಇದರ ರೆಕ್ಕೆಗಳ ವಿಸ್ತಾರ 14.7 ಮೀಟರ್. ಆದರೆ, F-16 ಜೆಟ್ 15.06 ಮೀಟರ್ ಉದ್ದವಿದೆ. ಇದರ ರೆಕ್ಕೆಗಳ ವಿಸ್ತಾರ 9.96 ಮೀಟರ್.
Kannada
F-16 ಗಿಂತ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗಿಸುತ್ತದೆ ಸುಖೋಯ್ 30
ಸುಖೋಯ್ 30 ರ ತೂಕ 18,400 ಕೆ.ಜಿ. ಆದರೆ, F-16 ರ ತೂಕ 8,573 ಕೆ.ಜಿ. ಸುಖೋಯ್ 8,130 ಕೆ.ಜಿ. ಮತ್ತು F-16 7,700 ಕೆ.ಜಿ. ಶಸ್ತ್ರಾಸ್ತ್ರಗಳನ್ನು ಹೊತ್ತು ಹಾರಬಲ್ಲದು.
Kannada
150 ಕಿ.ಮೀ. ವರೆಗೆ ನೋಡಬಲ್ಲದು F-16 ರ ರಾಡಾರ್
ಸುಖೋಯ್‌ನಲ್ಲಿ ಶಕ್ತಿಶಾಲಿ ರಾಡಾರ್ ಇದೆ. ಇದು 400 ಕಿ.ಮೀವರೆಗೆ ವೈಮಾನಿಕ ಅಪಾಯ ಹುಡುಕುತ್ತದೆ. ಇದು 200 ಕಿ.ಮೀ. ವರೆಗೆ ಇರುವ ಶತ್ರು ವಿಮಾನವನ್ನು ಪತ್ತೆ ಹಚ್ಚುತ್ತೆ. F-16 ರ ರಾಡಾರ್ 150 ಕಿ.ಮೀ. ವರೆಗೆ ಮಾತ್ರ
Kannada
F-16 AIM-120 ಕ್ಷಿಪಣಿಯನ್ನು ಹೊಂದಿದೆ
ವಾಯು ಯುದ್ಧಕ್ಕಾಗಿ F-16 AIM-120 AMRAAM ಅನ್ನು ಹೊಂದಿದೆ. ಇದರ ವ್ಯಾಪ್ತಿ 120 ಕಿ.ಮೀ. ಸುಖೋಯ್ 30 BVR ಕ್ಷಿಪಣಿ ಅಸ್ತ್ರದಿಂದ ಸಜ್ಜುಗೊಂಡಿದೆ. ಇದರ ವ್ಯಾಪ್ತಿ 110-160 ಕಿ.ಮೀ.