Hockey

ಶ್ರೀಜೇಶ್ ಗೌರವಾರ್ಥ 16 ನಂಬರ್ ಜೆರ್ಸಿ ನಿವೃತ್ತಿ

ಭಾರತೀಯ ಪುರುಷ ಹಾಕಿ ತಂಡದ ಯಾವ ಆಟಗಾರರು ಕೂಡ ಇನ್ನು ಮುಂದೆ 16 ನಂಬರ್ ಜೆರ್ಸಿ ಧರಿಸುವುದಿಲ್ಲ ಎಂದು ಹಾಕಿ ಇಂಡಿಯಾ ಘೋಷಿಸಿದೆ. ಪಿ ಆರ್ ಶ್ರೀಜೇಶ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಿವೃತ್ತಿಯ ನಂತರ ಕೋಚಿಂಗ್ ಆರಂಭಿಸಲಿದ್ದಾರೆ ಶ್ರೀಜೇಶ್

ಹಾಕಿಯಿಂದ ನಿವೃತ್ತಿ ಹೊಂದಿದ ನಂತರ ಭವಿಷ್ಯದಲ್ಲಿ ಭಾರತದ ಹಿರಿಯರ ತಂಡದ ಕೋಚ್ ಆಗುವ ಹಂಬಲವಿದೆ ಎಂದು ಪಿ ಆರ್ ಶ್ರೀಜೇಶ್ ಹೇಳಿದ್ದಾರೆ. ರಾಷ್ಟ್ರೀಯ ಜೂನಿಯರ್ ತಂಡದ ಕೋಚ್ ಆಗಿ ಅವರು ಕೆಲಸ ಆರಂಭಿಸಲಿದ್ದಾರೆ.

ಜೂನಿಯರ್ ಆಟಗಾರರು 16 ನಂಬರ್ ಜೆರ್ಸಿ ಧರಿಸಬಹುದು

ಭಾರತದ ಪುರುಷರ ಹಿರಿಯರ ತಂಡದ ಆಟಗಾರರು ಇನ್ನು ಮುಂದೆ 16 ನಂಬರ್ ಜೆರ್ಸಿ ಧರಿಸುವುದಿಲ್ಲವಾದರೂ, ಜೂನಿಯರ್ ಆಟಗಾರರು ಈ ಜೆರ್ಸಿಯನ್ನು ಧರಿಸಬಹುದು ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ವೊಲಾನಾಥ್ ಸಿಂಗ್ ಹೇಳಿದ್ದಾರೆ.

ಭವಿಷ್ಯದ ತಾರೆಗಳನ್ನು ರೂಪಿಸಲಿದ್ದಾರೆ ಶ್ರೀಜೇಶ್

ಭಾರತದ ರಾಷ್ಟ್ರೀಯ ಜೂನಿಯರ್ ಹಾಕಿ ತಂಡದ ಕೋಚ್ ಆಗಿ ಯುವ ಆಟಗಾರರನ್ನು ರೂಪಿಸುವ ಕೆಲಸ ಮಾಡಲಿದ್ದಾರೆ ಪಿ ಆರ್ ಶ್ರೀಜೇಶ್.

ದ್ರಾವಿಡ್ ಅವರಂತೆ ಕೋಚ್ ಆಗಿ ಯಶಸ್ಸು: ಶ್ರೀಜೇಶ್

‘ನಾನು ಜೂನಿಯರ್ ತಂಡದ ಕೋಚ್ ಆಗಿ ಕೆಲಸ ಆರಂಭಿಸಲು ಬಯಸುತ್ತೇನೆ. ರಾಹುಲ್ ದ್ರಾವಿಡ್ ಅವರನ್ನು ಅನುಸರಿಸಿ ಮುಂದುವರಿಯುವುದು ನನ್ನ ಗುರಿ. ಯುವ ಆಟಗಾರರನ್ನು ರೂಪಿಸಲು ಬಯಸುತ್ತೇನೆ’ ಎಂದು ಪಿ ಆರ್ ಶ್ರೀಜೇಶ್ ಹೇಳಿದ್ದಾರೆ.

ಹಿರಿಯರ ತಂಡದ ಕೋಚ್ ಆಗಲು 8 ವರ್ಷಗಳ ಯೋಜನೆ

2033 ರಲ್ಲಿ ಭಾರತದ ಹಿರಿಯರ ತಂಡದ ಕೋಚ್ ಆಗಲು ಬಯಸುತ್ತೇನೆ ಎಂದು ಪಿ ಆರ್ ಶ್ರೀಜೇಶ್ ಹೇಳಿದ್ದಾರೆ. ಅಲ್ಲಿಯವರೆಗೆ ಜೂನಿಯರ್ ಆಟಗಾರರನ್ನು ತಯಾರು ಮಾಡಲು ಬಯಸುತ್ತೇನೆ ಎಂದಿದ್ದಾರೆ.

2025ರ ಜೂನಿಯರ್ ವಿಶ್ವಕಪ್ ಗುರಿ: ಶ್ರೀಜೇಶ್

2025 ರಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡುವುದು ಶ್ರೀಜೇಶ್ ಅವರ ಗುರಿಯಾಗಿದೆ.