ಸೀವುಲ್ಫ್ ಸಬ್‌ಮೆರೀನ್ ಅನ್ನು ಅಮೆರಿಕಾ ತಯಾರಿಸಿದೆ. ರಷ್ಯಾಕ್ಕೆ ಸೇರಿದ ಟೈಫೂನ್, ಅಕುಲಾ ಸಬ್‌ಮೆರೀನ್‌ಗೆ ಪೈಪೋಟಿಯಾಗಿ ಇದನ್ನು ತಯಾರಿಸಿದ್ದಾರೆ. ಅವು ದಾಳಿ ಮಾಡಿದರೂ ಸೀವುಲ್ಫ್‌ಗೆ ಏನೂ ಆಗುವುದಿಲ್ಲ.
ವಿರ್ಜಿನಿಯಾ
ವಿರ್ಜಿನಿಯಾ ಸಬ್‌ಮೆರೀನ್ ಅನ್ನು ಕೂಡ ಅಮೆರಿಕಾ ತಯಾರಿಸಿದೆ. ಇದು ಅಣುಶಕ್ತಿಯಿಂದ ಕೆಲಸ ಮಾಡುತ್ತದೆ. ಇದು ಮಾರ್ಕ್ 48 ಟಾರ್ಪಿಡೊಗಳು, UGM-109 ನಂತಹ ಕ್ಷಿಪಣಿಗಳನ್ನು ಪ್ರಯೋಗಿಸಲು ರೂಪಿಸಲಾಗಿದೆ.
ಯಾಸೆನ್
ರಷ್ಯಾ ತಯಾರಿಸಿದ ಯಾಸೆನ್ ಸಬ್‌ಮೆರೀನ್ ಅಣುಶಕ್ತಿಯಿಂದ ನಡೆಯುವುದು. ಇದು ಒಂದೇ ಬಾರಿಗೆ 24 ನೌಕಾ ಕ್ಷಿಪಣಿಗಳನ್ನು ತೆಗೆದುಕೊಂಡು ಹೋಗಬಲ್ಲದು.
ಸಿಯೆರ್ರಾ
ರಷ್ಯನ್ ನೇವಿಗೆ ಸೇರಿದ ಸಿಯೆರ್ರಾ ಸಬ್ ಮೆರೈನ್ ಕೂಡ ಅಣುಶಕ್ತಿಯಿಂದ ಕೆಲಸ ಮಾಡುತ್ತದೆ. ಇದು ಗರಿಷ್ಠವಾಗಿ 750 ಮೀಟರ್ ಆಳದವರೆಗೆ ಹೋಗಿ ಪ್ರಯಾಣಿಸಬಲ್ಲದು.
ಲಾಸ್ ಏಂಜಲೀಸ್
ಲಾಸ್ ಏಂಜಲೀಸ್ ಸಬ್ ಮೆರೈನ್ ಅನ್ನು ಅಮೆರಿಕನ್ ನೇವಿ ಉಪಯೋಗಿಸುತ್ತದೆ. ಇದು ಕೂಡ ಅಣುಶಕ್ತಿಯಿಂದ ನಡೆಯುತ್ತದೆ. ಇದನ್ನು ಯುದ್ಧ ವಿಮಾನಗಳಿಗಾಗಿ ತಯಾರಿಸಿದ್ದಾರೆ.
ಅಕುಲಾ
ಅಟಾಮಿಕ್ ಪವರ್‌ನಿಂದ ಕೆಲಸ ಮಾಡುವ ಅಕುಲಾ ಸಬ್ ಮೆರೈನ್ ಅನ್ನು ರಷ್ಯಾ ತಯಾರಿಸಿದೆ. ಇದನ್ನು ಮೊದಲ ಬಾರಿಗೆ 1986ರಲ್ಲಿ ಉಪಯೋಗಿಸಿದರು.
ಸೋರ್ಯು
ಸೋರ್ಯು ಸಬ್ ಮೆರೈನ್ ಡೀಸೆಲ್, ಎಲೆಕ್ಟ್ರಿಕ್ ಶಕ್ತಿಯಿಂದ ಕೆಲಸ ಮಾಡುತ್ತದೆ. ಇದು ಜಪಾನ್‌ಗೆ ಸೇರಿದ ಮೊದಲ ಏರ್ ಫ್ರೀ ಸಬ್ ಮೆರೈನ್.