ಸರ್ಕಾರಿ ಶಾಲೆಗೆ ಸಚಿವ ಶಿವರಾಜ್ ತಂಗಡಗಿ ಕುಟುಂಬ 1 ಎಕರೆ ಭೂಮಿದಾನ ನೀಡುವ ಮೂಲಕ ಶಿಕ್ಷಣ ಪ್ರೇಮ ಮೆರೆದಿದೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಾಪುರ ಸಿಮಾದ ಸರ್ವೆ ನಂ. 86/1/9ರಲ್ಲಿನ 1 ಎಕರೆ ಭೂಮಿಯನ್ನು ಶಾಲೆಗೆ ದಾನ ನೀಡಿದೆ.
ಈ ಭೂಮಿಯನ್ನು ವರ್ಷದ ಹಿಂದೆ ಸಚಿವ ತಂಗಡಗಿ ಅವರ ತಾಯಿ ಹುಲಿಗೆಮ್ಮ ಅವರು ₹9.50 ಲಕ್ಷ ಕೊಟ್ಟು ಖರೀದಿಸಿದ್ದರು. ಇದೀಗ ಈ ಭೂಮಿಯನ್ನು ಶಾಲೆಗೆ ನೀಡುವ ಮೂಲಕ ಬಡ ಮಕ್ಕಳಿಗೆ ಆಸರೆಯಾಗಿದ್ದಾರೆ.
ಇದೀಗ ಸಚಿವರ ತಾಯಿ ಹುಲಿಗೆಮ್ಮ ಬಿಇಒ ನಟೇಶ್ ಅವರೊಂದಿಗೆ ಕಾರಟಗಿಯ ನೋಂದಣಿ ಕಚೇರಿಗೆ ತೆರಳಿ ತಮ್ಮ ಹೆಸರಿನಲ್ಲಿದ್ದ ಭೂಮಿಯನ್ನು ರಾಜ್ಯಪಾಲರ ಹೆಸರಿಗೆ ವರ್ಗಾವಣೆ ಮಾಡಿಸಿದ್ದಾರೆ.