ಪೋಷಕರು ತಮ್ಮ ಮುದ್ದಾದ ಬೇಗ ನಡೆಯುವಂತಾಗಲು ಅಂಗಡಿ, ಆನ್‌ಲೈನ್‌ನಲ್ಲಿ ಬೇಬಿ ವಾಕರ್ ಖರೀಸುತ್ತಾರೆ. ನಿಜಕ್ಕೂ ಬೇಬಿ ವಾಕರ್‌ಗಳು ನಿಮ್ಮ ಮಗುವಿಗೆ ಸುರಕ್ಷಿತವೇ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಇಲ್ಲಿ ತಿಳಿಯೋಣ.
ಬೇಬಿ ವಾಕರ್‌ಗಳು
ಬೇಬಿ ವಾಕರ್‌ಗಳು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಇವು ನಿಮ್ಮ ಮಕ್ಕಳು ನೈಸರ್ಗಿಕವಾಗಿ ನಡೆಯಲು ಕಲಿಯುವುದನ್ನು ತಡೆಯುತ್ತವೆ. ಕೀಲುಗಳು, ಸ್ನಾಯುಗಳ ನೈಸರ್ಗಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬೀಳುವ ಭಯ
ವಾಕರ್‌ಗಳ ಮೇಲೆ ಮಕ್ಕಳು ಸರಿಯಾಗಿ ನಡೆಯಲು ಕಲಿಯುವುದಿಲ್ಲ. ಆದರೆ ಬಹಳಷ್ಟು ಜನ ವಾಕರ್ ಇಲ್ಲದಿದ್ದರೆ ಬಿದ್ದುಬಿಡುತ್ತಾರೆ ಎಂದು ಭಯಪಟ್ಟು ಇವುಗಳನ್ನು ಬಳಸುತ್ತಾರೆ.
ಬೆರಳಿನ ಮೇಲೆ ಒತ್ತಡ
ಮಕ್ಕಳ ಎತ್ತರಕ್ಕೂ, ವಾಕರ್ ಎತ್ತರಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಇದರಿಂದ ಮಕ್ಕಳು ಬೆರಳಿನ ಮೇಲೆ ನಡೆಯುತ್ತವೆ. ಇದರಿಂದ ಮಕ್ಕಳು ಸರಿಯಾಗಿ ನಡೆಯುವುದಿಲ್ಲ. ಇತರರಿಗೂ, ಈ ಮಕ್ಕಳ ನಡಿಗೆಗೂ ಬಹಳ ವ್ಯತ್ಯಾಸವಿರುತ್ತದೆ.
ಕೀಲುಗಳು, ಮೂಳೆಗಳ ಮೇಲೆ ಒತ್ತಡ
ವಾಕರ್ ಅನ್ನು ಬಳಸುವುದರಿಂದ ಮಕ್ಕಳ ಬೆರಳುಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಕೀಲುಗಳು, ಮೂಳೆಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ.
ಸ್ನಾಯುಗಳ ದೌರ್ಬಲ್ಯ
ವಾಕರ್ ಅನ್ನು ಬಳಸುವುದರಿಂದ ಮಕ್ಕಳ ಕಾಲುಗಳ ಸ್ನಾಯುಗಳು, ತೊಡೆಗಳ ಬಲ ಸರಿಯಾಗಿ ಬೆಳೆಯುವುದಿಲ್ಲ. ಹಾಗೆಯೇ ದೇಹದ ಸಮತೋಲನ ಕೂಡ ಸರಿಯಾಗಿ ಇರುವುದಿಲ್ಲ ಎನ್ನುತ್ತಾರೆ ತಜ್ಞರು. ಸ್ನಾಯುಗಳ ಬಲ ಕಡಿಮೆಯಾಗುತ್ತದೆ.
ಭಯಪಡುತ್ತಾರೆ
ವಾಕರ್ ಅನ್ನು ಬಳಸುವ ಮಕ್ಕಳು ಅದರ ಮೇಲೆಯೇ ಅವಲಂಬಿತರಾಗಿ ನಡೆಯಲು ಕಲಿಯುತ್ತಾರೆ. ಇಂತಹ ಮಕ್ಕಳು ವಾಕರ್ ಇಲ್ಲದೆ ನಡೆಯಲು ಭಯಪಡುತ್ತಾರೆ. ಸ್ವಂತವಾಗಿ ನಡೆಯಲು ಕಲಿಯುವುದಿಲ್ಲ.