ರಾಯಲ್ ಲುಕ್ ಪಡೆಯಲು ಕೂದಲು ಆಭರಣಗಳು ಉತ್ತಮವಾಗಿವೆ. ಹೂವಿನ ಕ್ಲಿಪ್, ಚೈನ್, ಸ್ಟೋನ್ ವರ್ಕ್‌ನಂತಹ ಹಲವು ವಿಧಗಳು ₹100 ಕ್ಕೆ ಲಭ್ಯವಿದೆ. ನಿಮ್ಮ ಕೇಶವಿನ್ಯಾಸಕ್ಕೆ ರಾಯಲ್ ಟಚ್ ನೀಡಿ!
ಅನೇಕ ಸ್ಟೋನ್, ಮುತ್ತುಗಳು ಮತ್ತು ಉದ್ದನೆಯ ನಾಣ್ಯ ಸರಪಳಿ ಹೀಗೆ ಕೂದಲು ಆಭರಣಗಳಲ್ಲಿ ವಿವಿಧ ಡಿಸೈನ್ ನಲ್ಲಿ ಲಭ್ಯವಿದೆ. ಫ್ರೆಂಚ್ ಜಡೆ ಮಾಡಿ ಅದಕ್ಕೆ ಕೂದಲು ಆಭರಣಗಳನ್ನು ಜೋಡಿಸಿ ಚೆಂದದ ಶೈಲಿಯನ್ನು ಪಡೆಯಿರಿ.
ಫೇರಿ ಲುಕ್ ಪಡೆಯಲು ಈ ರೀತಿಯ ಕೂದಲು ಆಭರಣಗಳು ಉತ್ತಮವಾಗಿರುತ್ತವೆ. ನೀವು ಸೀರೆ ಮತ್ತು ಎಥ್ನಿಕ್ ಉಡುಗೆಗಳ ಮೇಲೆ ಇಂತಹ ಇಂಡಿಯನ್ ಜಡೆಗಳನ್ನು ಮಾಡಿ ಅದಕ್ಕೆ ಹೂವಿನ ಕ್ಲಿಪ್ ಹೇರ್ ಆಕ್ಸೆಸರೀಸ್ ಸೇರಿಸಬಹುದು.
ನಿಮ್ಮ ಲುಕ್ ಅನ್ನು ವಿಶೇಷವಾಗಿಸಲು ನೀವು ಜಡೆ ಮತ್ತು ತೆರೆದ ಕೂದಲಿನಲ್ಲಿ ಇಂತಹ ಉದ್ದನೆಯ ಹೇರ್ ಕ್ಲಿಪ್ ಜ್ಯುವೆಲ್ಲರಿ ಆಕ್ಸೆಸರೀಸ್ ಅನ್ನು ಬಳಸಬಹುದು. ಕೂದಲನ್ನು ಕರ್ಲ್ ಮಾಡಿದರೆ ಸ್ಟೈಲಿಶ್ ಲುಕ್ ಸಿಗುತ್ತದೆ.
ಸರಳ ಕ್ಲಚರ್ ಮತ್ತು ಕ್ಲಿಪ್‌ಗಳನ್ನು ಬಿಟ್ಟು ನೀವು ಈ ರೀತಿಯ ಫ್ಯಾನ್ಸಿ ಲೇಯರಿಂಗ್ ಚೈನ್ ಕ್ಲಿಪ್ ಹೇರ್ ಆಕ್ಸೆಸರೀಸ್ ಅನ್ನು ಆಯ್ಕೆ ಮಾಡಬಹುದು. ಇದರ ಹಲವು ವಿಧಗಳು ಮಾರುಕಟ್ಟೆಯಲ್ಲಿ 100 ರೂ ಒಳಗಡೆ ನೋಡಲು ಸಿಗುತ್ತವೆ.
ಓಪನ್ ಹೇರ್ ಬಿಟ್ಟು ಸ್ಟೈಲಿಶ್ ಆಗಿ ಕಾಣಲು ಬಯಸಿದರೆ ಇಂತಹ ಸ್ಟೋನ್ ವರ್ಕ್ ಹೇರ್ ಆಕ್ಸೆಸರೀಸ್ ಅನ್ನು ಟ್ರೈ ಮಾಡಬಹುದು. ಬಣ್ಣಬಣ್ಣದ ಸ್ಟೋನ್‌ನಿಂದ ತೆರೆದ ಕೂದಲು ಮತ್ತು ಬ್ಯಾಂಡ್‌ನ ಹಾಫ್ ಕ್ಲಚ್‌ನಲ್ಲಿ ಹಾಕಿ.
ಮಾರುಕಟ್ಟೆಯಲ್ಲಿ ನಿಮಗೆ ಸುಮಾರು 20 ರೂಪಾಯಿಯಿಂದ 100 ರೂಪಾಯಿಗೆ ಇಂತಹ ಗೋಲ್ಡನ್ ಬಡ್ಸ್ ಹೇರ್ ಆಕ್ಸೆಸರೀಸ್ ನೋಡಲು ಸಿಗುತ್ತದೆ. ಇದರ ಜೊತೆಗೆ ಇದರಲ್ಲಿ ಬೇರೆ ಬೇರೆ ಬಣ್ಣ ,ವಿನ್ಯಾಸಗಳು ಸಹ ಸಿಗುತ್ತವೆ
ಇದರಲ್ಲಿ ನಿಮಗೆ ಸಾಕಷ್ಟು ಫ್ಯಾನ್ಸಿ ಆಯ್ಕೆಗಳು ಸುಲಭವಾಗಿ ನೋಡಲು ಸಿಗುತ್ತವೆ. ಈ ರೀತಿಯ ಕೂದಲು ಆಭರಣಗಳನ್ನು ನೀವು ಜಡೆ ಹಾಕಿರುವ ಕೂದಲಿನಲ್ಲಿ ಹಾಕಲು ಪ್ರಯತ್ನಿಸಿ. ಇದರಿಂದ ನಿಮ್ಮ ರೂಪ ಎದ್ದು ಕಾಣುತ್ತದೆ.