ಕೆಲದಿನಗಳ ಹಿಂದಷ್ಟೇ ವಿವಿಧ ಜಾತಿಯ ವಿಭಿನ್ನವಾದ 120 ಪ್ರಾಣಿಗಳನ್ನು ಬ್ಯಾಂಕಾಕ್‌ನಿಂದ ಭಾರತಕ್ಕೆ ಸಾಗಿಸುತ್ತಿದ್ದ ಇಬ್ಬರನ್ನು ಮುಂಬೈನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಚಾಕೋಲೇಟ್ ಬಾಕ್ಸ್‌ನಲ್ಲಿ ಸಾಗಿಸಲಾಗುತ್ತಿದ್ದ ಈ ಹಾವುಗಳು ಒಂದಕ್ಕಿಂತ ಒಂದು ಚೆಂದವಾಗಿದ್ದು, ಫೋಟೋಗಳು ಈಗ ವೈರಲ್ ಆಗಿವೆ. ಈ ಹಾವುಗಳನ್ನು ಹಳೇ ಬಟ್ಟೆಯಲ್ಲಿ ಸುತ್ತಿ ಚಾಕೋಲೇಟ್ ಬಾಕ್ಸ್‌ನಲ್ಲಿ ಸಾಗಿಸಲಾಗುತ್ತಿತ್ತು.
ಹೀಗೆ ಹಾವುಗಳನ್ನು ಸಾಗಿಸಿ ಬಂಧಿತನಾದವನನ್ನು ಗುಡ್‌ಮನ್ ಲಿನ್‌ಫೋರ್ಡ್ ಲಿಯೋ ಎಂದು ಗುರುತಿಸಲಾಗಿದೆ. ವಿವಿಧ ಜಾತಿಯ 120 ಜೀವಂತ ಹಾವುಗಳು ಇವರ ಚೀಲದಲ್ಲಿ ಇದ್ದವು.
ಆರೋಪಿ ಹಣ ಮಾಡುವ ಉದ್ದೇಶದಿಂದ ಹಣ ಹೀಗೆ ವನ್ಯಜೀವಿಗಳನ್ನು ಕಳ್ಳಸಾಗಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇವುಗಳ ಮಾರಾಟದಿಂದ ಅವರಿಗೆ ಲಕ್ಷಾಂತರ ರೂ ಹಣ ಸಿಗುತ್ತಿತ್ತು
ಬ್ಯಾಂಕಾಕ್‌ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿದ ಪ್ರಾಣಿಗಳಲ್ಲಿಇಗುವಾನಾಗಳು, ಸುಮಾತ್ರನ್ ಪಟ್ಟೆ ಮೊಲಗಳು ಬೆಸಿಲಿಸ್ಕ್ ಹಲ್ಲಿಗಳು, ಮತ್ತು ಕಸ್ಕಸ್ ಹಾಗೂ ವಿವಿಧ ಜಾತಿಯ ಬಣ್ಣದ ಹಾವುಗಳು ಸೇರಿವೆ.