relationship
ಮದುವೆ ಬಳಿಕ ಮಾಡುವ ಕೆಲ ತಪ್ಪುಗಳಿಂದ ಆರಂಭದ ದಾಂಪತ್ಯದಲ್ಲಿಯೇ ಬಿರುಕು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪುರುಷರ ಎಚ್ಚರಿಕೆಯಿಂದಿರಬೇಕು.
ಪುರುಷರು ವೃತ್ತಿಜೀವನದ ಮೇಲೆ ಹೆಚ್ಚು ಫೋಕಸ್ ಆಗಿರುತ್ತಾರೆ. ಹಾಗೆಯೇ ಹಲವು ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಇದರಿಂದ ಸಂಗಾತಿಗೆ ಕ್ವಾಲಿಟಿ ಸಮಯವನ್ನು ಕೊಡುವುದಿಲ್ಲ.
ಕೆಲಸಗಳ ನಡುವೆ ಬ್ಯುಸಿಯಾಗೋದರಿಂದ ಸಂಗಾತಿ ಜೊತೆಗೆ ಭಾವನಾತ್ಮಕ ಅಂತರ ಹೆಚ್ಚುತ್ತದೆ. ಇದು ಮನಸ್ತಾಪಕ್ಕೆ ಕಾರಣವಾಗಬಹುದು.
ಪುರುಷರ ಬ್ಯುಸಿಯಾದ ವರ್ತನೆ ಮಹಿಳೆಯರಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಭಾವನೆ ಮೂಡುತ್ತದೆ.
ಪುರುಷರು ಕೆಲವೊಮ್ಮೆ ಭಾವನಾತ್ಮಕ ಬಾಂಧವ್ಯ ಮತ್ತು ನಿರ್ಲಿಪ್ತತೆಯ ನಡುವೆ ಅಜಾಗರೂಕತೆಯಿಂದ ಒದ್ದಾಡುತ್ತಾರೆ. ಇದು ಸಂಗಾತಿಯಲ್ಲಿ ಗೊಂದಲ, ಅನಿಶ್ಚಿತತೆಯನ್ನು ಉಂಟುಮಾಡುತ್ತದೆ.
ಪುರುಷರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು ಮಹಿಳೆಯರಲ್ಲಿ ತಮ್ಮ ಅಸ್ತಿತ್ವದ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.
ಸಂಗಾತಿಯ ಯಾವುದೇ ಮಾತು ಆಲಿಸದೇ ಇರೋದು ಸಹ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಇದನ್ನು ತನಗೆ ತೋರಿದ ಅಗೌರವ ಎಂದು ಭಾವಿಸೋ ಸಾಧ್ಯತೆ ಇರುತ್ತದೆ.