ಪಟೋಲ ಇಕತ್ ಸೀರೆ ಉತ್ತಮ ಆಯ್ಕೆ. ಇದರಲ್ಲಿ ನೀವು ಡಬಲ್ ಇಕತ್‌ನಲ್ಲಿ ಜ್ಯಾಮೆಟ್ರಿ ಮತ್ತು ಹೂವಿನ ಮಾದರಿಗಳನ್ನು ಕಾಣಬಹುದು. ಇದರೊಂದಿಗೆ ಆಕ್ಸಿಡೈಸ್ಡ್ ಆಭರಣಗಳು ಮತ್ತು ರೇಷ್ಮೆ ಬ್ಲೌಸ್ ಪರಿಪೂರ್ಣವಾಗಿದೆ.
ಸಂಬಲ್ಪುರಿ ಇಕತ್ ಹತ್ತಿ ಸೀರೆ
ಸಂಬಲ್ಪುರಿ ಇಕತ್ ಸೀರೆಯನ್ನು ಸಹ ನೀವು ಆಯ್ಕೆ ಮಾಡಬಹುದು. ಬಾರ್ಡರ್ ಮತ್ತು ಪಲ್ಲುವಿನಲ್ಲಿರುವ ಸಾಂಪ್ರದಾಯಿಕ ಲಕ್ಷಣಗಳು ಇದನ್ನು ಸುಂದರಗೊಳಿಸುತ್ತವೆ. ಟೆಂಪಲ್ ಆಭರಣಗಳೊಂದಿಗೆ ಇದಕ್ಕೆ ಕ್ಲಾಸಿಕ್ ಲುಕ್ ನೀಡಿ.
ತೆಲಿಯಾ ರೂಮಾಲ್ ಇಕತ್ ಹತ್ತಿ ಸೀರೆ
ತೆಲಂಗಾಣದಿಂದ ಬರುವ ತೆಲಿಯಾ ರೂಮಾಲ್ ಇಕತ್ ಸೀರೆ ಸಖತ್ ಚೆಂದ. ಇದರಲ್ಲಿ ಬಿಳಿ ಬಣ್ಣಗಳಲ್ಲಿ ಜ್ಯಾಮೆಟರಿ ವಿನ್ಯಾಸಗಳು ಸಿಗುತ್ತವೆ. ಇದನ್ನು ಕಾಂಟ್ರಾಸ್ಟ್ ಬ್ಲೌಸ್‌ನೊಂದಿಗೆ ಜೋಡಿಸಿ.
ನಾರಾಯಣಪೇಟೆ ಇಕತ್ ಹತ್ತಿ ಸೀರೆ
ನಾರಾಯಣಪೇಟೆ ಇಕತ್ ಹತ್ತಿ ಸೀರೆಯಲ್ಲಿ ಕಾಂಟ್ರಾಸ್ಟ್ ಬಾರ್ಡರ್ ಸಿಗುತ್ತದೆ. ಇದರೊಂದಿಗೆ ತೋಳಿಲ್ಲದ ಬ್ಲೌಸ್ ಮತ್ತು ಸಾಂಪ್ರದಾಯಿಕ ಬಳೆಗಳನ್ನು ಧರಿಸಿ ಎಥ್ನಿಕ್ ಲುಕ್ ಪಡೆಯಿರಿ.
ಪೋಚಂಪಳ್ಳಿ ಇಕತ್ ಹತ್ತಿ ಸೀರೆ
ವಜ್ರ ಮತ್ತು ಅಬ್ಸ್ಟ್ರಕ್ಟ್ ಮಾದರಿಯಲ್ಲಿ ಪೋಚಂಪಳ್ಳಿ ಇಕತ್ ಸೀರೆಯನ್ನು ಆರಿಸಿ. ಇದರ ಬಟ್ಟೆ ಹಗುರ ಮತ್ತು ದೇಹಕ್ಕೆ ಆರಾಮ. ಇದರೊಂದಿಗೆ ಸ್ಟೇಟ್‌ಮೆಂಟ್ ಕಿವಿಯೋಲೆಗಳನ್ನು ಆರಿಸಿಕೊಳ್ಳಿ.