Festivals

ಪಾಪ ಕರ್ಮಗಳು ಕುಟುಂಬಕ್ಕೆ ತಟ್ಟದಂತೆ ಏನು ಮಾಡಬೇಕು?

ನಾವು ಮಾಡಿದ ಕರ್ಮ ಫಲಗಳನ್ನು ನಾವು ಮಾತ್ರ ಅನುಭವಿಸಬೇಕಾ? 

Image credits: google

ಪುಣ್ಯ ಫಲ ಮಾತ್ರ ಕುಟುಂಬಕ್ಕಿರಲಿ

ಪಾಪ ಕರ್ಮಗಳ ಫಲ ನಾನು ಅನುಭವಿಸುವಂತಾಗಲಿ ಎಂದರೆ ಆಗುತ್ತಾ? 

ಭಕ್ತನೊಬ್ಬ ಬಾಬಾರನ್ನು ಕೇಳಿದ ಪ್ರಶ್ನೆ

‘ನನ್ನ ಪಾಪಗಳು ಮತ್ತು ತಪ್ಪು ಕೆಲಸಗಳ ಪರಿಣಾಮ ನನ್ನ ಕುಟುಂಬ ಮತ್ತು ಮಕ್ಕಳ ಮೇಲೆ ಬೀಳದಂತೆ ನಾನು ಏನು ಮಾಡಬೇಕು?’ 

ಸಾಮಾನ್ಯ ಪಾಪಗಳು ಬೇಗ ನಾಶವಾಗುತ್ತವೆ

ಪ್ರೇಮಾನಂದ ಮಹಾರಾಜರ ಪ್ರಕಾರ, ‘ನೀವು ಹೇಗೆ ಪಾಪ ಮಾಡಿದ್ದೀರಿ ಎಂಬುದನ್ನು ಮೊದಲು ಪರಿಗಣಿಸುವುದು ಮುಖ್ಯ. ಸಾಮಾನ್ಯ ಪಾಪವಾದರೆ ಭಗವಂತನ ನಾಮಸ್ಮರಣೆಯಿಂದಲೇ ಮುಕ್ತವಾಗುತ್ತವೆ.

ಪ್ರಾಯಶ್ಚಿತ್ತ ಮಾಡಿ

‘ಅಸಾಧಾರಣ ಪಾಪ ಮಾಡಿದ್ದರೆ, ಅದರ ಅಶುಭ ಫಲಗಳಿಂದ ಪಾರಾಗಲು  ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಪ್ರಾಯಶ್ಚಿತ್ತವಿಲ್ಲದೆ ಪಾಪ ನಾಶವಾಗುವುದಿಲ್ಲ.’

ಅಸಾಧಾರಣ ಪಾಪಗಳು ಯಾವವು?

‘ಗರ್ಭಪಾತ, ಮದ್ಯಪಾನ, ಪರಸ್ತ್ರೀ ಸಂಗ ಮತ್ತು ಮಾಂಸ ಸೇವನೆ  ಅಸಾಧಾರಣ ಪಾಪಗಳು ಆದರೆ ಇತ್ತೀಚಿಗೆ ಸಂಸಾರಸ್ಥರು ಈ ತಪ್ಪನ್ನು ಮಾಡೋದು ಸಾಮಾನ್ಯ. 

ಪಾಪ ಪರಿಣಾಮಕುಟುಂಬದ ಮೇಲೆ

‘ಈ ಅಸಾಧಾರಣ ಪಾಪಗಳನ್ನು ನಾಶಮಾಡಲು ಪ್ರಾಯಶ್ಚಿತ್ತ ಅಗತ್ಯ, ಇಲ್ಲದಿದ್ದರೆ ಈ ಪಾಪಗಳು ಇಡೀ ಕುಟುಂಬವನ್ನೇ ನಾಶಮಾಡುತ್ತದೆ.’

ಶ್ರೀಮದ್ಭಾಗವತದ ಪಠಿಸಿ

ಈ ಮಹಾಪಾಪಗಳನ್ನು ನಾಶಮಾಡಲು ಶ್ರೀಮದ್ಭಾಗವತದ ಸಾಪ್ತಾಹಿಕ ಪಾರಾಯಣವನ್ನು ಯಾವುದಾದರೂ ವಿದ್ವಾನ್‌ರಿಂದ ಮಾಡಿಸಿ. 

ದೊಡ್ಡದರಿಂದ ದೊಡ್ಡ ಪಾಪವೂ ನಾಶ

, ‘7 ದಿನಗಳಲ್ಲಿ ಶ್ರೀಮದ್ಭಾಗವತದ 18 ಸಾವಿರ ಶ್ಲೋಕಗಳನ್ನು ಸಂಸ್ಕೃತದಲ್ಲಿ ಪಠಿಸಿದರೆ ದೊಡ್ಡದರಿಂದ ದೊಡ್ಡ ಪಾಪವೂ ನಾಶವಾಗುತ್ತದೆ. ಶ್ರೀಮದ್ಭಾಗವತದ ಮಹಿಮೆ ಅಂತಹದ್ದು.’

ಈ ಪಾಪಗಳು ಮತ್ತೆ ಆಗಬಾರದು

‘ನಾವು ಯಾವ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದೇವೋ ಆ ಪಾಪಗಳು ಮತ್ತೆ ಆಗದಂತೆ ನೋಡಿಕೊಳ್ಳಬೇಕು. ಭಗವಂತ ಕೊನೆಯ ಕ್ಷಣದವರೆಗೂ ನಮಗೆ ಪಾಪಗಳನ್ನು ನಾಶಮಾಡಲು ಅವಕಾಶ ನೀಡುತ್ತಾನೆ.’

ಭಾರತದ ಟಾಪ್9 ಶ್ರೀಮಂತ ದೇವಾಲಯಗಳು

ಬಾಂಗ್ಲಾದೇಶದಲ್ಲಿರುವ ಪ್ರಾಚೀನ ಹಿಂದೂ ದೇವಾಲಯಗಳು ಮತ್ತು ಐತಿಹ್ಯ

ನಿಮ್ಮ ರಾಶಿಗೆ ಅನುಗುಣವಾಗಿ ಉತ್ತಮ ಉದ್ಯೋಗ ಯಾವುದು ಗೊತ್ತಾ?

ಆಗಸ್ಟ್ 11 ಇಂದಿನ ಅದೃಷ್ಟ ರಾಶಿಗಳು ಇವು