Bangles: ಸೀರೆ, ಲೆಹೆಂಗಾಗಳಿಗೆ ಸಖತ್ ಆಗಿ ಕಾಣೋ ಈ ಬಳೆ ಡಿಸೈನ್‌ಗಳನ್ನು ನೋಡಿ..
ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕ ಉಡುಗೆಗಳಿಗೆ ಕೈತುಂಬಾ ಬಳೆ ಧರಿಸಿದರೆ ಅದರ ಅಂದವೇ ಬೇರೆ. ಸೀರೆ ಮತ್ತು ಲೆಹೆಂಗಾಗಳ ಮೇಲೆ ಅದ್ಭುತವಾಗಿ ಕಾಣುವ ಕೆಲವು ಬಳೆಗಳ ಡಿಸೈನ್‌ಗಳು ಇಲ್ಲಿವೆ.
fashion Aug 25 2026
Author: Naveen Kodase Image Credits:Daivik.in
Kannada
ಲಕ್ಷ್ಮಿ ಕಡಾ..
ಈ ತರಹದ ಲಕ್ಷ್ಮಿ ಕಡಾವನ್ನು ಕೈಗೆ ಒಂದೇ ಒಂದು ಹಾಕಿಕೊಂಡರೂ ಸಾಕು, ತುಂಬಾ ಚೆನ್ನಾಗಿ ಕಾಣುತ್ತದೆ. ಬೇಕಿದ್ದರೆ, ಬೇರೆ ಬಳೆಗಳ ಜೊತೆ ಸೇರಿಸಿಯೂ ಹಾಕಿಕೊಳ್ಳಬಹುದು.
Image credits: Daivik.in
Kannada
ರೂಬಿ ಲಕ್ಷ್ಮಿ ಬಳೆಗಳು..
ಸಾದಾ ಬಳೆಗಳು ಇಷ್ಟವಾಗದಿದ್ದರೆ, ನೀವು ರೂಬಿಗಳಿಂದ ಅಲಂಕೃತವಾದ ಈ ಲಕ್ಷ್ಮಿ ಬಳೆಗಳನ್ನು ಟ್ರೈ ಮಾಡಬಹುದು. ಇವು ಕೈಗಳಿಗೆ ತುಂಬಿದಂತೆ ಕಾಣಿಸಿ, ಒಳ್ಳೆ ಲುಕ್ ಕೊಡುತ್ತವೆ.
Image credits: Daivik.in
Kannada
ಡೈಮಂಡ್ ಲುಕ್
ಸ್ಟೈಲಿಶ್ ಆಗಿ ಕಾಣಿಸಬೇಕೆಂದರೆ, ಡೈಮಂಡ್ ಲುಕ್ ನೀಡುವ ಈ ಎಡಿ ಸ್ಟೋನ್ ಬಳೆಗಳನ್ನು ಟ್ರೈ ಮಾಡಬಹುದು. ಇವು ಪಾರ್ಟಿವೇರ್‌ಗೆ ತುಂಬಾ ಸುಂದರವಾಗಿ ಕಾಣಿಸುತ್ತವೆ.
Image credits: Daivik.in
Kannada
ಓಪನ್ ಕಡಾ ಬಳೆಗಳು..
ಹಳೆಯ ಡಿಸೈನ್‌ನ ಚಿನ್ನದ ಬಳೆಗಳ ಬದಲು, ಈ ರೀತಿ ಓಪನ್ ಕಡಾ ಬಳೆಗಳನ್ನು ಟ್ರೈ ಮಾಡಿ. ಇವು ರೇಷ್ಮೆ ಸೀರೆಗಳ ಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತವೆ.
Image credits: Daivik.in
Kannada
ವಿಕ್ಟೋರಿಯನ್ ಬಳೆಗಳು..
ನೀವು ಸ್ವಲ್ಪ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಸಿದರೆ, ಈ ವಿಕ್ಟೋರಿಯನ್ ಬಳೆಗಳನ್ನು ಟ್ರೈ ಮಾಡಬಹುದು. ಇವು ನಿಮ್ಮ ಸೌಂದರ್ಯಕ್ಕೆ ರಾಜಕಳೆ ತುಂಬುತ್ತವೆ.
Image credits: Daivik.in
Kannada
ಎಡಿ ಸ್ಟೋನ್ ಪಿಂಕ್ ಬಳೆಗಳು..
ಬಳೆಗಳನ್ನು ಹಾಕಿಕೊಳ್ಳಬೇಕು, ಆದರೆ ಅವು ಟ್ರೆಂಡಿಯಾಗಿ ಕಾಣಿಸಬೇಕು ಎನ್ನುವವರು ಈ ಎಡಿ ಸ್ಟೋನ್ ಪಿಂಕ್ ಬಳೆಗಳನ್ನು ಟ್ರೈ ಮಾಡಬಹುದು. ಇವು ನೋಡಲು ತುಂಬಾ ಸುಂದರವಾಗಿವೆ.