Lifestyle

ಸೋನಮ್‌ ಬಾಜ್ವಾ ಅವರ ಸ್ಟೈಲಿಷ್‌ ಸೂಟ್‌ ಲುಕ್ಸ್!

ಪ್ರಿಂಟೆಡ್‌ ಚೂಡಿದಾರ್ ಪಂಜಾಬಿ ಸೂಟ್

ಪ್ರಿಂಟೆಡ್‌ ಚೂಡಿದಾರ್ ಪಂಜಾಬಿ ಸೂಟ್ ಲುಕ್‌ನಲ್ಲಿ ಸೋನಮ್ ಸಖತ್‌ ಆಗಿ ಕಾಣ್ತಿದ್ದಾರೆ. ಈ ರೀತಿಯ ಸೂಟ್ ಅನ್ನು ರೆಡಿಮೇಡ್ ಮಾರ್ಕೆಟ್‌ನಿಂದ ಖರೀದಿಸಬಹುದು. ಸುಂದರ ಆಭರಣ ಧರಿಸೋದು ಮರೆಯಬೇಡಿ.

ಬಾರ್ಡರ್ ವರ್ಕ್ ವೆಲ್ವೆಟ್ ಸೂಟ್

ಈ ವೆಲ್ವೆಟ್ ಸೂಟ್ ನೆಕ್‌ಲೈನ್ ಮತ್ತು ಹೆಮ್‌ಲೈನ್ ಮತ್ತು ದುಪ್ಪಟ್ಟಾದಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ. ಈ ರೀತಿಯ ಸೂಟ್‌ಗಳು ನಿಮಗೆ ಮಾರುಕಟ್ಟೆಯಲ್ಲಿ ರೆಡಿಮೇಡ್ ಸಹ ಸಿಗುತ್ತವೆ.

ಕಾಶ್ಮೀರಿ ಕಸೂತಿ ಕೆಲಸದ ಸೂಟ್ ಸೆಟ್

ನೀವು ಫುಲ್ಕರಿ ಅಥವಾ ಗೋಟಾ ವರ್ಕ್ ಹೊರತುಪಡಿಸಿ ಬೇರೆ ಯಾವುದೇ ಕಸೂತಿ ಕೆಲಸದ ಸೂಟ್ ಅನ್ನು ಸ್ಟೈಲ್‌ ಮಾಡಲು ಬಯಸಿದರೆ, ಕಾಶ್ಮೀರಿ ಕಸೂತಿ ಕೆಲಸದ ಸೂಟ್ ನಿಮ್ಮ ಆಯ್ಕೆಯಾಗಲಿ.

ಪ್ರಿಂಟೆಡ್‌ ಕಫ್ತಾನ್ ಪ್ಯಾಟರ್ನ್ ಸೂಟ್

ಮಾರ್ಕೆಟ್‌ನಿಂದ ಬಟ್ಟೆ ಖರೀದಿಸಿ ನೀವೇ ಪ್ರಿಂಟೆಡ್‌ ಕಫ್ತಾನ್ ಪ್ಯಾಟರ್ನ್ ಸೂಟ್ ರೆಡಿ ಮಾಡಬಹುದು. ರೆಡಿಮೆಡ್‌ಗೆ 2 ರಿಂದ 3 ಸಾವಿರ ಇರುತ್ತದೆ. ತೋಳಿನ ಮೇಲೆ ಜಲಕ್ ವಿನ್ಯಾಸವನ್ನು ಮಾಡಲಾಗಿದೆ.

ಮೋಗಾ ಸಿಲ್ಕ್ ಪಟಿಯಾಲ ಸೂಟ್

ಸೋನಮ್ ಅವರ ಈ ಪಟಿಯಾಲ ಸೂಟ್ ಅನ್ನು ಟಿಶ್ಯೂ ಮತ್ತು ಮೋಗಾ ಸಿಲ್ಕ್‌ನಿಂದ ತಯಾರಿಸಲಾಗಿದೆ. ಇದು ಹೂವಿನ ಪ್ರಿಂಟೆಡ್‌ ವಿನ್ಯಾಸವನ್ನು ಹೊಂದಿದೆ. ತೋಳುಗಳು ಮತ್ತು ದುಪಟ್ಟಾದ ಬಾರ್ಡರ್‌ಅನ್ನು ಗೋಟಾದಿಂದ ಅಲಂಕರಿಸಲಾಗಿದೆ.

ಪಂಜಾಬಿ ಧೋತಿ ಕುರ್ತಿ ಸೆಟ್

ಸೋನಮ್ ಬಜ್ವಾಗೆ ಈ ಪಂಜಾಬಿ ಧೋತಿ ಕುರ್ತಿ ಸೆಟ್ ಸಹ ಚೆನ್ನಾಗಿ ಕಾಣುತ್ತಿದೆ. ಇದರಲ್ಲಿ ಬನಾರಸಿ ಬಟ್ಟೆಯಿಂದ ಕುರ್ತಿಯನ್ನು ತಯಾರಿಸಲಾಗಿದೆ ಮತ್ತು ಜೊತೆಗೆ ಪಂಜಾಬಿ ಧೋತಿ ಕೂಡ ಇದೆ.

ಪಟಿಯಾಲ ಕುರ್ತಿ ಮತ್ತು ಸ್ಟ್ರೈಟ್ ಸಲ್ವಾರ್

ಡಿಫರೆಂಟ್‌ ಸ್ಟೈಲ್‌ ಟ್ರೈ ಮಾಡಬೇಕು ಅನಿಸಿದ್ರೆ,  ಪಟಿಯಾಲ ಕುರ್ತಿಯೊಂದಿಗೆ ಸ್ಟ್ರೈಟ್ ಸಲ್ವಾರ್ ಅನ್ನು ಖಂಡಿತವಾಗಿ ಪ್ರಯತ್ನಿಸಬೇಕು.

 

ಧೋತಿ ಶೈಲಿಯ ಸೂಟ್ ಸೆಟ್

ಟ್ರೆಡಿಷನಲ್‌ ಆಗೂ ಕಾಣ್ಬೇಕು, ವೆಸ್ಟರ್ನ್‌ ಡ್ರೆಸ್‌ ಕೂಡ ಆಗ್ಬೇಕು ಅಂದ್ರೆ,  ಧೋತಿ ಶೈಲಿಯ ಸೂಟ್ ಸೆಟ್ ಅನ್ನು ಧರಿಸಬಹುದು. ಅಗತ್ಯವಿದ್ದಲ್ಲಿ ಇದರ ಮೇಲೆ ಹೆವಿ ಡಿಸೈನ್‌ ವರ್ಕ್‌ ಕೂಡ ಮಾಡಬಹುದು.

ಸ್ಟ್ರೈಟ್‌ ಲಾಂಗ್‌ ಪೋಲ್ಕಾ ಸೂಟ್

ಉದ್ದವಾದ ಸಲ್ವಾರ್ ಸೂಟ್ ಧರಿಸಲು ಇಷ್ಟಪಟ್ಟರೆ, ಈ ರೀತಿಯ ನೇರವಾದ ಉದ್ದದ ಪೋಲ್ಕಾ ಸೂಟ್ ಬೆಸ್ಟ್‌. ಇದನ್ನು ತೋಳಿಲ್ಲದ ಮಾದರಿಯಲ್ಲಿ ಲಾಕೆಟ್‌ನೊಂದಿಗೆ ಡಿಸೈನರ್‌ ವೇರ್‌ ರೀತಿಯಲ್ಲಿ ರೆಡಿ ಮಾಡಿ.

ಇರಾನ್‌ to ಈಜಿಪ್ಟ್‌: ಇಲ್ಲಿದೆ ಕನಿಷ್ಠ ವಿವಾಹ ವಯಸ್ಸು ಹೊಂದಿರುವ 8 ದೇಶ

ವೀಕೆಂಡ್‌ ಪಾರ್ಟಿಗೆ 8 ಟ್ರೆಂಡಿ ಡ್ರೆಸ್‌ಗಳು!

ಕಿಡ್ನಿ ಆರೋಗ್ಯಕ್ಕೆ ಈ ಫುಡ್ ತಪ್ಪಿಸಿ, ಯೂರಿಕ್ ಹೆಚ್ಚಿರೋ ಆಹಾರ ಬಿಟ್ಹಾಕಿ!

69ನೇ ವರ್ಷದಲ್ಲೂ ಆಕರ್ಷಕವಾಗಿ ಕಾಣುವ ಬಾಲಿವುಡ್ ನಟಿ ರೇಖಾ, ಅದಕ್ಕೆ ಕಾರಣವಿದು!