Lifestyle
ಮೊಡವೆಗಳಿಂದ ಅನೇಕರು ಬಳಲುತ್ತಿದ್ದಾರೆ. ಅದರಲ್ಲೂ ಏನಾದರೂ ಚಂದದ ಕಾರ್ಯಕ್ರಮಗಳಿದ್ದಾಗಲೇ ಮೊಡವೆಗಳು ಮೊಗದ ಮೇಲೆ ಅಣಬೆಯಂತೆ ಏಳುತ್ತವೆ.
ಮೊಡವೆಗಳು ಹಾಗೂ ಅದರ, ಕಲೆಗಳು ಹೇಗೆ ಇರಲಿ, ಮನೆಯಲ್ಲೇ ಇರುವ ಕೆಲ ಪದಾರ್ಥಗಳಿಂದ ಅವುಗಳಿಗೆ ಮುಕ್ತಿ ನೀಡಬಹುದು.
ನೀವು ಮೊಡವೆಯಿಂದ ಬಳಲುತ್ತಿದ್ದರೆ ವಿಟಮಿನ್ ಇ ಕ್ಯಾಪ್ಸುಲ್ ಎಣ್ಣೆ, ಜೇನುತುಪ್ಪ, ನಿಂಬೆ ರಸ, ಆಲೂಗಡ್ಡೆ ರಸವನ್ನು ಬೆರೆಸಿ ಹತ್ತಿಯಲ್ಲಿ ಅದ್ದಿ ಮೊಡವೆಗಳ ಮೇಲೆ ಹಚ್ಚಿ
ಇವುಗಳನ್ನು ಮುಖಕ್ಕೆ ಹಚ್ಚಿದ ನಂತರ 10 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ನೀರಿನಿಂದ ಮುಖ ತೊಳೆಯಿರಿ. ಇವನ್ನು ಒಮ್ಮೆ ಬಳಸಿದ ನಂತರ ನಿಮ್ಮ ಮುಖ ಹೇಗೆ ಹೊಳೆಯುತ್ತದೆ ಎಂದು ನೋಡಿ.
ನೀವು ಇದನ್ನು ವಾರಕ್ಕೆ 2-3 ಬಾರಿ ಬಳಸಬಹುದು. ಮುಖ ತೊಳೆದ ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಲು ಮರೆಯಬೇಡಿ.
ಈಗ ಆನ್‌ಲೈನ್‌ನಲ್ಲಿಯೂ ಆಲೂಗಡ್ಡೆ ರಸವನ್ನು ಪಡೆಯಬಹುದು. ಇದನ್ನು ಮೊಸರು, ಜೇನುತುಪ್ಪ ಮತ್ತು ಇತರ ಪದಾರ್ಥಗಳೊಂದಿಗೆ ಬೆರೆಸಿ ಬಳಸಬಹುದು.
ಆಲೂಗಡ್ಡೆ ರಸವನ್ನು ಎಲ್ಲರೂ ಬಳಸಬಹುದು. ಕೆಲವರಿಗೆ ಮುಖದಲ್ಲಿ ಕಪ್ಪು ಕಲೆಗಳಿರುತ್ತದೆ.. ಅದನ್ನೂ ಆಲೂಗಡ್ಡೆ ರಸ ನಿವಾರಿಸುತ್ತದೆ.