SCIENCE
ದಿನದ 24 ಗಂಟೆಗಳ ಪೈಕಿ ಕೋಲಾಗಳು 22 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ. ಮರದ ಎಲೆಗಳನ್ನೇ ತಿಂದು ಬದುಕುವ ಈ ಪ್ರಾಣಿಗೆ ಜೀರ್ಣಕೀರ್ಯೆ ಸರಿಯಾಗಿ ಆಗಲು 22 ಗಂಟೆ ನಿದ್ರೆ ಅನಿವಾರ್ಯ
ಬೂದಿಬಣ್ಣದ ಚಿಕ್ಕ ಬಾವಲಿಗಳು ದಿನಕ್ಕೆ 20 ಗಂಟೆ ನಿದ್ರೆ ಮಾಡುತ್ತದೆ. ಗುಹೆಗಳ ಒಳಗೆ ತಲೆಕೆಳಗಾಗಿ ನಿದ್ರೆ ಮಾಡುತ್ತವೆ. ಆ ಮೂಲಕ ತಮ್ಮ ಎನರ್ಜಿ ಉಳಿಸಿಕೊಳ್ಳುತ್ತದೆ.
ಅಳಿವಿನಂಚಿನಲ್ಲಿರುವ ದೈತ್ಯ ಅರ್ಮಾಡಿಲ್ಲೋಗಳು ದಿನಕ್ಕೆ 18 ಗಂಟೆ ನಿದ್ರೆ ಮಾಡುತ್ತದೆ. ಹೆಚ್ಚಾಗಿ ಭೂಮಿಯಲ್ಲಿ ಗುಂಡಿ ತೋಡಿ ವಾಸ ಮಾಡುತ್ತದೆ.
ತನ್ನ ಸೋಮಾರಿತನದ ಕಾರಣದಿಂದಾಗಿಯೇ ಸುದ್ದಿಯಲ್ಲಿರುವ ಸ್ಲಾತ್‌ಗಳು ದಿನಕ್ಕೆ 15-20 ಗಂಟೆಗಳ ಕಾಲ ನಿದ್ರೆ ಮಾಡುತ್ತದೆ. ದಾಳಿಗೆ ಒಳಗಾಗುವುದನ್ನು ತಪ್ಪಿಸಲು ಮರದ ಮೇಲೆ ನಿದ್ರೆ ಮಾಡುತ್ತದೆ.
ಟ್ರೀಷ್ರೂಗಳು ತನ್ನ ಗೂಡಿನಲ್ಲಿ ದಿನಕ್ಕೆ 15 ಗಂಟೆ ನಿದ್ರೆ ಮಾಡುತ್ತದೆ.
ಹುಲಿಗಳು ದಿನದಲ್ಲಿ 16 ಗಂಟೆ ನಿದ್ರಿಸುತ್ತವೆ. ಆ ಮೂಲಕ ಅತ್ಯಂತ ಪರ್ಫೆಕ್ಟ್ ದಾಳಿಗೆ ತನ್ನನ್ನು ತಾನು ಸಿದ್ಧಮಾಡಿಕೊಳ್ಳುತ್ತದೆ.
ಅಗತ್ಯ ಆಹಾರ ಸಿಕ್ಕ ಬಳಿಕ ಆಫ್ರಿಕಾದ ಸಿಂಹಗಳು ದಿನಕ್ಕೆ 20 ಗಂಟೆ ನಿದ್ರೆ ಮಾಡುತ್ತವೆ. ಆ ಮೂಲಕ ಮುಂದಿನ ದಾಳಿಗೆ ಶಕ್ತಿಯನ್ನು ಸಂಪಾದಿಸುತ್ತದೆ.
ಜೀವ ಜಗತ್ತಿನ ಅತ್ಯಂತ ವಿಶಿಷ್ಟ ಪ್ರಾಣಿ ಲೇಮುರ್. ಎರಡು ನಾಲಗೆ ಹೊಂದಿರುವ ಈ ಪ್ರಾಣಿ ದಿನಕ್ಕೆ 16 ಗಂಟೆಗಳ ಕಾಲ ನಿದ್ರೆ ಮಾಡುತ್ತದೆ.
ಜಾಲಪಾದದ ಹಿಂಗಾಲುಗಳುಳ್ಳ ಪ್ರಾಣಿ ಒಪ್ಪೋಸಮ್, ದಿನದಲ್ಲಿ 18-20 ಗಂಟೆ ನಿದ್ರೆ ಮಾಡುತ್ತದೆ. ಬೆಳಗಿನ ಅವಧಿಯಲ್ಲಿ ನಿದ್ರೆ ಮಾಡುವ ಮೂಲಕ ರಾತ್ರಿ ಬೇಟೆಗೆ ತಯಾರಿ ನಡೆಸುತ್ತದೆ.
ಭಾರತೀಯ ಹೆಬ್ಬಾವು ಎಂದು ಕರೆಯಲ್ಪಡುವ ಪೈಥಾನ್‌ಗಳು ದಿನಕ್ಕೆ 18 ಗಂಟೆ ನಿದ್ರೆ ಮಾಡುತ್ತದೆ. ತನ್ನ ನಿಧಾನಗತಿಯ ಜೀರ್ಣಕ್ರಿಯೆಯ ಕಾರಣಕ್ಕಾಗಿ ಈ ಕೆಲಸ ಮಾಡುತ್ತದೆ.