Kannada

ಓದಿದ್ದು ನೆನಪಿರಲ್ವಾ ?

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕೇವಲ ಅಧ್ಯಯನವಲ್ಲ, ಗಮನ ಕೇಂದ್ರೀಕರಿಸಿ ಕಲಿಯುವುದು ಅಷ್ಟೇ ಮುಖ್ಯ. ಆದರೆ, ಅನೇಕ ಪೋಷಕರ ದೂರು "ಮಕ್ಕಳು ಬೇಗ ಮರೆತುಬಿಡುತ್ತಾರೆ", "ಓದಿದ್ದು ನೆನಪಿರುವುದಿಲ್ಲ" ಎಂದು.

Kannada

ಸಾಕಷ್ಟು ನಿದ್ರೆ ಅಗತ್ಯ

ಮಕ್ಕಳಿಗೆ ಪ್ರತಿದಿನ 8-10 ತಾಸು ನಿದ್ರೆ ಬಹಳ ಮುಖ್ಯ. ನಿದ್ರೆಯಿಂದ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಕಲಿತ ವಿಷಯ ಚೆನ್ನಾಗಿ ನೆನಪಿನಲ್ಲಿರುತ್ತದೆ. 

Image credits: social media
Kannada

ಮೆದುಳಿಗೆ ಪೌಷ್ಟಿಕ ಆಹಾರ

ಬಾದಾಮಿ, ವಾಲ್ನಟ್, ಹಣ್ಣುಗಳು, ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಹಾಲು ಮೆದುಳಿನ ಬೆಳವಣಿಗೆಗೆ ಪೌಷ್ಟಿಕಾಂಶ ಒದಗಿಸುತ್ತವೆ. ಪ್ರತಿದಿನ ಈ ಆಹಾರ ನೀಡುವುದರಿಂದ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ.

Image credits: social media
Kannada

ಧ್ಯಾನ ಮತ್ತು ಉಸಿರಾಟದ ವ್ಯಾಯಾಮ

ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳು ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ದಿನಕ್ಕೆ 5-10 ನಿಮಿಷಗಳ ಧ್ಯಾನ ಕೂಡ ತುಂಬಾ ಪ್ರಯೋಜನಕಾರಿ.

Image credits: social media
Kannada

ರಿವಿಷನ್ ಅಭ್ಯಾಸ

ಶಾಲಾ ಪಾಠಗಳನ್ನು ಪ್ರತಿದಿನ ಸ್ವಲ್ಪ ಸ್ವಲ್ಪ ಪುನರಾವರ್ತನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಪದೇ ಪದೇ ಓದುವುದರಿಂದ ಮಾಹಿತಿ ಮೆದುಳಿನಲ್ಲಿ ದೀರ್ಘಕಾಲ ಉಳಿಯುತ್ತದೆ.

Image credits: social media
Kannada

ಮೆದುಳಿಗೆ ಚಾಲನೆ ನೀಡುವ ಆಟಗಳು

ಪದಬಂಧ, ಒಗಟುಗಳು, ಚದುರಂಗ, ಮೆಮೊರಿ ಆಟಗಳು - ಈ ಆಟಗಳು ಮಕ್ಕಳ ಚಿಂತನಾ ಶಕ್ತಿಯನ್ನು ಹೆಚ್ಚಿಸುತ್ತವೆ.

Image credits: social media

ವಿಟಮಿನ್ ಡಿ ಕೊರತೆಯಾದ್ರೆ ಹೀಗೆಲ್ಲಾ ಆಗುತ್ತೆ ಎಚ್ಚರ!

ರಾತ್ರಿ ಹಾಲಿಗೆ ಖರ್ಜೂರ ಬೆರೆಸಿ ಕುಡಿದರೆ ಸಿಗುತ್ತೆ ಹಲವು ಅದ್ಭುತ ಪ್ರಯೋಜನಗಳು

ತೂಕ ಇಳಿಕೆಯಷ್ಟೇ ಅಲ್ಲ, ಮಧುಮೇಹಕ್ಕೂ ದಿವ್ಯೌಷಧ ಬ್ಲಾಕ್ ಕಾಫಿ: ಹೇಗೆ ಅಂತೀರಾ?

ಇವೇ ನೋಡಿ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಟಿಕ ಹಣ್ಣು