ಹಗುರವಾದ, ಹೂವಿನ, ಚೋಕರ್ ಮತ್ತು ಬ್ರೈಡಲ್ ಗೋಲ್ಡ್ ನೆಕ್ಲೇಸ್... ಇವೆಲ್ಲಾ ಇತ್ತೀಚಿನ ಕಲೆಕ್ಷನ್ಸ್. ಮದುವೆ ಮತ್ತು ದೈನಂದಿನ ಬಳಕೆಗೆ ಉತ್ತಮ ಆಯ್ಕೆ.
Kannada
8-10 ಗ್ರಾಂ ಚಿನ್ನದ ಹಾರ
ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ. ಚಿನ್ನದ ಹಾರ ಖರೀದಿಸುವುದು ಸುಲಭದ ಕೆಲಸವಲ್ಲ. ಆದಾಗ್ಯೂ, ಹಗುರವಾದ ಮತ್ತು ಸಿಂಪಲ್ ವಿನ್ಯಾಸವನ್ನು ಹುಡುಕುತ್ತಿದ್ದರೆ, ನೀವು 8-10 ಗ್ರಾಂ ಚಿನ್ನದ ಹಾರವನ್ನು ಖರೀದಿಸಬಹುದು.
Kannada
ಹೂವಿನ ಹಾರ
ಇತ್ತೀಚಿನ ದಿನಗಳಲ್ಲಿ ಇಂತಹ ಹೂವಿನ ಹಾರಗಳು ಬೇಡಿಕೆಯಲ್ಲಿವೆ. ಇದು ಸಾಮಾನ್ಯವಾಗಿ 10-15 ಗ್ರಾಂಗಳಷ್ಟಿರುತ್ತದೆ, ಲೈಟಾಗಿರುವ ಇದನ್ನು ಧರಿಸಿದ ನಂತರ ಬೇರೆ ಯಾವುದೇ ಆಭರಣದ ಅಗತ್ಯವಿರುವುದಿಲ್ಲ.
Kannada
ಮಂಗಳಸೂತ್ರ + ಚಿನ್ನದ ಹಾರದ ಸಂಯೋಜನೆ
ಮಂಗಳಸೂತ್ರ + ಚಿನ್ನದ ಹಾರದ ಸಂಯೋಜನೆಯನ್ನು ಧರಿಸುವ ಮೂಲಕ ನೀವು ಹೆಚ್ಚುವರಿ ಖರ್ಚನ್ನು ಉಳಿಸುವುದರ ಜೊತೆಗೆ ಫ್ಯಾಷನ್ ಅನ್ನು ಪ್ರದರ್ಶಿಸಬಹುದು. ಇವು ಟೈನಾಟ್ ವಿನ್ಯಾಸಗಳೊಂದಿಗೆ ಬರುತ್ತವೆ. ಕಸ್ಟಮೈಸ್ ಮಾಡಿದರೆ ಉತ್ತಮ.
Kannada
ಕೈಗೆಟಕುವ ಬೆಲೆ
ದೈನಂದಿನ ಬಳಕೆಗಾಗಿ ಚಿನ್ನದ ಮಾದರಿಯಲ್ಲಿ ಈ ಚಿನ್ನದ ಹಾರ ವಿನ್ಯಾಸವು ಉತ್ತಮ ಆಯ್ಕೆಯಾಗಿದೆ. ನೀವು ಹಗುರವಾದದ್ದನ್ನು ಹುಡುಕುತ್ತಿದ್ದರೆ, ನೀವು ಇದನ್ನು ಖರೀದಿಸಬಹುದು. ಅಂತಹ ಹಾರಗಳು 6-8 ಗ್ರಾಂಗಳಲ್ಲಿ ತಯಾರಾಗುತ್ತವೆ.
Kannada
ಮದುವೆಗೆ ಚಿನ್ನದ ಹಾರ
ಮಗಳಿಗೆ ಚಿನ್ನದ ಹಾರವನ್ನು ಮಾಡಿಸಬೇಕಾದರೆ, ಪೆಂಡೆಂಟ್‌ನೊಂದಿಗೆ ಹೂವಿನ ವರ್ಕ್ ಇರುವ ಇಂತಹ ಚಿನ್ನದ ಹಾರವನ್ನು ಖರೀದಿಸಿ. ಚಿನ್ನದ ಅಂಗಡಿಯಲ್ಲಿ ಈ ರೀತಿಯ ಚಿನ್ನದ ಹಾರಗಳು ನಿಮಗೆ ಹಲವು ವಿಧಗಳಲ್ಲಿ ಸಿಗುತ್ತವೆ.
Kannada
10 ಗ್ರಾಂ ಚಿನ್ನದ ಹಾರ
10 ಗ್ರಾಂನಲ್ಲಿ ಇಂತಹ ಹೂವಿನ ಚಿನ್ನದ ಹಾರ ವಿನ್ಯಾಸ ಸಿಗುತ್ತದೆ. ಸೆಲೆಬ್ರಿಟಿ ಫ್ಯಾಷನ್ ಇಷ್ಟಪಡುವವರು ಇದರಿಂದ ಸ್ಫೂರ್ತಿ ಪಡೆಯಬಹುದು. ಈ ರೀತಿಯ ಚಿನ್ನದ ಹಾರಗಳನ್ನು ಆರ್ಡರ್ ಮಾಡಿ ತಯಾರಿಸುವುದು ಉತ್ತಮ.