2 ಚಮಚ ಅಲೋವೆರಾ ಜೆಲ್ ಮತ್ತು 1 ಕಪ್ ನೀರನ್ನು ತೆಗೆದುಕೊಳ್ಳಿ. ನೀರಿನಲ್ಲಿ ಅಲೋವೆರಾ ಜೆಲ್ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.ಕೂದಲಿಗೆ ಸ್ಪ್ರೇ ಮಾಡಿದ್ರೆ ಸಾಕು ಮೃದು ಮತ್ತು ನೇರವಾಗುತ್ತೆ.
Kannada
ಅಕ್ಕಿ ತೊಳೆದ ನೀರಿನ ಸ್ಪ್ರೇ
1 ಕಪ್ ಅಕ್ಕಿ ತೊಳೆದ ನೀರು ಮತ್ತು 1 ಚಮಚ ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ಹಾಕಿ. 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಇದು ಕೂದಲನ್ನು ನೇರ ಮತ್ತು ಹೊಳೆಯುವಂತೆ ಮಾಡುತ್ತದೆ.
Kannada
ಹಾಲು ಮತ್ತು ಜೇನುತುಪ್ಪದ ಸ್ಪ್ರೇ
1/2 ಕಪ್ ಹಾಲು ಮತ್ತು 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಕೂದಲಿಗೆ ಸ್ಪ್ರೇ ಮಾಡಿ. 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಹಾಲಿನಲ್ಲಿರುವ ಪ್ರೋಟೀನ್ ಕೂದಲನ್ನು ನೇರಗೊಳಿಸಲು ಸಹಾಯ ಮಾಡುತ್ತದೆ.
Kannada
ತೆಂಗಿನ ಹಾಲು ಮತ್ತು ನಿಂಬೆ ರಸದ ಸ್ಪ್ರೇ
1/2 ಕಪ್ ತೆಂಗಿನ ಹಾಲು ಮತ್ತು 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಕೂದಲಿಗೆ ಹಚ್ಚಿ 20-30 ನಿಮಿಷಗಳ ಕಾಲ ಬಿಡಿ. ಇದು ಕೂದಲನ್ನು ಕಂಡೀಷನಿಂಗ್ ಮಾಡುವುದರ ಜೊತೆಗೆ ನೇರಗೊಳಿಸುತ್ತದೆ.
Kannada
ಗ್ರೀನ್ ಟೀ ಮತ್ತು ವಿನೆಗರ್ ಸ್ಪ್ರೇ
1 ಕಪ್ ಗ್ರೀನ್ ಟೀ ಮತ್ತು 1 ಚಮಚ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ ಸ್ಪ್ರೇ ತಯಾರಿಸಿ. ಕೂದಲಿಗೆ ಸ್ಪ್ರೇ ಮಾಡಿ ತೊಳೆಯುವ ಮೊದಲು 15-20 ನಿಮಿಷಗಳ ಕಾಲ ಬಿಡಿ. ಇದು ಕೂದಲನ್ನು ಡಿ-ಫ್ರಿಜ್ ಮತ್ತು ನೇರವಾಗಿಸುತ್ತದೆ.
Kannada
ಬಾಳೆಹಣ್ಣು ಮತ್ತು ಮೊಸರಿನ ಸ್ಪ್ರೇ
1 ಮಾಗಿದ ಬಾಳೆಹಣ್ಣು ಮತ್ತು 2 ಚಮಚ ಮೊಸರನ್ನು ಬ್ಲೆಂಡ್ ಮಾಡಿ ನಯವಾದ ಮಿಶ್ರಣ ತಯಾರಿಸಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೂದಲಿಗೆ ಹಚ್ಚಿ. 30 ನಿಮಿಷಗಳ ನಂತರ ತೊಳೆಯಿರಿ. ಕೂದಲನ್ನು ಮೃದು ಮತ್ತು ನೇರವಾಗಿಸುತ್ತದೆ.
Kannada
ಅಗಸೆ ಬೀಜದ ಸ್ಪ್ರೇ
2 ಚಮಚ ಅಗಸೆ ಬೀಜವನ್ನು 1 ಕಪ್ ನೀರಿನಲ್ಲಿ ಕುದಿಸಿ ಜೆಲ್ ತಯಾರಿಸಿ. ಇದನ್ನು ಸೋಸಿ ಸ್ಪ್ರೇ ಬಾಟಲಿಯಲ್ಲಿ ಹಾಕಿ. ಕೂದಲಿಗೆ ಹಚ್ಚಿ ಬಾಚಣಿಗೆ ಮಾಡಿ. ಇದು ಕೂದಲನ್ನು ನೈಸರ್ಗಿಕವಾಗಿ ನೇರಗೊಳಿಸುತ್ತದೆ.