ಮಕ್ಕಳ ಕೈನಿಂದ ವಸ್ತುಗಳು ಬೀಳುವುದು ಅಥವಾ ಒಡೆಯುವುದು ಸಾಮಾನ್ಯ. ಈ ವೇಳೆ ಅವರನ್ನು ಬೈಯ್ಯುವ ಬದಲು ವಸ್ತುಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಅವರಿಗೆ ತಿಳಿಸಿಕೊಡಿ
Kannada
ಕಡಿಮೆ ಅಂಕ ಬಂದಾಗ
ಕಡಿಮೆ ಅಂಕ ಬರುವುದಕ್ಕೆ ವಿಷಯ ಅರ್ಥವಾಗದಿರುವುದು ಅಥವಾ ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಮುಂತಾದ ಹಲವು ಕಾರಣಗಳಿರಬಹುದು. ಅವರಿಗೆ ಗದರುವ ಬದಲು ಉತ್ತಮ ಅಧ್ಯಯನ ವಿಧಾನಗಳನ್ನು ಕಲಿಸಿಸಹಾಯ ಮಾಡಿ.
Kannada
ಮಾತು ಕೇಳದಿರುವುದು
ಮಕ್ಕಳು ಕೆಲವೊಮ್ಮೆ ನಿಮ್ಮ ಮಾತನ್ನು ಕೇಳುವುದಿಲ್ಲ. ಈ ವೇಳೆ ಅವರನ್ನು ಬೈಯುವ ಬದಲು ಅವರಿಗೆ ತಿಳಿ ಹೇಳಿ ಸಕಾರಾತ್ಮಕ ಪ್ರೋತ್ಸಾಹದೊಂದಿಗೆ ಆದೇಶಗಳನ್ನು ಪಾಲಿಸುವ ಮಹತ್ವವನ್ನು ತಿಳಿಸಿ.
Kannada
ಅಗೌರವದ ವರ್ತನೆ
ಮಕ್ಕಳಲ್ಲಿ ಅಗೌರವದ ವರ್ತನೆ ಒಂದು ಹಂತ ಅಥವಾ ಸಮಸ್ಯೆಯ ಸೂಚನೆಯಾಗಿರಬಹುದು. ಗೌರವದ ಮಹತ್ವದ ಬಗ್ಗೆ ಚರ್ಚಿಸಿ ಮತ್ತು ನೀವೇ ಗೌರವಯುತ ವರ್ತನೆಗೆ ಮಾದರಿಯಾಗಿರಿ.
Kannada
ಸುಳ್ಳು ಹೇಳುವುದು
ಮಕ್ಕಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಥವಾ ಮಿತಿಗಳನ್ನು ಪರೀಕ್ಷಿಸಲು ಸುಳ್ಳು ಹೇಳುತ್ತಾರೆ. ಶಾಂತವಾಗಿ ಪ್ರಾಮಾಣಿಕತೆಯ ಮಹತ್ವವನ್ನು ಮತ್ತು ಸುಳ್ಳಿನ ಪರಿಣಾಮಗಳನ್ನು ಅವರಿಗೆ ತಿಳಿಸಿ
Kannada
ಕೊಠಡಿ ಗಬ್ಬೆಬ್ಬಿಸುವುದು
ಕೊಠಡಿ ಅಶುಚಿಯಾಗಿ ಇಡುವುದು ಸ್ವಾತಂತ್ರ್ಯ ಮತ್ತು ತಮ್ಮ ಸ್ಥಳದ ಮೇಲೆ ನಿಯಂತ್ರಣದ ಬಯಕೆಯನ್ನು ತೋರಿಸುತ್ತದೆ. ಮಕ್ಕಳಿಗೆ ಶುಚಿತ್ವ ಕಾಪಾಡುವ ವಿಧಾನಗಳನ್ನು ಕಲಿಸಿ, ಬೈಯ್ಯಬೇಡಿ.
Kannada
ಸಹೋದರರ ಜಗಳ
ಸಹೋದರರ ಜಗಳ ಸಾಮಾನ್ಯ. ಸಮಸ್ಯೆ ಪರಿಹರಿಸುವುದು, ಸಹಕರಿಸುವುದು ಮತ್ತು ಸಮಾಧಾನ ಮಾಡಿಕೊಳ್ಳುವುದನ್ನು ಕಲಿಸಿ. ಯಾರ ಪರವೂ ವಹಿಸಬೇಡಿ ಅಥವಾ ಕಠಿಣ ಶಿಕ್ಷೆ ನೀಡಬೇಡಿ.