Fashion

ತಾಯಿ-ಮಗಳು ಒಂದೇ ಡ್ರೆಸ್‌ನಲ್ಲಿ ಮಿಂಚಿಂಗ್

ಶರಾರಾ ಸಲ್ವಾರ್ ಸೂಟ್

ಮಗಳೊಂದಿಗೆ ಒಂದೇ ರೀತಿಯ ಉಡುಗೆ ತೊಡುವುದು ಈಗ ಫ್ಯಾಷನ್. ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೆ  ಈ ರೀತಿಯ ಕಾಂಬಿನೇಷನ್‌ನ ಶರಾರಾ ಸೂಟ್ ಹೊಲಿಸಿ ಸಮಾರಂಭದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ

ಧೋತಿ ಸಲ್ವಾರ್ ಸೂಟ್

ಧೋತಿ ಸಲ್ವಾರ್ ಸೂಟ್‌ನ ಕ್ರೇಜ್ ಮತ್ತೆ ಹಿಂತಿರುಗಿದೆ. ಇವುಗಳು ಆರಾಮದ ಜೊತೆಗೆ ಅದ್ಭುತ ಸ್ಟೈಲ್ ನೀಡುತ್ತವೆ. ಮಗಳು ಇದನ್ನು ಸುಲಭವಾಗಿ ಧರಿಸಬಹುದು. ಇದನ್ನು ಹೊಲಿಸುವುದರ ಜೊತೆಗೆ ಖರೀದಿಸಬಹುದು. 

ಪಾಕಿಸ್ತಾನಿ ಸಲ್ವಾರ್ ಸೂಟ್

ನೆಟ್ ಬಟ್ಟೆಯ ಮೇಲೆ ಈ ಎ-ಲೈನ್ ಪಾಕಿಸ್ತಾನಿ ಸಲ್ವಾರ್ ಸೂಟ್ ತುಂಬಾ ಸುಂದರವಾಗಿ ಕಾಣುತ್ತದೆ. ಸರಳ ಲುಕ್ ಬೇಕಿದ್ದರೆ ಮಗಳೊಂದಿಗೆ ಒಂದೇ ರೀತಿಯ ಉಡುಗೆ ತೊಡಿ. ಇದನ್ನು ರೆಡಿಮೇಡ್ ಖರೀದಿಸುವ ಬದಲು ಹೊಲಿಸುವುದು ಉತ್ತಮ.

ಹೈ ಸ್ಲಿಟ್ ಸಲ್ವಾರ್ ಸೂಟ್

ಈ ಹೈ ಸ್ಲಿಟ್ ಸಲ್ವಾರ್ ಸೂಟ್ ಇಂಡೋ-ವೆಸ್ಟರ್ನ್ ಉಡುಪುಗಳಿಗೆ ಪೈಪೋಟಿ ನೀಡುತ್ತದೆ. ರಿವೀಲಿಂಗ್ ಲುಕ್ ಇಷ್ಟಪಟ್ಟರೆ ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ಸಿಲ್ಕ್ ಮತ್ತು ಟಿಶ್ಯೂ ಬಟ್ಟೆಗಳಿಂದ ಇಂತಹ ಸೂಟ್‌ ಹೊಲಿಸಬಹುದು.

ಪ್ರಿಂಟೆಡ್ ಸಲ್ವಾರ್ ಸೂಟ್

ಕಡಿಮೆ ಬಜೆಟ್‌ನಲ್ಲಿಯೂ ಮ್ಯಾಚಿಂಗ್ ಉಡುಪುಗಳನ್ನು ಹೊಲಿಸಬಹುದು. ನೀವು ಯಾವುದೇ ವೈಬ್ರೆಂಟ್ ಬಟ್ಟೆಯ ಮೇಲೆ ಎರಡು ಕುರ್ತಿಗಳನ್ನು ಮಾಡಿಸಿ. ಇದನ್ನು ಪ್ಯಾಂಟ್ ಅಥವಾ ಜೀನ್ಸ್‌ಗೆ ಮ್ಯಾಚ್ ಮಾಡಿ

ಕಾಲರ್ ನೆಕ್ ಸಲ್ವಾರ್ ಸೂಟ್

ಪಠಾಣಿ ಶೈಲಿಯ ಕಾಲರ್ ನೆಕ್ ಸೂಟ್ ಆಧುನಿಕ ಲುಕ್‌ಗೆ ಸೂಕ್ತವಾಗಿದೆ. ನೀವು ಪಾರ್ಟಿಗಳ ಜೊತೆಗೆ ಸಣ್ಣ-ಪುಟ್ಟ ಕಾರ್ಯಕ್ರಮಗಳಲ್ಲಿಯೂ ಇದನ್ನು ಧರಿಸಬಹುದು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 1000 ರೂಗೆ ಸಿಗುತ್ತವೆ.

ಕಲಿದಾರ್ ಕುರ್ತಿ ಪ್ಯಾಂಟ್ ಜೊತೆ

ರಾಣಿ ರಾಜಕುಮಾರಿಯಂತೆ ಕಾಣಬೇಕೆಂದರೆ ಕಲಿದಾರ್ ಕುರ್ತಿ ಧರಿಸಿ. ಕೆಳಭಾಗದ ಉಡುಗೆ ಹೆಚ್ಚು ಅಗಲವಾಗಿರದಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ಲುಕ್ ಸರಿಯಾಗಿ ಬರುವುದಿಲ್ಲ.ಪಾದದವರೆಗಿನ ಪ್ಯಾಂಟ್, ಪ್ಲಾಜೊ ಜೊತೆ ಜೋಡಿಸಬಹುದು.

ಹೆಬ್ಬುಲಿ ಸ್ಟೈಲ್‌ ಎಲ್ಲ ಹಳೆದಾಯ್ತು , 2025ರ ಪುರುಷರ ಟ್ರೆಂಡೀ ಕೇಶವಿನ್ಯಾಸಗಳು

ಸಣ್ಣಗೆ ಮುದ್ದಾಗಿರುವ ಫ್ಯಾನ್ಸಿ ಕರಿಮಣಿ ಡಿಸೈನ್‌ಗಳು

ಅಕ್ಕನ/ ಅಣ್ಣನ ಮದುವೆಯಲ್ಲಿ ಮಿಂಚಲು 7 ವಿಭಿನ್ನ ಕೋಲ್ಡ್ ಶೋಲ್ಡರ್ ಬ್ಲೌಸ್‌ಗಳು

ದಪ್ಪಗಿರುವವರನ್ನು ತೆಳ್ಳಗೆ ತೋರಿಸುವ ಸ್ಟ್ರೈಪ್ಡ್ ಪ್ರಿಂಟ್ ಸಾರಿ ವಿನ್ಯಾಸಗಳು