Kannada

ಫ್ರೆಂಚ್ ಓಪನ್ 2025

ಪುರುಷರ ಸಿಂಗಲ್ಸ್‌ನಲ್ಲಿ ಆಲ್ಕರಾಜ್ ಚಾಂಪಿಯನ್

Kannada

ಫ್ರೆಂಚ್ ಓಪನ್ ಟ್ರೋಫಿ ಉಳಿಸಿಕೊಂಡ ಆಲ್ಕರಾಜ್

ಸ್ಪೇನ್ ದೇಶದ ಆಲ್ಕರಾಜ್ ತಮ್ಮ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಯನ್ನು ಐದು ಸೆಟ್‌ಗಳಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸುವ ಮೂಲಕ ಯಶಸ್ವಿಯಾಗಿ ಉಳಿಸಿಕೊಂಡರು.

Image credits: Getty
Kannada

Records galore

ಆಲ್ಕರಾಜ್ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತಿದ್ದಂತೆಯೇ, ಭಾನುವಾರ ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಹಲವಾರು ದಾಖಲೆಗಳು ಮುರಿದವು. ಆ 8 ದಾಖಲೆಗಳು ಏನು ಎನ್ನುವುದನ್ನು ನೋಡೋಣ ಬನ್ನಿ

Image credits: Getty
Kannada

1. ಫೆಡರರ್ ಅವರಂತ ದಿಗ್ಗಜರ ಸಾಲಿಗೆ ಸೇರಿದ ಆಲ್ಕರಾಜ್

ಓಪನ್ ಯುಗದಲ್ಲಿ ಸತತವಾಗಿ ಐದು ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳನ್ನು ಗೆದ್ದ ರೋಜರ್ ಫೆಡರರ್ ನಂತರ ಎರಡನೇ ಆಟಗಾರ ಕಾರ್ಲೋಸ್ ಆಲ್ಕರಾಜ್

Image credits: Getty
Kannada

2. ಅತಿ ದೀರ್ಘಕಾಲ ನಡೆದ ಫ್ರೆಂಚ್ ಓಪನ್ ಫೈನಲ್

ಆಲ್ಕರಾಜ್ ಮತ್ತು ಸಿನ್ನರ್ ನಡುವಿನ ಫ್ರೆಂಚ್ ಓಪನ್ ಫೈನಲ್ ಪಂದ್ಯಾವಳಿಯ ಇತಿಹಾಸದಲ್ಲಿಯೇ ಅತಿ ಉದ್ದದ ಪಂದ್ಯವಾಗಿದೆ, ಏಕೆಂದರೆ ಈ ಬಿಗ್ ಫೈಟ್ 5 ಸೆಟ್ ಥ್ರಿಲ್ಲರ್ 5 ಗಂಟೆ 29 ನಿಮಿಷಗಳ ಕಾಲ ನಡೆಯಿತು.

Image credits: Getty
Kannada

3. ಐದು ಗ್ರ್ಯಾನ್‌ಸ್ಲಾಂ ಗೆದ್ದ ಮೂರನೇ ಅತಿಕಿರಿಯ ಟೆನಿಸಿಗ ಆಲ್ಕರಾಜ್

22 ನೇ ವಯಸ್ಸಿನಲ್ಲಿ, ಕಾರ್ಲೋಸ್ ಆಲ್ಕರಾಜ್ 5 ಗ್ರ್ಯಾನ್‌ ಸ್ಲಾಂ ಗೆದ್ದ 3ನೇ ಕಿರಿಯ ಆಟಗಾರರಾದರು. ರಾಫೆಲ್ ನಡಾಲ್ ಮತ್ತು ಸ್ವೀಡಿಷ್ ದಂತಕಥೆ ಬ್ಜೋರ್ನ್ ಬೋರ್ಗ್ ಅವರೊಂದಿಗೆ ಗಣ್ಯರ ಪಟ್ಟಿಗೆ ಸೇರಿದರು.

Image credits: Getty
Kannada

4. ಸಿನ್ನರ್ ಸತತ 30 ಸೆಟ್ ಗೆಲುವಿನ ನಾಗಾಲೋಟಕ್ಕೆ ಬಿತ್ತು ಬ್ರೇಕ್

ಸಿನ್ನರ್ ತಮ್ಮ ಪಂದ್ಯದಲ್ಲಿ ಅಲ್ಕರಾಜ್ ವಿರುದ್ಧ ಸೋಲುವ ಮೊದಲು ಸತತವಾಗಿ 31 ಗ್ರ್ಯಾನ್‌ ಸ್ಲಾಂ ಸೆಟ್‌ಗಳನ್ನು ಗೆದ್ದರು. ಓಪನ್ ಯುಗದಲ್ಲಿ ಫೆಡರರ್ (36), ನಡಾಲ್ (35) ಮತ್ತು ಮೆಕೆನ್ರೋ (35) ಮಾತ್ರ ದಾಖಲೆ ಇದೆ.

Image credits: Getty
Kannada

5. 19 ವರ್ಷದಲ್ಲಿ ರೋಲ್ಯಾಂಡ್‌ ಗ್ಯಾರೋಸ್ ಉಳಿಸಿಕೊಂಡ ಮೊದಲಿಗ

19 ವರ್ಷಗಳಲ್ಲಿ ರೋಲ್ಯಾಂಡ್ ಗ್ಯಾರೋಸ್ ಗೆಲುವನ್ನು ಉಳಿಸಿಕೊಂಡ ಮೊದಲ ಆಟಗಾರ ಕಾರ್ಲೋಸ್ ಆಲ್ಕರಾಜ್. 2006ರಲ್ಲಿ ರಾಫೆಲ್ ನಡಾಲ್ ಹಾಗೆ ಮಾಡಿದ ಕೊನೆಯ ಆಟಗಾರ.

Image credits: Getty
Kannada

6. ಬರೋಬ್ಬರಿ 49 ವರ್ಷಗಳಲ್ಲಿ ಫ್ರೆಂಚ್ ಓಪನ್ ಫೈನಲ್‌ಗೇರಿದ ಮೊದಲ ಇಟಲಿ ಆಟಗಾರ

1976 ರಲ್ಲಿ ಅಡ್ರಿಯಾನೊ ಪನಟ್ಟಾ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದ ನಂತರ ಫ್ರೆಂಚ್ ಓಪನ್‌ನಲ್ಲಿ ಆಡಿದ ಮೊದಲ ಇಟಾಲಿಯನ್ ಆಟಗಾರ ಯಾನಿಕ್ ಸಿನ್ನರ್.

Image credits: Getty
Kannada

7. ಕ್ಲೇ ಕೋರ್ಟ್‌ನಲ್ಲಿ ಮುಂದುವರೆದ ಆಲ್ಕರಾಜ್ ದಿಟ್ಟ ಪ್ರದರ್ಶನ

ಒಂದೇ ಋತುವಿನಲ್ಲಿ ಹಲವಾರು ATP ಮಾಸ್ಟರ್ಸ್ ಕ್ಲೇ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ವ್ಯಕ್ತಿ ಅಲ್ಕರಾಜ್. 22 ಗೆಲುವುಗಳೊಂದಿಗೆ 4 ಕ್ಲೇ ಪಂದ್ಯಾವಳಿಗಳಲ್ಲಿ 3 ಗೆದ್ದಿದ್ದಾರೆ.

Image credits: Getty
Kannada

8. 21ನೇ ಶತಮಾನದಲ್ಲಿ ಅತಿಹೆಚ್ಚು ಗ್ರ್ಯಾನ್‌ಸ್ಲಾಂ ಗೆದ್ದ ನಾಲ್ಕನೇ ಆಟಗಾರ

5 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳೊಂದಿಗೆ, ಕಾರ್ಲೋಸ್ ಅಲ್ಕರಾಜ್ ಈಗ 21 ನೇ ಶತಮಾನದಲ್ಲಿ 4ನೇ ಅತಿ ಹೆಚ್ಚು ಗ್ರ್ಯಾನ್‌ ಸ್ಲಾಮ್ ಗೆಲುವುಗಳನ್ನು ಹೊಂದಿದ್ದಾರೆ, ನಡಾಲ್, ಫೆಡರರ್ & ಜೊಕೊವಿಕ್ ಮೊದಲ 3 ಸ್ಥಾನದಲ್ಲಿದ್ದಾರೆ

Image credits: Getty

BCCI ಕಾಂಟ್ರ್ಯಾಕ್ಟ್‌ನಿಂದ ಕೆ ಎಲ್ ರಾಹುಲ್‌ಗೆ ಸಿಗುವ ಸಂಭಾವನೆ ಇಷ್ಟೊಂದಾ?

ಈ ಸುಂದರಿಗೆ ಶ್ರೇಯಸ್ ಅಯ್ಯರ್ ಮೇಲೆ ಹುಚ್ಚು ಪ್ರೀತಿ!

ಐಪಿಎಲ್ 2025ರಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ 5 ಆಟಗಾರರು

ಯಾವುದೇ ಸುಳಿವು ನೀಡದೆ 2025ರಲ್ಲಿ ನಿವೃತ್ತಿ ಘೋಷಿಸಿದ 10 ಖ್ಯಾತ ಕ್ರಿಕೆಟಿಗರಿವರು