Kannada

ಎಳ್ಳು

Kannada

ಎಳ್ಳಿನ ಪ್ರಯೋಜನಗಳು

ಚಳಿಗಾಲದಲ್ಲಿ ಎಳ್ಳನ್ನು ತಿನ್ನುವುದರಿಂದ ಹಲವು ಲಾಭಗಳಿವೆ. ಇವುಗಳಲ್ಲಿ ಕಬ್ಬಿಣದ ಜೊತೆಗೆ ಒಮೆಗಾ ಕೊಬ್ಬಿನಾಮ್ಲಗಳು ಹೇರಳವಾಗಿವೆ. ಇವುಗಳಲ್ಲಿರುವ ಉರಿಯೂತ ನಿವಾರಕ ಗುಣಗಳು ಕೀಲು ನೋವುಗಳನ್ನು ಕಡಿಮೆ ಮಾಡುತ್ತವೆ. 

Kannada

ಎಳ್ಳಿನಿಂದ ದೇಹಕ್ಕೆ ಶಕ್ತಿ

ಎಳ್ಳಿನಲ್ಲಿ ನಾರಿನಂಶ, ಪ್ರೋಟೀನ್‌, ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು ಹೇರಳವಾಗಿವೆ. ಅಲ್ಲದೆ ಎಳ್ಳು ಕ್ಯಾಲ್ಸಿಯಂ, ಕಬ್ಬಿಣದ ಕೊರತೆಯನ್ನೂ ನೀಗಿಸುತ್ತದೆ. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 

Kannada

ಎಳ್ಳನ್ನು ಹೆಚ್ಚಾಗಿ ತಿನ್ನಬೇಡಿ

ಎಳ್ಳನ್ನು ಹೆಚ್ಚಾಗಿ ತಿಂದರೆ ಕಫ, ಪಿತ್ತ ಅಸಮತೋಲನಗೊಳ್ಳುತ್ತವೆ. ಇವುಗಳನ್ನು ಪ್ರತಿದಿನ ಹೆಚ್ಚಾಗಿ ತಿಂದರೆ ಮುಟ್ಟಿನಲ್ಲಿ ರಕ್ತಸ್ರಾವ ಹೆಚ್ಚಾಗುತ್ತದೆ. ಇದರಿಂದ ಕಬ್ಬಿಣದ ಕೊರತೆ ಉಂಟಾಗುತ್ತದೆ. 

Kannada

ಗರ್ಭಿಣಿಯರು ಎಳ್ಳು ತಿನ್ನಬಾರದು

ಎಳ್ಳಿನಲ್ಲಿ ದೇಹವನ್ನು ಬೆಚ್ಚಗಾಗಿಸುವ ಗುಣವಿರುವುದರಿಂದ ಇವುಗಳನ್ನು ಗರ್ಭಿಣಿಯರು ಹೆಚ್ಚಾಗಿ ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 

Kannada

ರಕ್ತದಲ್ಲಿ ಸಕ್ಕರೆ ಹೆಚ್ಚಾಗುತ್ತದೆ

ಚಳಿಗಾಲದಲ್ಲಿ ಎಳ್ಳಿನ ಲಡ್ಡು ಹೆಚ್ಚಾಗಿ ತಿಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತವೆ. ಆದ್ದರಿಂದ ಇವುಗಳನ್ನು ಮಧುಮೇಹ ರೋಗಿಗಳು ಹೆಚ್ಚಾಗಿ ತಿನ್ನಬಾರದು ಎನ್ನುತ್ತಾರೆ. 

Kannada

ಅಲರ್ಜಿ

ಹಲವರಿಗೆ ಎಳ್ಳಿನಿಂದ ಅಲರ್ಜಿ ಇರುತ್ತದೆ. ಆದ್ದರಿಂದ ಅಂಥವರು ಇವುಗಳನ್ನು ತಿನ್ನುವಾಗ ತುಂಬಾ ಜಾಗ್ರತೆಯಿಂದ ಇರಬೇಕು. ಇಲ್ಲದಿದ್ದರೆ ಅಲರ್ಜಿ ದೇಹದಾದ್ಯಂತ ಬರುತ್ತದೆ. 

Kannada

ಜೀರ್ಣಕ್ರಿಯೆ ಸಮಸ್ಯೆಗಳು

ಎಳ್ಳು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಏಕೆಂದರೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ಹೊಟ್ಟೆ ಉಬ್ಬರ, ಮಲಬದ್ಧತೆ ಮುಂತಾದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. 

ತೂಕ ಇಳಿಸಲು ಅಕ್ಕಿಗೆ ಬದಲಾಗಿ 7 ಸೂಪರ್‌ಫುಡ್ಸ್

ವಿಟಮಿನ್ C ಸಮೃದ್ಧವಾಗಿರುವ ಟಾಪ್ 5 ಹಣ್ಣುಗಳು, ಮುಖದ ಸೌಂದರ್ಯ ಹೆಚ್ಚಿಸುತ್ತೆ

ಸೂಪರ್ ಪವರ್ ಇರುವ ಈ ಓಮದ ನೀರು, ತೂಕ ಕಡಿಮೆ ಮಾಡಲು ರಾಮಬಾಣ

HDL ಕೊಲೆಸ್ಟ್ರಾಲ್ ಹೆಚ್ಚಿಸಲು ಇಲ್ಲಿವೆ ನೋಡಿ ಟಿಪ್ಸ್!