SCIENCE
ಬಾಹ್ಯಾಕಾಶದಲ್ಲಿ ಮಹಾವಿಕ್ರಮ ಮೆರೆಯಲು ಭಾರತ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಎರಡು ನೌಕೆಗಳನ್ನು ಜೋಡಿಸಲು ನಿರ್ಧಾರ ಮಾಡಿದೆ.
ಸ್ಪೇಸ್ ಡಾಕಿಂಗ್ ಎಕ್ಸಿಪೀರಿಮೆಂಟ್ (SpaDeX) ಎಂದು ಕರೆಯಲ್ಪಡುವ ಈ ಯೋಜನೆ, ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಪರಸ್ಪರ ಜೋಡಿಸುವ ಕಲೆಯಾಗಿದೆ.
ಈಗ ಇಸ್ರೋ ಜೋಡಣೆ ಮಾಡುತ್ತಿರುವುದು ಬರೀ 220 ಕೆಜಿ ತೂಕದ ಎರಡು ನೌಕೆಗಳನ್ನು ಮಾತ್ರ. ಆದರೆ, ಇಸ್ರೋ ಕನಸು ಬಾಹ್ಯಾಕಾಶದಲ್ಲಿ ಭಾರತದ ಸ್ವಂತ ನಿಲ್ದಾಣ ನಿರ್ಮಾಣ ಮಾಡುವುದು. ಅದಕ್ಕೆ ಈ ಡಾಕಿಂಗ್ ಇಂಪಾರ್ಟೆಂಟ್ ಆಗಿದೆ.
ಹಾಗೇನಾದರೂ ಭಾರತ ಈ ಸಂಕೀರ್ಣ ಬಾಹ್ಯಾಕಾಶ ಯೋಜನೆಯಲ್ಲಿ ಯಶಸ್ವಿಯಾದಲ್ಲಿ ಸ್ಪೇಸ್ ಡಾಕಿಂಗ್‌ನಲ್ಲಿ ಯಶಸ್ಸು ಕಂಡ 4ನೇ ದೇಶ ಎನಿಸಲಿದೆ. ರಷ್ಯಾ, ಅಮೆರಿಕ ಹಾಗೂ ಚೀನಾ ಬಳಿ ಮಾತ್ರವೇ ಈ ತಂತ್ರಜ್ಞಾನವಿದೆ.
ಭೂಮಿಯಿಂದ 470 ಕಿಲೋಮೀಟರ್ ಎತ್ತರದಲ್ಲಿ ಇದರ ಪರೀಕ್ಷೆಯನ್ನು ಇಸ್ರೋ ಮಾಡಲಿದೆ. ಅದಕ್ಕಾಗಿ ಚೇಸರ್ ಹಾಗೂ ಟಾರ್ಗೆಟ್ ನೌಕೆಯನ್ನು ನಭಕ್ಕೆ ಕಳಿಸಲಿದೆ.
ಚೇಸರ್ ನೌಕೆಗೆ SDX01 ಎಂದು ಹೆಸರಿಟ್ಟಿದ್ದರೆ, ಟಾರ್ಗೆಟ್‌ಗೆ SDX02 ಎಂದು ಹೆಸರಿಡಲಾಗಿದೆ.ಅತ್ಯಂತ ಕಡಿಮೆ ಬೆಲೆಯಲ್ಲಿ ಇಸ್ರೋ ಇದನ್ನು ತಯಾರಿ ಮಾಡಿದೆ.
ಈ ನೌಕೆಗಳನ್ನು ಬೆಂಗಳೂರಿನ ಯುಆರ್ ರಾವ್ ಸ್ಯಾಟಲೈಟ್ ಸೆಂಟರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ VSSC, LPSC, SAC, IISU, ಮತ್ತು LEOS ಬೆಂಬಲ ನೀಡಿದೆ.
ಇಂದು ರಾತ್ರಿ 10.15ಕ್ಕೆ SpaDeX ಉಡಾವಣೆಯಾಗಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಸ್ಪೇಸ್ ಸೆಂಟರ್ (ಎಸ್‌ಡಿಎಸ್‌ಸಿ) ಅಥವಾ ಶ್ರೀಹರಿಕೋಟಾ ರೇಂಜ್(ಶಾರ್)ನಿಂದ ಇದು ಉಡಾವಣೆಯಾಗಲಿದ್ದು, ರಾತ್ರ 9.30ರಿಂದ ಇಸ್ರೋ ಯೂಟ್ಯೂಬ್‌ಪೇಜ್‌ನಲ್ಲಿ ನೇರಪ್ರಸಾರ ಇರಲಿದೆ.