ಹೊಸ ನಿವೇಶನದಲ್ಲಿ ಮನೆ ಕಟ್ಟುವ ಮುನ್ನ ಈ ವಾಸ್ತು ಸಲಹೆ ಪಾಲಿಸಿ
ಮನೆ ನಿರ್ಮಾಣಕ್ಕೂ ಮುನ್ನ ಹೊಸ ನಿವೇಶನ ಖರೀದಿಸುವಾಗಲೂ ಮನೆ ಕಟ್ಟುವಾಗಲೂ ಕೆಲವು ವಾಸ್ತು ಸಲಹೆಗಳನ್ನು ಪಾಲಿಸಬೇಕಾಗುತ್ತೆ. ಅವು ಯಾವೆಂದು ಇಲ್ಲಿ ತಿಳಿಯೋಣ.
Kannada
ಭೂಮಿಯಿಂದ ಅನುಮತಿ ಪಡೆಯುವುದು
ಹೊಸ ಭೂಮಿಯಲ್ಲಿ ಕೆಲಸ ಪ್ರಾರಂಭಿಸುವ ಮೊದಲು, ಆ ಭೂಮಿಯಿಂದ ಅನುಮತಿ ಪಡೆಯುವುದು ಅಗತ್ಯ. ಈ ಹೆಜ್ಜೆಯು ಭೂಮಿಯ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸಲು ಮತ್ತು ಅಲ್ಲಿ ವಾಸಿಸಲು ಕೆಲಸ ಮಾಡಲು ಅನುಮೋದನೆ ಪಡೆಯುವ ಸಂಕೇತ.
Kannada
ತೆಂಗಿನಕಾಯಿ ಅಥವಾ ಹಣ್ಣಿನ ಬಳಕೆ
ಕೈಯಲ್ಲಿ ತೆಂಗಿನಕಾಯಿ ಅಥವಾ ಹಣ್ಣನ್ನು ಹಿಡಿದು ಭೂಮಿಯ ಪ್ರದಕ್ಷಿಣೆ ಹಾಕಬೇಕು. ಆ ಭೂಮಿಯ ಶಕ್ತಿಯನ್ನು ಹೀರಿಕೊಳ್ಳುವ ಮಾಧ್ಯಮವೆಂದು ಪರಿಗಣಿಸಲಾಗುತ್ತದೆ, ಇದರಿಂದಾಗಿ ಅಲ್ಲಿನ ಯಾವುದೇ ನಕಾರಾತ್ಮಕತೆ ದೂರವಾಗುತ್ತದೆ.
Kannada
ಭೂಮಿಗೆ ನಿಮ್ಮ ಉದ್ದೇಶ ತಿಳಿಸಿ
ಪ್ರದಕ್ಷಿಣೆ ಹಾಕುವಾಗ, ನೀವು ಅಲ್ಲಿ ಯಾವ ಕೆಲಸವನ್ನು ಮಾಡಲಿದ್ದೀರಿ, ಉದಾಹರಣೆಗೆ ಮನೆ ನಿರ್ಮಾಣ ಅಥವಾ ವ್ಯಾಪಾರ ಸ್ಥಾಪನೆ ಎಂದು ಭೂಮಿಗೆ ತಿಳಿಸಿ. ಈ ಪ್ರಕ್ರಿಯೆಯು ಭೂಮಿಯೊಂದಿಗೆ ನಿಮ್ಮ ಶಕ್ತಿಯ ಸಂಪರ್ಕವಾಗುತ್ತೆ.
Kannada
ಶಕ್ತಿಯನ್ನು ವರ್ಗಾಯಿಸುವುದು
ಭೂಮಿಯ ಶಕ್ತಿ ತೆಂಗಿನಕಾಯಿಗೆ ವರ್ಗಾಯಿಸುವ ಉದ್ದೇಶ, ಅಲ್ಲಿ ಯಾವುದೇ ಅಡೆತಡೆಗಳು ಅಥವಾ ನಕಾರಾತ್ಮಕ ಪರಿಣಾಮಗಳು ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದಾಗಿದೆ. ಈ ಪ್ರಕ್ರಿಯೆಯನ್ನು ಭೂಮಿಯನ್ನು ಶುದ್ಧಗೊಳಿಸುತ್ತೆ
Kannada
ಪ್ರದಕ್ಷಿಣೆಯ ನಂತರ ಹಣ್ಣು ಅಥವಾ ತೆಂಗಿನಕಾಯಿ?
ಪ್ರದಕ್ಷಿಣೆಯ ನಂತರ ಆ ತೆಂಗಿನಕಾಯಿ ಅಥವಾ ಹಣ್ಣನ್ನು ಯಾವುದಾದರೂ ದೇವಸ್ಥಾನಕ್ಕೆ ಅರ್ಪಿಸಿ ಅಥವಾ ನದಿಯಲ್ಲಿ ಬಿಡಿ. ಹಾಗೆ ಮಾಡುವುದರಿಂದ ಭೂಮಿಯ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ.
Kannada
ಎಲ್ಲಾ ಕೆಲಸಗಳು ಅಡೆತಡೆಯಿಲ್ಲದೆ ಪೂರ್ಣಗೊಳ್ಳುವ ನಂಬಿಕೆ
ಈ ಪರಿಹಾರವು ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಮಾನಸಿಕ ಶಾಂತಿಯನ್ನು ನೀಡುತ್ತದೆ, ಆದರೆ ವಾಸ್ತು ಪ್ರಕಾರ, ಈ ಪ್ರಕ್ರಿಯೆಯು ಭವಿಷ್ಯದಲ್ಲಿ ಯಾವುದೇ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.