Festivals
ಆಚಾರ್ಯ ಚಾಣಕ್ಯನು ವ್ಯಕ್ತಿಯ ಮೂರು ಗುಣಗಳನ್ನು ಉಲ್ಲೇಖಿಸಿದ್ದಾನೆ, ಈ ಗುಣಗಳು ಚಿಕ್ಕ ವಯಸ್ಸಿನಲ್ಲಿಯೇ ಜನರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಚಾಣಕ್ಯನು ಈ ಮೂರು ಗುಣಗಳನ್ನು ಹೊಂದಿರುವವರು ಜೇಬು ಯಾವಾಗಲೂ ಹಣದಿಂದ ಕೂಡಿರುತ್ತೆ. ಅವರ ಸಂಪತ್ತು ಕೂಡ ಹೆಚ್ಚುತ್ತೆ ಎಂದಿದ್ದಾರೆ.
ಹಾಗಿದ್ರೆ ಯಾವ ಜನರು ಜನರು ಜೀವನದಲ್ಲಿ ಯಾವಾಗಲೂ ಇತರರಿಗಿಂತ ನಾಲ್ಕು ಹೆಜ್ಜೆ ಮುಂದಿರುತ್ತಾರೆ ಅನ್ನೋದನ್ನು ನೋಡೋಣ ಬನ್ನಿ.
ಚಾಣಕ್ಯನ ಪ್ರಕಾರ, ತಮ್ಮ ಮಾತಿನಲ್ಲಿ ಮಾಧುರ್ಯವನ್ನು ಹೊಂದಿರುವವರು ಜೀವನದಲ್ಲಿ ಬೇಗನೆ ಯಶಸ್ವಿಯಾಗುತ್ತಾರೆ. ಇವರ ಮಾತು ಕೇಳಿಯೇ ಜನರು ಸೋತು ಬಿಡುತ್ತಾರೆ.
ಮಧುರವಾಗಿ ಮಾತನಾಡುವ ಜನರು ತಮ್ಮ ಶತ್ರುಗಳನ್ನು ಸಹ ಸ್ನೇಹಿತರಾಗಿ ಪರಿವರ್ತಿಸಬಹುದು. ಹಾಗಾಗಿ ಇವರಿಗೆ ಜೀವನದಲ್ಲಿ ಯಶಸ್ಸು ಸಿಗೋದು ಸಹ ಸುಲಭವಾಗುತ್ತದೆ.
ಎರಡನೇಯದಾಗಿ ಸಮಯವನ್ನು ಗೌರವಿಸುವ ವ್ಯಕ್ತಿ ಜೀವನದಲ್ಲಿ ತ್ವರಿತವಾಗಿ ಪ್ರಗತಿ ಸಾಧಿಸುತ್ತಾರೆ. ಯಾರಿಗೆ ಸಮಯದ ಮಹತ್ವ ಗೊತ್ತಿರುತ್ತೋ ಅವರು ಯಾವ ಕೆಲಸದಲ್ಲೂ ವಿಳಂಬ ಮಾಡೋದಿಲ್ಲ.
ಸಮಯದ ಸರಿಯಾದ ಬಳಕೆಯು ಯಶಸ್ಸಿನ ಪ್ರಮುಖ ಮೆಟ್ಟಿಲಾಗಿದೆ. ಯಾರು ಸಮಯದ ಸದ್ಭಳಕೆ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
ಕೊನೆಯದಾಗಿ ದಾನ ಮಾಡುವ ಜನರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಚಾಣಕ್ಯನ ಪ್ರಕಾರ, ದಾನ ನೀಡುವುದು ವ್ಯಕ್ತಿಯ ಉದಾತ್ತ ಗುಣವಾಗಿದೆ. ಇತರರಿಗೆ ನೆರವಾಗುವ ಜನರ ಜೊತೆ ದೇವರು ಯಾವಾಗಲೂ ನಿಂತಿರುತ್ತಾನೆ.