ಬಿಳಿ ಅಥವಾ ಕಪ್ಪು ಎಳ್ಳು ಆರೋಗ್ಯಕ್ಕೆ ತುಂಬಾನೆ ಉತ್ತಮ. ಪ್ರತಿದಿನ ಹುರಿದ ಎಳ್ಳು ಸೇವಿಸೋದರಿಂದ ನಿಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಸಿಗುತ್ತದೆ.
health-life Feb 14 2025
Author: Pavna Das Image Credits:Pixabay
Kannada
ಬಾದಾಮಿ
5 ರಿಂದ 6 ಬಾದಾಮಿಯನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಎದ್ದು ಅದರ ಸಿಪ್ಪೆ ತೆಗೆದು ತಿನ್ನಿ.
Image credits: Pixabay
Kannada
ಕಿತ್ತಳೆ
ಕಿತ್ತಳೆ ಹಣ್ಣಿನಲ್ಲೂ ಕ್ಯಾಲ್ಶಿಯಂ ಇದ್ದು, ಇದನ್ನು ನಿಯಮಿತವಾಗಿ ಸೇವಿಸೋದು ಆರೋಗ್ಯಕ್ಕೆ ಉತ್ತಮ.
Image credits: Pixabay
Kannada
ಹುರುಳಿ ಕಾಳು
ನೀವು ಹುರುಳಿ ಕಾಳು ಸಾರು, ಪಲ್ಯ ಅಥವಾ ವಾರಕ್ಕೆ ಒಂದು ಬಾರಿ ಹುರುಳಿ ಬಸ್ಸರು ಮಾಡಿಯಾದರೂ ಸೇವಿಸಿ.
Image credits: Pexel
Kannada
ಪಾಲಕ್
ಪಾಲಕ್ ಸೊಪ್ಪಿನಲ್ಲೂ ಹೆಚ್ಚಿನ ಪ್ರಮಾಣದ ಕ್ಯಾಲ್ಶಿಯಂ ಇದ್ದು, ಇದನ್ನು ನೀವು ಪಲ್ಯ, ಸೊಪ್ಪು ಸಾರು, ಮಾಡಿಯಾದರೂ ಸೇವಿಸಬಹುದು.
Image credits: Getty
Kannada
ಅಂಜೂರ
ಇದು ಕೂಡ ಕ್ಯಾಲ್ಶಿಯಂ ಹೊಂದಿದೆ. ಇದನ್ನೂ ಕೂಡ ನೀವು ನಿಯಮಿತವಾಗಿ ಸೇವನೆ ಮಾಡಬಹುದು.
Image credits: social media
Kannada
ರಾಗಿ
ರಾಗಿ ಕೂಡ ಕ್ಯಾಲ್ಶಿಯಂ ಮೂಲವಾಗಿದೆ, ರಾಗಿ ದೋಸೆ, ರಾಗಿ ಮುದ್ದೆ, ರಾಗಿ ರೊಟ್ಟಿ ಹೀಗೆ ಯಾವುದೇ ವಿಧಾನದಲ್ಲೂ ನೀವು ರಾಗಿ ಸೇವನೆ ಮಾಡಬಹುದು.
Image credits: Getty
Kannada
ಮಖಾನ
ಅಂದರೆ ಕಮಲದ ಬೀಜಗಳು, ಇದನ್ನು ನೀವು ಸ್ನಾಕ್ಸ್ ಥರ ಸೇವನೆ ಮಾಡಬಹುದು. ಇದರಿಂದ ದೇಹಕ್ಕೆ ಅಗತ್ಯ ಇರುವ ಕ್ಯಾಲ್ಶಿಯಂ ಸಿಗುತ್ತೆ.
Image credits: Getty
Kannada
ನುಗ್ಗೆ ಸೊಪ್ಪು
ಮೊರಿಂಗಾ ಅಥವಾ ನುಗ್ಗೆ ಸೊಪ್ಪಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಹಲವಾರು ಅಂಶಗಳು ಸೇರಿವೆ. ಹಾಗಾಗಿ ಪ್ರತಿದಿನ ಒಂದು ಹಿಡಿ ನುಗ್ಗೆ ಸೊಪ್ಪು ಸೇವಿಸಿದ್ರೆ ಸಾಕು ಕ್ಯಾಲ್ಶಿಯಂ ಪೂರೈಕೆಯಾಗುತ್ತೆ.
Image credits: Getty
Kannada
ಬೆಂಡೆಕಾಯಿ
ತರಕಾರಿಯಾಗಿರುವ ಬೆಂಡೆಕಾಯಿಯಲ್ಲೂ ಕ್ಯಾಲ್ಸಿಯಂ ಹೆಚ್ಚಾಗಿದ್ದು, ಇದನ್ನು ಸಹ ನಿವು ಹಾಲಿನ ಬದಲಾಗಿ ದೇಹದಲ್ಲಿ ಕ್ಯಾಲ್ಶಿಯಂ ಹೆಚ್ಚಿಸಲು ಸೇರಿಸಬಹುದು.