Woman

ಮೇಕಪ್ ಬ್ಯಾಗ್‌ಗಳನ್ನು ಬಳಸಿ, ಅಚ್ಚುಕಟ್ಟಾಗಿಡಿ

ವಿವಿಧ ಮೇಕಪ್ ಬ್ಯಾಗ್‌ಗಳನ್ನು ಖರೀದಿಸಿ

ಡ್ರೆಸ್ಸಿಂಗ್ ಟೇಬಲ್ ಮೇಲೆ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿರುವ ಮೇಕಪ್ ವಸ್ತುಗಳು ನೋಡಲು ಚೆನ್ನಾಗಿ ಕಾಣುವುದಿಲ್ಲ ಮತ್ತು ಮೇಕಪ್ ಮಾಡುವಾಗ ವಸ್ತುಗಳು ಸಿಗುವುದಿಲ್ಲ. ಮೇಕಪ್ ಬ್ಯಾಗ್ ಇರುವುದು ಬಹಳ ಮುಖ್ಯ.

ವೆಲ್ವೆಟ್ ಮೇಕಪ್ ಬ್ಯಾಗ್

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾಸ್ಮೆಟಿಕ್ ಬ್ಯಾಗ್‌ಗಳು ಅಥವಾ ಮೇಕಪ್ ಪೌಚ್‌ಗಳು ಲಭ್ಯವಿದೆ. ನೀವು ವೆಲ್ವೆಟ್ ಮೇಕಪ್ ಬ್ಯಾಗ್ ತೆಗೆದುಕೊಳ್ಳಬಹುದು. ಇದರಲ್ಲಿ ನೀವು ಮೇಕಪ್ ಉತ್ಪನ್ನಗಳನ್ನು ಸುಲಭವಾಗಿ ಇಡಬಹುದು.

ಕಾಸ್ಮೆಟಿಕ್ ಆರ್ಗನೈಸರ್ ಪೌಚ್

ಕಾಸ್ಮೆಟಿಕ್ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಇಡಲು ಬಯಸಿದರೆ, ಕಾಸ್ಮೆಟಿಕ್ ಆರ್ಗನೈಸರ್ ಪೌಚ್ ಖರೀದಿಸಿ. ಇದರಲ್ಲಿ ನೀವು ಸುಲಭವಾಗಿ ಮೇಕಪ್ ಬ್ರಷ್, ಮಸ್ಕರಾ, ಐಶ್ಯಾಡೋ ಇತ್ಯಾದಿಗಳನ್ನು ಜೋಡಿಸಿ ಪ್ಯಾಕ್ ಮಾಡಬಹುದು.

ಸೀಕ್ವಿನ್ ಮೇಕಪ್ ಬ್ಯಾಗ್

ಪ್ರಯಾಣ ಮಾಡುತ್ತಿದ್ದರೆ, ನಿಮ್ಮ ಬಳಿ ಸ್ಟೈಲಿಶ್ ಮೇಕಪ್ ಬ್ಯಾಗ್ ಇರಬೇಕು. ಸಣ್ಣ ಮತ್ತು ಸೀಕ್ವಿನ್ ವರ್ಕ್ ಇರುವ ವರ್ಣರಂಜಿತ ಮೇಕಪ್ ಬ್ಯಾಗ್ ಅನ್ನು ನೀವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

ಪಾರದರ್ಶಕ ಹಾರ್ಟ್ ಪ್ರಿಂಟ್ ಮೇಕಪ್ ಬ್ಯಾಗ್

ಮೇಕಪ್ ಬ್ಯಾಗ್ ಖರೀದಿಸಲು  ಹಣ ಖರ್ಚು ಮಾಡಲು ಬಯಸದಿದ್ದರೆ, ಕಡಿಮೆ ಬಜೆಟ್‌ನ ಪಾರದರ್ಶಕ  ಪ್ಲಾಸ್ಟಿಕ್ ಮೇಕಪ್ ಬ್ಯಾಗ್ ಅನ್ನು ಸಹ ಖರೀದಿಸಬಹುದು. ಇದರಲ್ಲಿ ನಿಮಗೆ ಹೊರಗಿನಿಂದಲೇ ಎಲ್ಲಾ ಮೇಕಪ್ ವಸ್ತುಗಳು ಕಾಣುತ್ತವೆ.

ಡಬಲ್ ಲೇಯರ್ ಮೇಕಪ್ ಬ್ಯಾಗ್

ಹೆಚ್ಚು ಮೇಕಪ್ ವಸ್ತುಗಳಿದ್ದರೆ, ಡಬಲ್ ಲೇಯರ್ ಮೇಕಪ್ ಬ್ಯಾಗ್ ಖರೀದಿಸಿ. ನಿಮಗೆ ಎರಡು ಪ್ರತ್ಯೇಕ ಆರ್ಗನೈಸರ್‌ಗಳು ಸಿಗುತ್ತವೆ, ಇದರಲ್ಲಿ ಹೆಚ್ಚಿನ ವಸ್ತುಗಳನ್ನು ಇಡಬಹುದು.

ಚಳಿಗಾಲದಲ್ಲಿ ಕೂದಲಿಗೆ ಹೆನ್ನಾ/ಮೆಹಂದಿ ಹಚ್ಚುವ ಮೊದಲು ಈ 5 ವಿಚಾರ ಗಮನದಲ್ಲಿರಲಿ

ಸ್ಟೈಲಿಶ್ ಆಗಿ ಕಾಣಲು ಪ್ರತಿ ಮಹಿಳೆಯರೂ ಹೊಂದಿರಲೇಕು ಈ 7 ವಿಧದ ಪೆಟಿಕೋಟ್‌ಗಳು

ಮಗಳಿಗಾಗಿ ಇಲ್ಲಿದೆ ಲೆಟೇಸ್ಟ್ ಡಿಸೈನ್‌ನ ಚಿನ್ನದ ಕಿವಿಯೋಲೆಗಳು

10 ನಿಮಿಷಗಳಲ್ಲಿ ರೆಡಿ ಮಾಡಬಹುದಾದ ಟೇಸ್ಟಿ ಮೊಟ್ಟೆ ಫ್ರೈ ರೆಸಿಪಿ