Health
ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡಲು ರಾತ್ರಿ ತಿನ್ನಬಹುದಾದ ಕೆಲವು ಲಘು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮೊಳಕೆ ಕಟ್ಟಿದ ಬೀಜಗಳಲ್ಲಿ ಪ್ರೋಟೀನ್, ನಾರಿನಂಶ, ಜೀವಸತ್ವಗಳು, ಪೊಟ್ಯಾಸಿಯಮ್, ಮೆಗ್ನೀಷಿಯಮ್, ಫೋಲೇಟ್ ಇತ್ಯಾದಿಗಳಿವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವೂ ಇದೆ.
ಹೆಚ್ಚಿನ ನಾರಿನಂಶ ಹೊಂದಿರುವ ಕಡಲೆಯಲ್ಲಿ ಪ್ರೋಟೀನ್ ಕೂಡ ಹೇರಳವಾಗಿದೆ. ಹಾಗಾಗಿ ಬೇಯಿಸಿದ ಕಡಲೆ ಲಘು ಆಹಾರವಾಗಿ ಒಳ್ಳೆಯದು.
ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾದ ಬ್ಲೂಬೆರ್ರಿ ಸೇವನೆಯು ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚಿನ ನಾರಿನಂಶವಿರುವ ಬೇಯಿಸಿದ ಗೆಣಸು ರಾತ್ರಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯಕರ ಕೊಬ್ಬು, ಪ್ರೋಟೀನ್, ನಾರಿನಂಶ ಹೊಂದಿರುವ ಬಾದಾಮಿ, ವಾಲ್ನಟ್ಸ್, ಚಿಯಾ ಬೀಜಗಳು ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತವೆ.
ಕ್ಯಾಪ್ಸಿಕಂ, ಕ್ಯಾರೆಟ್, ಸೌತೆಕಾಯಿ, ಬ್ರೊಕೊಲಿ ಇತ್ಯಾದಿಗಳಿಂದ ತಯಾರಿಸಿದ ಸಲಾಡ್ ರಾತ್ರಿ ತಿನ್ನುವುದು ಒಳ್ಳೆಯದು.
ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ.