relationship
ಸಂಭೋಗದ ಸಮಯದಲ್ಲಿ ಸಂಪೂರ್ಣ ಆನಂದ ಪಡೆದಾಗ ಪರಾಕಾಷ್ಠೆ ಅಥವಾ ಆರ್ಗಸಂ ಉಂಟಾಗುತ್ತದೆ. ಆದರೆ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರಿಗೆ ಸಂಭೋಗದ ಪರಾಕಾಷ್ಠೆ ಸಿಗೋದು ಕಡಿಮೆಯಂತೆ.
ಸೆಕ್ಸ್ ಲೈಫ್ ಬಗ್ಗೆ ಹೇಳೋದಾದ್ರೆ ಪುರುಷರಿಗೆ ಹೋಲಿಸಿದ್ರೆ ಸುಮಾರು 80% ಮಹಿಳೆಯರಿಗೆ ಆರ್ಗಸಂ ಅಥವಾ ಪರಾಕಾಷ್ಠೆ ಆಗೋದಿಲ್ವಂತೆ.
ಲೈಂಗಿಕ ಸಂಬಂಧದ ಸಮಯದಲ್ಲಿ ಸುಮಾರು 70% ಮಹಿಳೆಯರಿಗೆ ಕೊನೆಯವರೆಗೂ ಸಂತುಷ್ಟಿ ಉಳಿಯೋದೇ ಇಲ್ಲ ಎಂದು ಸಂಶೋಧನೆಗಳು ತಿಳಿಸಿವೆ.
ಒಂದು ಅಧ್ಯಯನ ಪ್ರಕಾರ ಭಾರತದ ಸುಮಾರು 97% ಪುರುಷರಿಗೆ ತಮ್ಮ ಸಂಗಾತಿ ಯಾವಾಗ ಉದ್ರೇಕಗೊಳ್ಳುತ್ತಾರೆ, ಪರಾಕಾಷ್ಠೆಯನ್ನು ತಲುಪುತ್ತಾಳೆ ಅನ್ನೋದೆ ಗೊತ್ತಿಲ್ವಂತೆ.
ವಾಸ್ತವವಾಗಿ ಹೇಳೊದಾದರೆ ಸೆಕ್ಸ್ ಸಮಯದಲ್ಲಿ ಪುರುಷರಿಗೆ ಕ್ಲೈಮಾಕ್ಸ್ ನಲ್ಲಿ ಒಂದು ಬಾರಿ ಆರ್ಗಸಂ ಆದರೆ, ಮಹಿಳೆಯರಿಗೆ ಮಧ್ಯೆ ಮಧ್ಯೆ ತುಂಬಾ ಸಲ ಆಗುತ್ತಂತೆ. ಆದರೆ ಗೊತ್ತಾಗಲ್ಲ.
ಭಾರತದಲ್ಲಿ 70% ಕ್ಕಿಂತ ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ತಮಗೆ ಆರ್ಗಸಂ ಆಗಿದೆ ಎಂದು ಸುಳ್ಳು ಹೇಳುತ್ತಾರಂತೆ, ಆದರೆ ಅವರಿಗೆ ಸಂಪೂರ್ಣ ಆನಂದ ಸಿಕ್ಕಿರೋದಿಲ್ಲ.
ಮಹಿಳೆಯರಿಗೆ ಪರಾಕಾಷ್ಠೆ ಆಗದೇ ಇರಲು ಮುಖ್ಯ ಕಾರಣ ಅವರು ಸೆಕ್ಸ್ ಸಮಯದಲ್ಲಿ ತಮಗೆ ಏನು ಇಷ್ಟವಾಗುತ್ತೆ, ಏನು ಇಷ್ಟವಾಗೋದಿಲ್ಲ ಎನ್ನುವ ಬಗ್ಗೆ ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡೋದಿಲ್ಲ.
ಆರ್ಗಸಂ ಆಗದೇ ಇರೋದಕ್ಕೆ ಮತ್ತೊಂದು ಕಾರಣ ಅನ್’ಆರ್ಗಸ್ಮಿಯಾ ಎಂಬ ಕಾಯಿಲೆ. ಇದರಿಂದ ಅವರು ಉತ್ತೇಜನ ಹೊಂದುತ್ತಾರೆ, ಆದರೆ ಪರಾಕಾಷ್ಠೆ ತಲುಪೋದಿಲ್ಲ.