Lifestyle

ಚಿನ್ನದ ಬಳೆಗಳನ್ನು ಹೊಳೆಯುವಂತೆ ಮಾಡಲು 7 ಅದ್ಭುತ ಹ್ಯಾಕ್ಸ್

ವಿನೆಗರ್‌ನಿಂದ ಸ್ವಚ್ಛಗೊಳಿಸಿ

ಅರ್ಧ ಕಪ್ ನೀರಿಗೆ ಅರ್ಧ ಕಪ್ ಬಿಳಿ ವಿನೆಗರ್ ಸೇರಿಸಿ. ಇದರಲ್ಲಿ ಬಳೆಗಳನ್ನು 15-20 ನಿಮಿಷಗಳ ಕಾಲ ನೆನೆಸಿ. ನಂತರ ಮೃದುವಾದ ಬ್ರಷ್‌ನಿಂದ ನಿಧಾನವಾಗಿ ಉಜ್ಜಿ ಸ್ವಚ್ಛ ನೀರಿನಿಂದ ತೊಳೆದ್ರೆ ಬಳೆಗಳು ಹೊಳೆಯುತ್ತವೆ.

ಬೇಕಿಂಗ್ ಸೋಡಾ ಮತ್ತು ವಿನೆಗರ್

ಒಂದು ಬಟ್ಟಲಿನಲ್ಲಿ ಅರ್ಧ ಕಪ್ ವಿನೆಗರ್ ಮತ್ತು ಎರಡು ಚಮಚ ಬೇಕಿಂಗ್ ಸೋಡಾವನ್ನು ಮಿಶ್ರಣ ಮಾಡಿ. ಇದರಲ್ಲಿ ಚಿನ್ನದ ಬಳೆಗಳನ್ನು 2-3 ಗಂಟೆಗಳ ಕಾಲ ನೆನೆಸಿ ನೀರಿನಲ್ಲಿ ತೊಳೆಯಬೇಕು. 

ಟೂತ್‌ಪೇಸ್ಟ್ ಬಳಕೆ

ಟೂತ್‌ಪೇಸ್ಟ್‌ಗೆ ಒಂದು/ಎರಡು ಚಮಚ ನೀರು ಸೇರಿಸಿ ತೆಳುವಾದ ದ್ರಾವಣವನ್ನು ತಯಾರಿಸಿ. ಬಟ್ಟೆ ಅಥವಾ ಹಳೆಯ ಬ್ರಷ್‌ನ ಸಹಾಯದಿಂದ ಆಭರಣಗಳ ಮೇಲೆ ಸಂಗ್ರಹವಾಗಿರುವ ಕೊಳೆಯನ್ನು ಸ್ವಚ್ಛಗೊಳಿಸಿ.

ಬೇಕಿಂಗ್ ಸೋಡಾ ಮತ್ತು ಲಿಕ್ವಿಡ್ ಸೋಪ್

ಒಂದು ಚಮಚ ಬೇಕಿಂಗ್ ಸೋಡಾ ಮತ್ತು ಲಿಕ್ವಿಡ್ ಸೋಪ್ ಮಿಶ್ರಣ ಮಾಡಿ. ನಿಮ್ಮ ಚಿನ್ನದ ಬಳೆಗಳನ್ನು ಬಟ್ಟಲಿನಲ್ಲಿ ನೆನೆಸಿ. ಕೆಲವು ನಿಮಿಷಗಳ ಕಾಲ ನೆನೆಸಿ ನಂತರ ಮೃದುವಾದ ಬಟ್ಟೆಯಿಂದ ಒರೆಸಿ.

ಅಮೋನಿಯಾ ಮತ್ತು ನೀರು

ಒಂದು ಕಪ್ ನೀರಿಗೆ ಕೆಲವು ಹನಿ ಅಮೋನಿಯಾವನ್ನು ಸೇರಿಸಿ. ಈ ಮಿಶ್ರಣದಲ್ಲಿ ಬಳೆಗಳನ್ನು ಕೆಲವು ನಿಮಿಷಗಳ ಕಾಲ ನೆನೆಸಿ. ನಂತರ ಬಳೆಗಳನ್ನು ಸ್ವಚ್ಛ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ.

ಆಲ್ಕೋಹಾಲ್ ಬಳಕೆ

ರಬ್ಬಿಂಗ್ ಆಲ್ಕೋಹಾಲ್‌ನಲ್ಲಿ ಬಳೆಗಳನ್ನು ಕೆಲವು ನಿಮಿಷಗಳ ಕಾಲ ನೆನೆಸಿ, ನಂತರ ಸ್ವಚ್ಛ ನೀರಿನಿಂದ ತೊಳೆದು ಮೃದುವಾದ ಬಟ್ಟೆಯಿಂದ ಒರೆಸಿ. ಆಲ್ಕೋಹಾಲ್ ಕೊಳೆ ಮತ್ತು ಧೂಳನ್ನು ತೆಗೆದುಹಾಕಲು ತಕ್ಷಣ ಸಹಾಯ ಮಾಡುತ್ತದೆ.

ಬಿಸಿ ನೀರು ಮತ್ತು ಉಪ್ಪು

ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಇದರಲ್ಲಿ ಬಳೆಗಳನ್ನು 10-15 ನಿಮಿಷಗಳ ಕಾಲ ಹಾಕಿ. ನಂತರ ಬಳೆಗಳನ್ನು ತೆಗೆದು ತಣ್ಣೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ.

ಒಂದು ವಿಷಯ ನೆನಪಿನಲ್ಲಿಡಿ

ಚಿನ್ನದ ಬಳೆಗಳನ್ನು ಸ್ವಚ್ಛಗೊಳಿಸುವಾಗ ಒಂದು ವಿಷಯ ನೆನಪಿನಲ್ಲಿಡಿ. ರತ್ನದ ಆಭರಣಗಳನ್ನು ನೀರಿನಲ್ಲಿ ನೆನೆಸಬಾರದು. ಇದು ಸೆಟ್ಟಿಂಗ್‌ನಲ್ಲಿ ಸಾಬೂನು ನೀರನ್ನು ಸಿಲುಕಿಸಬಹುದು ಮತ್ತು ಕಲ್ಲುಗಳು ಮಂದವಾಗಿ ಕಾಣಿಸಬಹುದು.

Find Next One