Kannada

ಭಾರತದಲ್ಲಿ ಮಾತ್ರ ಕಂಡುಬರುವ 10 ವಿಶಿಷ್ಟ ಪ್ರಾಣಿಗಳು

ಭಾರತದ ಶ್ರೀಮಂತ ಜೀವವೈವಿಧ್ಯವು ಒಂದು ದೊಡ್ಡ ನೈಸರ್ಗಿಕ ನಿಧಿ. ಭೂಮಿಯ ಮೇಲೆ ಬೇರೆಲ್ಲಿಯೂ ಕಂಡುಬರದ ಹಲವು ಪ್ರಭೇದಗಳು ಭಾರತದಲ್ಲಿವೆ. ಅಂತಹ 10 ವಿಶಿಷ್ಟ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ.

Kannada

1. ಏಷ್ಯಾಟಿಕ್ ಸಿಂಹ

ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನವು ಏಷ್ಯಾಟಿಕ್ ಸಿಂಹಗಳಿಗೆ ನೆಲೆ. ಇವು ಆಫ್ರಿಕನ್ ಸಿಂಹಗಳಿಗಿಂತ ಭಿನ್ನ. ಗುಚ್ಛದ ಬಾಲ, ಹೊಟ್ಟೆಯ ಮೇಲೆ ಮಡಿಕೆ ಚರ್ಮ ಮತ್ತು ತಲೆಯ ಮೇಲೆ ತೆಳುವಾದ ಸುರುಳಿ ಹೊಂದಿದೆ.

Kannada

2. ಸಂಗೈ ಜಿಂಕೆ

ಸಂಗೈ ಜಿಂಕೆಗಳು ಮಣಿಪುರದ ಕೆಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನವನದಲ್ಲಿ ಮಾತ್ರ ಕಂಡುಬರುತ್ತವೆ. ತೇಲುವ ಹುಲ್ಲುಗಾವಲುಗಳಲ್ಲಿ (ಫುಮ್ಡಿ) ಜಿಗಿಯುವ ಅಭ್ಯಾಸದಿಂದಾಗಿ "ನರ್ತಿಸುವ ಜಿಂಕೆ" ಎಂದೂ ಕರೆಯುತ್ತಾರೆ.

Kannada

3. ನೀಲಗಿರಿ ತಹರ್

ನೀಲಗಿರಿ ತಹರ್ ನೀಲಗಿರಿ ಬೆಟ್ಟಗಳು ಮತ್ತು ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ.

Kannada

4. ಕಾಶ್ಮೀರ ಜಿಂಕೆ

ಕಾಶ್ಮೀರದ ದಾಚಿಗಾಮ್ ರಾಷ್ಟ್ರೀಯ ಉದ್ಯಾನವನ ಮತ್ತು ಕೆಲವೊಮ್ಮೆ ಹಿಮಾಚಲ ಪ್ರದೇಶದ ಉತ್ತರ ಚಂಬಾ ಜಿಲ್ಲೆಯಲ್ಲಿ ಕಂಡುಬರುವ ಕೆಂಪು ಜಿಂಕೆಗಳ ಈ ಉಪಜಾತಿಯನ್ನು ಹಂಗುಲ್ ಎಂದೂ ಕರೆಯುತ್ತಾರೆ.

Kannada

5. ಪಿಗ್ಮಿ ಹಂದಿ

ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಪಿಗ್ಮಿ ಹಂದಿಗಳು ಕಂಡುಬರುತ್ತವೆ. ಇವು ಪ್ರಪಂಚದ ಅತ್ಯಂತ ಚಿಕ್ಕ ಮತ್ತು ಅಪರೂಪದ ಕಾಡು ಹಂದಿಗಳು. ಇವುಗಳ ಸಂಖ್ಯೆ 250 ಕ್ಕಿಂತ ಕಡಿಮೆ.

Kannada

6. ನೀಲಗಿರಿ ನೀಲಿ ರಾಬಿನ್

ನೀಲಗಿರಿ ಶೋಲಾಕಿಲ್ಲಿಸ್ ಎಂದೂ ಕರೆಯಲ್ಪಡುವ ಈ ಭವ್ಯವಾದ ಪಕ್ಷಿ ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳು ಮತ್ತು ದಕ್ಷಿಣ ಭಾರತದ ಬೆಟ್ಟಗಳಲ್ಲಿ ಕಂಡುಬರುತ್ತದೆ.

Kannada

7. ಗಂಗಾ ನದಿ ಡಾಲ್ಫಿನ್

ಗಂಗಾ ನದಿ ಡಾಲ್ಫಿನ್‌ಗಳ ಸಂಖ್ಯೆ 3750. ಇವು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಇವು ಗಂಗಾ ಮತ್ತು ಅದರ ಉಪನದಿಗಳಲ್ಲಿ ವಾಸಿಸುತ್ತವೆ.

Kannada

8. ಅಂಡಮಾನ್ ಕಾಡುಹಂದಿ

ಅಂಡಮಾನ್ ಕಾಡುಹಂದಿ ಬಲಿಷ್ಠ ದೇಹವನ್ನು ಹೊಂದಿದೆ. ಇದು ಅಂಡಮಾನ್ ದ್ವೀಪದ ದಟ್ಟ ಕಾಡುಗಳಲ್ಲಿ ಬೆಳೆಯುತ್ತದೆ. ಇದು ಉಷ್ಣವಲಯದ ಪ್ರದೇಶದಲ್ಲಿ ಕಂಡುಬರುವ ಬೇರುಗಳು, ಹಣ್ಣುಗಳು ಮತ್ತು ಸಣ್ಣ ಜೀವಿಗಳನ್ನು ತಿನ್ನುತ್ತದೆ.

Kannada

9. ನೇರಳೆ ಕಪ್ಪೆ

ನೇರಳೆ ಕಪ್ಪೆಯ ದೇಹ ಉಬ್ಬಿಕೊಂಡಿರುತ್ತದೆ, ತಲೆ ಚಿಕ್ಕದಾಗಿರುತ್ತದೆ. ಮೂತಿ ಮೊನಚಾಗಿರುತ್ತದೆ. ಇದು ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತದೆ. ಹೆಚ್ಚಿನ ಜೀವನ  ನೆಲದಲ್ಲಿರುತ್ತದೆ. ಮಳೆಗಾಲ ಕೆಲವು ದಿನ ಮಾತ್ರ ಹೊರಬರುತ್ತದೆ.

Kannada

10. ನಿಕೋಬಾರ್ ಮೆಗಾಪೋಡ್

ನಿಕೋಬಾರ್ ದ್ವೀಪಸಮೂಹದ ಸ್ಥಳೀಯ, ಈ ನೆಲವಾಸಿ ಪಕ್ಷಿ ತನ್ನ ವಿಶಿಷ್ಟ ಗೂಡು ನಿರ್ಮಾಣ ನಡವಳಿಕೆಗೆ ಹೆಸರುವಾಸಿಯಾಗಿದೆ.

ಆಪರೇಷನ್ ಸಿಂದೂರ್ ನಾಯಕ ಏರ್ ಮಾರ್ಷಲ್ ಎ.ಕೆ. ಭಾರ್ತಿ ಯಾರು?

ವಿಶ್ವದ ಅತಿದೊಡ್ಡ ವಿವೇಕಾನಂದರ ಪ್ರತಿಮೆ ಎಲ್ಲಿ ಸ್ಥಾಪನೆ? ಶಿಲ್ಪಿ ಯಾರು ಗೊತ್ತಾ?

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್: ಇಲ್ಲಿದೆ ಇವರ ಹೆಸರಿನ ಅದ್ಭುತ ರಹಸ್ಯ?

ಹಿಂದೂ ಕುಟುಂಬದಲ್ಲಿ ಜನಸಿದ ಮುಹಮ್ಮದ್ ಅಲಿ ಜಿನ್ನಾ ಮುಸ್ಲಿಮನಾಗಿದ್ದು ಏಕೆ?