ಯುಗಾದಿ ಹಬ್ಬ ಬಂದೇ ಬಿಟ್ಟಿದೆ, ಹಬ್ಬದ ಸಂಭ್ರಮ ಹೆಚ್ಚಿಸೋದಕ್ಕೆ ಹೊಸ ಬಟ್ಟೆ ಖರೀದಿ ಮಾಡದೇ ಇದ್ದರೆ ಹೇಗೆ ಅಲ್ವಾ?
fashion Mar 29 2025
Author: Pavna Das Image Credits:Instagram
Kannada
ಇನ್ನೂ ಖರೀದಿ ಮಾಡಿಲ್ವಾ?
ನೀವು ಇನ್ನೂ ಹಬ್ಬಕ್ಕೆ ಬಟ್ಟೆ ಖರೀದಿ ಮಾಡಿಲ್ಲ ಅಂದ್ರೆ, ಯಾವುದು ಖರೀದಿ ಮಾಡೋದು ಎಂದು ಯೋಚನೆ ಮಾಡ್ತಿದ್ರೆ, ಅನುಪಮಾ ಗೌಡ ಅವರ ಕಲೆಕ್ಷನ್ ನೋಡಿ ಆಯ್ಕೆ ಮಾಡಿ.
Image credits: Instagram
Kannada
ಲಂಗ ದಾವಣಿ
ಮೊದಲಿಗೆ ನೀವು ಸಾಂಪ್ರದಾಯಿಕ ಉಡುಗೆ ಬೇಕು, ಆದರೆ ಸೀರೆ ಬೇಡ ಅನ್ನೋದಾದರೆ, ಅನುಪಮಾ ಗೌಡರ ಬಳಿ ಇರುವಂತಹ ಲಂಗ -ದಾವಣಿ ಕಾಂಬಿನೇಶನ್ ಆಯ್ಕೆ ಮಾಡಬಹುದು.
Image credits: our own
Kannada
ಕಾಂಟ್ರಾಸ್ಟ್ ಸೀರೆ -ಬ್ಲೌಸ್
ನೀವು ಇದೆ ರೀತಿ ನೇರಳೆ ಬಣ್ಣದ ಸೀರೆ ಖರೀದಿ ಮಾಡಿ ಅದಕ್ಕೆ ಕಾಂಟ್ರಾಸ್ಟ್ ಬಣ್ಣದ ಬ್ಲೌಸ್ ಅಂದರೆ, ಕೆಂಪು, ಗುಲಾಬಿ ಬಣ್ಣದ ಬ್ಲೌಸ್ ಆಯ್ಕೆ ಮಾಡಿ ಚೆನ್ನಾಗಿ ಕಾಣಿಸುತ್ತೆ.
Image credits: our own
Kannada
ಸೆಮಿ ಮೈಸೂರು ಸಿಲ್ಕ್
ಇದು ಇತ್ತೀಚಿನ ಟ್ರೆಂಡ್ ಆಗಿದೆ, ಮೈಯೆಲ್ಲಾ ಕಲಂಕಾರಿ ಡಿಸೈನ್ ಇರುವಂತಹ ಸೆಮಿ ಮೈಸೂರ್ ಸಿಲ್ಕ್ ಸೀರೆಯನ್ನು ಈ ಬಾರಿ ಹಬ್ಬಕ್ಕೆ ಖರೀದಿ ಮಾಡಬಹುದು.
Image credits: our own
Kannada
ಪ್ಲೋರಲ್ ಪ್ರಿಂಟ್ ಸೀರೆ
ಈ ಬೇಸಿಗೆ ಕಾಲದಲ್ಲಿ ಫ್ಲೋರಲ್ ಪ್ರಿಂಟ್ ಸೀರೆಗಳು ಬೆಸ್ಟ್ ಆಯ್ಕೆ, ಅದರಲ್ಲಿ ಜರಿ ಬಾರ್ಡರ್ ಇರುವಂತಹ ಸೀರೆಗಳು ಹಬ್ಬದ ವಾತಾವರಣಕ್ಕೆ ಮೆರುಗು ನೀಡುತ್ತವೆ.
Image credits: our own
Kannada
ಸಿಲ್ವರ್ ಜರಿ ಸೀರೆ
ಸಿಲ್ವರ್ ಜರಿ ಹೊಂದಿರುವ ಸೀರೆಗಳು ಸಹ ಚೆನ್ನಾಗಿ ಕಾಣಿಸುತ್ತವೆ. ಈ ಪರ್ಪಲ್ ಸೀರೆ ಚೆನ್ನಾಗಿದೆ ಅಲ್ವಾ?
Image credits: others
Kannada
ಸಣ್ಣ ಬಾರ್ಡರ್ ಸೀರೆ
ಸಣ್ಣ ಅಂಚಿನ ಸೀರೆಗಳು ಹೆಣ್ಣು ಮಕ್ಕಳ ಅಂದವನ್ನು ಹೆಚ್ಚಿಸುತ್ತವೆ. ಅದರಲ್ಲೂ ಕಾಂಟ್ರಾಸ್ಟ್ ಬಣ್ಣಗಳ ಪಲ್ಲೂ, ಬಾರ್ಡರ್ ಹೊಂದಿರುವ ಸೀರೆ ಉಟ್ಟರೆ ನೀವು ತುಂಬಾನೆ ಚೆನ್ನಾಗಿ ಕಾಣಿಸುವಿರಿ.
Image credits: others
Kannada
ಸಿಂಪಲ್ ಕಾಟಲ್ ಸೀರೆ
ಸಿಂಪಲ್ ಆಗಿರುವ ಕಾಟನ್ ಸೀರೆಯಲ್ಲೂ ಎದ್ದು ಕಾಣಬೇಕೆಂದರೆ, ನೀವು ಅದಕ್ಕೆ ಹೆವಿ ವರ್ಕ್ ಇರುವ ಕಾಂಟ್ರಾಸ್ಟ್ ಬ್ಲೌಸ್ ಧರಿಸಬೇಕು.
Image credits: our own
Kannada
ರೇಷ್ಮೆ ಸೀರೆ
ಹಬ್ಬ ಮತ್ತು ರೇಷ್ಮೆ ಸೀರೆಗೆ ಬಿಟ್ಟಿರಲಾರದ ನಂಟಿದೆ. ನೀವು ಕೂಡ ಹಬ್ಬಕ್ಕೆ ದೊಡ್ಡ ಬಾರ್ಡರ್ ಹೊಂದಿರುವ ರೇಷ್ಮೆ ಸೀರೆ ಖರೀದಿ ಮಾಡಬಹುದು.