Special

ನೀನು ನಿನ್ನೊಳಗೆ ಖೈದಿ

ಮಿಸ್ಟರಿ ಥ್ರಿಲ್ಲರ್ ಟೈಮ್ ಟ್ರಾವೆಲ್ ಬಗೆಗಿನ ಕಾದಂಬರಿ ಓದಬೇಕು ಅಂತಿದ್ದರೆ ಅನುಷ್ ಶೆಟ್ಟಿ ಬರೆದಿರುವ ಈ ಕೃತಿನ ಕಣ್ಣು ಮುಚ್ಚಿಕೊಂಡು ಯಾವುದೇ ಸಂದೇಹ ಇಲ್ಲದೆ ಓದಬಹುದು.

Image credits: our own

ಜುಗಾರಿ ಕ್ರಾಸ್‌

ಪೂಚಂತೆ ಬರೆದ ಜುಗಾರಿ ಕ್ರಾಸ್ ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ. ಎಷ್ಟು ಬಾರಿ ಓದಿದರೂ ಬೋರ್‌ ಆಗದ ಥ್ರಿಲ್ಲರ್‌.

Image credits: our own

ರುದ್ರಪ್ರಯಾಗದ ಭಯಾನಕ ನರಭಕ್ಷಕ ಚಿರತೆ

ರುದ್ರಪ್ರಯಾಗದ ನರಭಕ್ಷಕ ಚಿರತೆಯ ಕಥೆಯ ಹಿನ್ನೆಲೆ ಮಾಹಿತಿ ಮತ್ತು ಸಂದರ್ಭವನ್ನು ಒದಗಿಸುತ್ತದೆ, ಪೂಚಂತೆ ಬರೆದಿರುವ ಮತ್ತೊಂದು ಥ್ರಿಲ್ಲರ್‌.

Image credits: our own

ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ

ತನಿಖೆಯ ಆಧಾರಿತ ಪುಸ್ತಕ. ಪೊಲೀಸ್‌ ತನಿಖೆಯ ಥ್ರಿಲ್ಲರ್‌ ಅಂಶಗಳಿರುವ ಪುಸ್ತಕ. ಕೆದಂಬಾಡಿ ಜತ್ತಪ್ಪರೈ ಅನುವಾದ ಮಾಡಿದ ಕೃತಿ.

Image credits: our own

ಹುಲಿ ಪತ್ರಿಕೆ 1, 2

ಚಿಕ್ಕ ಮತ್ತು ವೇಗವಾಗಿ ಕಥೆ ಸಾಗೋದರಿಂದ ಒಂದೇ ಗುಟುಕಿಗೆ ಓದಿಸಿಕೊಂಡು ಹೋಗುತ್ತದೆ. ಮೊದಲ ಭಾಗಕಿಂತ ಎರಡನೆಯ ಭಾಗ ತುಸು ನಿಧಾನ ಅನಿಸಬಹುದು. ಆದರೆ, ಮೊದಲ ಬುಕ್‌ ಓದದೇ, 2ನೇ ಬುಕ್‌ ಓದಿದರೆ ಅರ್ಥವಾಗೋದಿಲ್ಲ.

Image credits: our own

ಚಿದಂಬರ ರಹಸ್ಯ

ತಿಳಿ ಹಾಸ್ಯದ ಸಂಭಾಷಣೆ, ಕತೆಯ ರಹಸ್ಯ ರೋಚಕತೆ ಸಾಧಾರಣ ಇತರ ಥ್ರಿಲ್ಲರ್ ಕಾದಂಬರಿಗಳಿಗಿಂತ ವಿಶಿಷ್ಟವಾಗಿ ಸಾಗೋದು ಚಿದಂಬರ ರಹಸ್ಯ. ಮಡಿ ಮೈಲಿಗೆಯಿಲ್ಲದ ಪೂಚಂತೆ ಬರವಣಿಗೆ ಶೈಲಿ ಇಷ್ಟವಾಗುತ್ತದೆ.

Image credits: our own

ಈಡೊಂದು ಹುಲಿಯೆರಡು

ಬರೀ ಬೇಟೆಯ ಕ್ರೌರ್ಯದ ರಕ್ತರಂಜಿತ ಕಥೆ ಇದರಲ್ಲಿಲ್ಲ. ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ ಈ ಥ್ರಿಲ್ಲರ್‌ನ ಭಾಗವಾಗಿದೆ. ಕೆದಂಬಾಡಿ ಜತ್ತಪ್ಪರೈ ಪುಸ್ತಕ
 

Image credits: our own

ಸೈಕೋಪಾತ್‌

ಇದೊಂದು ಪುಸ್ತಕ, ಆತ್ಮಕತೆ, ಕಾದಂಬರಿ.. ಹೀಗೆ ಏನು ಬೇಕಾದರೂ ಅಂದುಕೊಳ್ಳಬಹುದು. ಸಸ್ಪೆನ್ಸ್‌ಗಳಲ್ಲೇ ಮಹಾ ಸಸ್ಪೆನ್ಸ್‌ ಕಾಯ್ದುಕೊಳ್ಳುವ ರವಿ ಬೆಳಗೆರೆ ಅವರ ಪುಸ್ತಕ
 

Image credits: our own

ನಂಜಿನ ನೆರಳು

ಕಾಫಿಗಿಡಗಳ ಮಾಹಿತಿ, ಕೊಲೆ, ಪ್ರೀತಿ ಕಾಮ ಪ್ರೇಮ, ಆಸೆ ದುರಾಸೆ, ಅಸೂಯೆ, ಕತ್ತಲು, ಮಳೆ, ಗುಡುಗು ಮಿಂಚುಗಳನ್ನೆಲ್ಲ ಒಳಗೊಂಡ ಅನನ್ಯ ಕಾದಂಬರಿ.ಕುತೂಹಲಕಾರಿಯಾಗಿ ಸಾಗುತ್ತದೆ ಅನ್ನೋದರಲ್ಲಿ ಅನುಮಾನವಿಲ್ಲ.

Image credits: our own

ಒಂದು ಕೋಪಿಯ ಕಥೆ

ಕೌಶಿಕ್ ಕೂಡುರಸ್ತೆ ಬರೆದಿರುವ ಒಂದು ಕೋಪಿಯ ಕಥೆ. ಪತ್ತೆದಾರಿ ಕಾದಂಬರಿ, ಹುಚ್ಚುಹಿಡಿಸುವಂತೆ ಓದಿಸಿಕೊಂಡು ಹೋಗುತ್ತದೆ.

Image credits: our own
Find Next One