ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ ಅನನ್ಯಾ, ಸ್ವತಂತ್ರ ಮೈಕ್ರೋಫಿನ್ ಮತ್ತು ಎಂಪವರ್ ಸಂಸ್ಥಾಪಕಿ. ಈ ವರ್ಷ ರಾಷ್ಟ್ರೀಯ ಮಟ್ಟದ ಸೌಂದರ್ಯ-ವೈಯಕ್ತಿಕ ಆರೈಕೆ ಬ್ರ್ಯಾಂಡ್ ಪ್ರಾರಂಭಿಸಲಿದ್ದಾರೆ.
Kannada
40 ವರ್ಷದೊಳಗಿನ ಯುವ ಉದ್ಯಮಿ
ನೀತಾ ಅಂಬಾನಿ ಇತ್ತೀಚೆಗೆ 40 ವರ್ಷದೊಳಗಿನ ಯುವ ಉದ್ಯಮಿಗಳ ಪಟ್ಟಿಯಲ್ಲಿರುವ ಅನನ್ಯಾ ಬಿರ್ಲಾ ಅವರನ್ನು ಯುವ ಉದ್ಯಮಿ ಪ್ರಶಸ್ತಿಯಿಂದ ಸನ್ಮಾನಿಸಿದರು. ಅನನ್ಯಾ ತನ್ನ ತಂದೆಯ ವ್ಯವಹಾರವನ್ನೂ ನೋಡಿಕೊಳ್ಳುತ್ತಾರೆ.
Kannada
ಸಂಗೀತದಿಂದ ಆರಂಭ, ವ್ಯವಹಾರದಲ್ಲಿ ಛಾಪು
ಅನನ್ಯಾ ಬಿರ್ಲಾ ತಮ್ಮ ವೃತ್ತಿಜೀವನವನ್ನು ಸಂಗೀತದಿಂದ ಆರಂಭಿಸಿದರು.ಹಲವು ಕಾರ್ಯಕ್ರಮ ನೀಡಿದ್ದಾರೆ. ಆದರೆ ತಂದೆಯ ವ್ಯವಹಾರವನ್ನು ಮುಂದುವರಿಸಲು ಸಂಗೀತವನ್ನು ತೊರೆದು ವ್ಯಾಪಾರ ಜಗತ್ತಿಗೆ ಬಂದರು.
Kannada
ಅನನ್ಯಾ ಬಿರ್ಲಾ ಅವರ ಶಿಕ್ಷಣ
ಅನನ್ಯಾ ಯುಕೆಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್‌ನ ಗ್ರಾಸಿಮ್ ಇಂಡಸ್ಟ್ರೀಸ್‌ನಲ್ಲಿ ಮಂಡಳಿ ನಿರ್ದೇಶಕಿಯಾಗಿದ್ದಾರೆ.
Kannada
ದೇಶದ ಅತ್ಯಂತ ಶ್ರೀಮಂತ ಪುತ್ರಿಯರಲ್ಲಿ ಒಬ್ಬರು
ಅನನ್ಯಾ ಬಿರ್ಲಾ ಅತ್ಯಂತ ಶ್ರೀಮಂತ ಪುತ್ರಿಯರಲ್ಲಿ ಒಬ್ಬರು. ಫೋರ್ಬ್ಸ್ ಪ್ರಕಾರ ತಂದೆ ಕುಮಾರ್ ಮಂಗಳಂ ಬಿರ್ಲಾ ನಿವ್ವಳ ಮೌಲ್ಯ 21.4 ಬಿಲಿಯನ್ ಡಾಲರ್. ವಿಶ್ವದ 92 ನೇ ಮತ್ತು ಭಾರತದ 7ನೇ ಅತ್ಯಂತ ಶ್ರೀಮಂತ
Kannada
ಅನನ್ಯಾ ಬಿರ್ಲಾ ಎಷ್ಟು ಶ್ರೀಮಂತರು?
ಅನನ್ಯಾ ವಯಸ್ಸು ಸುಮಾರು 30. ನಿವ್ವಳ ಮೌಲ್ಯ ಸುಮಾರು 1.75 ಲಕ್ಷ ಕೋಟಿ ರೂಪಾಯಿ. ಬಾಲಿವುಡ್ ಶಾದಿ ಡಾಟ್ ಕಾಮ್ ಪ್ರಕಾರ, ಅನನ್ಯಾ 1,77,864 ಕೋಟಿ ರೂ ಆಸ್ತಿ ಹೊಂದಿದ್ದರೆ
Kannada
ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳು
ಅನನ್ಯಾ ಬಿರ್ಲಾ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರ ಅವರಿಗೆ ಸುಮಾರು 8 ಲಕ್ಷ ಅನುಯಾಯಿಗಳಿದ್ದಾರೆ.