ಅದು ಮನುಷ್ಯನಾಗಿರಲಿ, ಪ್ರಾಣಿಯಾಗಿರಲಿ, ಪಕ್ಷಿಯಾಗಿರಲಿ ಅಥವಾ ಕೀಟವಾಗಿರಲಿ, ತಲೆಯನ್ನು ಕತ್ತರಿಸಿದರೆ, ಅವುಗಳಲ್ಲಿ ಯಾವುದೂ ಬದುಕುಳಿಯಲು ಸಾಧ್ಯವಿಲ್ಲ.
news Mar 07 2025
Author: Pavna Das Image Credits:Getty
Kannada
ವಾರಗಳವರೆಗೆ ತಲೆ ಇಲ್ಲದೇ ಬದುಕುವ ಜೀವಿ
ಆದರೆ ಒಂದು ಜೀವಿ ಇದೆ, ನೀವು ಅದರ ತಲೆಯನ್ನು ಕತ್ತರಿಸಿದ ನಂತರವೂ ಆ ಜೀವಿ ಒಂದು ವಾರದವರೆಗೆ ಬದುಕಬಲ್ಲದು.
Image credits: social media
Kannada
ಅದು ಯಾವ ಜೀವಿ ಗೊತ್ತಾ?
ಯಾವುದಪ್ಪಾ ಆ ಜೀವಿ ಎಂದು ಯೋಚನೆ ಮಾಡಬೇಡಿ. ಅದು ಬೇರಾವುದೂ ಅಲ್ಲ, ಮನೆಗಳಲ್ಲಿ ಹೆಚ್ಚಾಗಿ ಕಂಡುಬರುವ ಜಿರಳೆ ತಲೆಯಿಲ್ಲದೆ ಒಂದು ವಾರ ಬದುಕಬಲ್ಲದು.
Image credits: Getty
Kannada
ಜಿರಳೆಗಳು
ಜಿರಳೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ವಿಶೇಷತೆ ಅಂದ್ರೆ, ಅವು ತಮ್ಮ ದೇಹದ ಪ್ರತಿಯೊಂದು ಭಾಗದಲ್ಲಿರುವ ಸಣ್ಣ ರಂಧ್ರಗಳ ಮೂಲಕ ಉಸಿರಾಡುತ್ತವೆ. ಹಾಗಾಗಿಯೆ ತಲೆ ಕತ್ತರಿಸಿದ ನಂತ್ರ ವಾರಗಳ ಕಾಲ ಬದುಕುತ್ತೆ.
Image credits: Getty
Kannada
ಉಸಿರಾಡಲು ಮೂಗು ಬೇಕಿಲ್ಲ
ಜಿರಳೆ ತನ್ನ ದೇಹದಿಂದ ಉಸಿರಾಟ ನಡೆಸೋದರಿಂದ, ಜಿರಳೆಗಳು ಉಸಿರಾಡಲು ಬಾಯಿ ಅಥವಾ ಮೂಗನ್ನು ಅವಲಂಬಿಸುವುದಿಲ್ಲ. ಹಾಗೂ ಕೆಲವು ದಿನಗಳವರೆಗೆ ಜೀವ ಉಳಿಸಿಕೊಳ್ಳುತ್ತೆ.
Image credits: Getty
Kannada
ವಾರಗಳ ನಂತ್ರ ಮತ್ಯಾಕೆ ಸಾಯುತ್ತೆ?
ಜಿರಳೆ ತನ್ನ ತಲೆಯನ್ನು ಕತ್ತರಿಸಿದ ವಾರಗಳ ನಂತರ ಸಾಯುತ್ತದೆ ಏಕೆಂದರೆ ಅದು ಬಾಯಿಯಿಲ್ಲದೆ ನೀರು ಕುಡಿಯಲು ಸಾಧ್ಯವಿಲ್ಲ. ಹಾಗಾಗಿ ಅದು ಬಾಯಾರಿಕೆಯಿಂದ ಸಾಯುತ್ತದೆ.
Image credits: Getty
Kannada
ನೀರಿನಲ್ಲಿ ಮುಳುಗಿದರೂ ಬದುಕಬಲ್ಲದು
ಜಿರಳೆ ಅರ್ಧ ಗಂಟೆ ನೀರಿನಲ್ಲಿ ಮುಳುಗಿದರೂ ಬದುಕಬಲ್ಲದು. ಜಿರಳೆ ತನ್ನ ಉಸಿರನ್ನು 40 ನಿಮಿಷಗಳ ಕಾಲ ಹಿಡಿದಿಟ್ಟುಕೊಳ್ಳಬಲ್ಲದು. ಹಾಗಾಗಿ ನೀರಿನಲ್ಲಿ ಮುಳುಗಿದ್ರೂ ಬದುಕುತ್ತೆ.