ಮಾಲಿವುಡ್ ನಟಿಯರು ಆಗಾಗ ಸಖತ್ ಫೋಟೋಶೂಟ್ ಮಾಡ್ಕೊಂಡು ಮಿಂಚ್ತಿರ್ತಾರೆ. ಹಾಗೆಯೇ ಸದ್ಯ ಮಲಯಾಳಂ ನಟಿ ನಿಖಿಲಾ ವಿಮಲ್ ರೆಡ್ ಡ್ರೆಸ್‌ನಲ್ಲಿ ಹಾಟ್ ಫೋಟೋ ಕೊಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.
Image credits: others
ಪಿಂಕ್ ಡ್ರೆಸ್
ಸಿನಿಮಾದಲ್ಲಿ ಅಷ್ಟೇನೂ ಸಕ್ಸಸ್ ಆಗಿರದಿದ್ದರೂ ನಿಖಿಲಾ ಆಗಾಗ ಡಿಫರೆಂಟ್ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ತಮ್ಮ ಟ್ರೆಡಿಶನಲ್, ಮಾಡರ್ನ್ ಲುಕ್‌ನಿಂದ ಅಭಿಮಾನಿಗಳ ಮನ ಗೆಲ್ಲುತ್ತಾರೆ.
Image credits: others
ಸಖತ್ ಫೋಟೋಶೂಟ್
ಹಾಗೆಯೇ ಸದ್ಯ ಪಿಂಕ್ ಡ್ರೆಸ್ ತೊಟ್ಟು ನಾನಾ ರೀತಿಯಲ್ಲಿ ಫೋಸ್ ಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಸಖತ್ ವೈರಲ್ ಆಗ್ತಿದೆ.
Image credits: others
ಮಲಯಾಳಂ ನಟಿ
ನಿಖಿಲಾ ವಿಮಲ್ ತೆಲುಗು, ಮಲಯಾಳಂ, ತಮಿಳು ಚಲನಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಶ್ರೀಬಾಲಾ ಕೆ ಮೆನನ್ ಅವರ ಚಲನಚಿತ್ರ ಲವ್ 24x7 (2015) ಇದರಲ್ಲಿ ದಿಲೀಪ್ ಅವರೊಂದಿಗೆ ಮೊದಲ ಬಾರಿಗೆ ನಟಿಸಿದರು.
Image credits: others
ಹಲವು ಚಿತ್ರಗಳಲ್ಲಿ ಅಭಿನಯ
ಆ ನಂತರ ನಿಖಿಲಾ, ಕಿದಾರಿ (2016), ಅರವಿಂದಂತೆ ಅತಿಧಿಗಳು (2018), ನಾನು ಪ್ರಕಾಶನ್ (2018), ಮೇರಾ ನಾಮ್ ಶಾಜಿ (2019), ಮುಂತಾದ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡರು.
Image credits: others
ವೈಯಕ್ತಿಕ ಜೀವನ
ನಿಖಿಲಾ ವಿಮಲ್ ಕೇರಳದ ತಳಿಪರಂಬದಲ್ಲಿ ದಿವಂಗತ ಎಂ.ಆರ್.ಪವಿತ್ರನ್ ಮತ್ತು ಕಲಾಮಂಡಲಂ ವಿಮಲಾದೇವಿ ದಂಪತಿಗೆ ಜನಿಸಿದರು. ಆಕೆಯ ತಂದೆ ಸಂಖ್ಯಾಶಾಸ್ತ್ರ ವಿಭಾಗದಿಂದ ನಿವೃತ್ತರಾಗಿದ್ದರು ಮತ್ತು ತಾಯಿ ನೃತ್ಯಗಾರ್ತಿ.