ಸರಳತೆಗೆ ಸುಧಾ ಮೂರ್ತಿ ಹೆಸರುವಾಸಿ. ಅನಾವಶ್ಯಕ ಖರ್ಚುಗಳನ್ನು ಅವರು ಮಾಡೋದಿಲ್ಲ.ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ತಮ್ಮ ಮದುವೆ ಕೂಡ ಅವರು ಇಷ್ಟು ಸಿಂಪಲ್ ಆಗಿ ಮಾಡ್ಕೊಂಡಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು.
women Jan 21 2025
Author: Ravi Janekal Image Credits:X
Kannada
ಕುಂಭಮೇಳದಲ್ಲಿ ಸುಧಾ ಮೂರ್ತಿ
ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಬಂದಿದ್ದಾರೆ. ಅಲ್ಲಿ ಮೂರು ದಿನಗಳ ಕಾಲ ತಂಗಲಿದ್ದಾರೆ.
Kannada
ಸುಧಾ ಮೂರ್ತಿಯವರ ಸರಳತೆ
ಒಂದು ಅಂದಾಜಿನ ಪ್ರಕಾರ 37 ಸಾವಿರ ಕೋಟಿ ಒಡತಿಯಾಗಿದ್ರೂ ಸುಧಾ ಮೂರ್ತಿ ಒಂದು ಸಣ್ಣ ಚೀಲದೊಂದಿಗೆ ಕುಂಭಮೇಳಕ್ಕೆ ಬಂದಿದ್ದಾರೆ. ಅವರ ಸರಳತೆ ಅಚ್ಚರಿ ಮೂಡಿಸುತ್ತದೆ.
Kannada
ರಾಜ್ಯಸಭಾ ಸದಸ್ಯೆ
ದೊಡ್ಡ ಶ್ರೀಮಂತರಾಗಿ ಮಾತ್ರವಲ್ಲದೆ ರಾಜ್ಯಸಭಾ ಸದಸ್ಯೆಯೂ ಆಗಿರುವ ಸುಧಾ ಮೂರ್ತಿಯವರ ಸರಳತೆ ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡುತ್ತದೆ.
Kannada
ನಾರಾಯಣ ಮೂರ್ತಿಯವರ ಆಸ್ತಿ ಮೌಲ್ಯ
ಫೋರ್ಬ್ಸ್ ಪ್ರಕಾರ, ನಾರಾಯಣ ಮೂರ್ತಿಯವರ ಆಸ್ತಿ ಮೌಲ್ಯ ಗಣನೀಯವಾಗಿದೆ. ಅವರ ಕಂಪನಿ ಇನ್ಫೋಸಿಸ್, 7 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
Kannada
ಸುಧಾ ಮೂರ್ತಿಯವರ ಆಸ್ತಿ
ಸುಧಾ ಮೂರ್ತಿ 800 ಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದರೂ, 30 ವರ್ಷಗಳಲ್ಲಿ ಅವರು ಒಂದು ಹೊಸ ಸೀರೆಯನ್ನು ಖರೀದಿಸಿಲ್ಲವಂತೆ.
Kannada
ಸೀರೆ ಖರೀದಿಸದಿರುವುದೇಕೆ?
ಕಾಶಿ ಯಾತ್ರೆಯ ಸಮಯದಲ್ಲಿ, ತನಗೆ ತುಂಬಾ ಇಷ್ಟವಾದ ಒಂದು ವಿಷಯವನ್ನು ತ್ಯಜಿಸಲು ನಿರ್ಧರಿಸಿದರು. ಅದರಂತೆ ಶಾಪಿಂಗ್ ಮಾಡುವುದನ್ನು ಬಿಟ್ಟ ಕಾರಣ ಹೊಸ ಸೀರೆ ಖರೀದಿಸಿಲ್ಲ.
Kannada
ಸರಳ ಸೀರೆಗಳು
ಸುಧಾ ಮೂರ್ತಿಯವರ ಸರಳ ಸೀರೆಯನ್ನೇ ಧರಿಸುತ್ತಾರೆ. ಸ್ನೇಹಿತರು, ಕುಟುಂಬದವರು ಮತ್ತು ದತ್ತಿ ಸಂಸ್ಥೆಗಳು ನೀಡುವ ಸೀರೆಗಳನ್ನೇ ಉಟ್ಟುಕೊಳ್ಳುತ್ತಾರೆ.