Fashion

ಚಿನ್ನದ ಪೆಂಡೆಂಟ್ ವಿನ್ಯಾಸಗಳು: ಹುಟ್ಟುಹಬ್ಬದ ಉಡುಗೊರೆ

ಮಗಳ ಹುಟ್ಟು ಹಬ್ಬಕ್ಕೆ ಗಿಫ್ಟ್ ಕೊಡುವುದು ಎಂದರೆ ಪೋಷಕರಿಗೆ ಸಂಭ್ರಮ..ಆದರೆ ಏನು ಗಿಫ್ಟ್ ಕೊಡುವುದು ಎಂದು ಪ್ರತಿಬಾರಿ ಯೋಚಿಸ್ತಾರೆ. ಮಗಳಿಗೆ ಉಡುಗೊರೆಯಾಗಿ ನೀಡಬಯಸಿದರೆ ಇಲ್ಲಿವೆ ವಿವಿಧ ವಿನ್ಯಾಸದ ಪೆಂಡೆಂಟ್ಸ್.

ಸ್ಟೋನ್ ಸ್ಟಡ್ಡೆಡ್ ಸರ್ಕಲ್ ಪೆಂಡೆಂಟ್

ಪೂಜೆ, ಸಮಾರಂಭದಿಂದ ಹಿಡಿದು ಮದುವೆ ಸಮಾರಂಭದ ಪಾರ್ಟಿಯವರೆಗೆ, ಪ್ರತಿ ಸಂದರ್ಭಕ್ಕೂ ಈ ಚಿನ್ನದ ಪೆಂಡೆಂಟ್ ಸೂಕ್ತವಾಗಿದೆ. ನೀವು ಮಗಳಿಗೆ ಈ ರೀತಿಯ ವರ್ಣರಂಜಿತ ಸ್ಟೋನ್ ಸ್ಟಡ್ಡೆಡ್ ಸರ್ಕಲ್ ಪೆಂಡೆಂಟ್ ತೆಗೆದುಕೊಳ್ಳಬಹುದು.

ಕೃಷ್ಣನ ಬಾಸುರಿ ಚಿನ್ನದ ಪೆಂಡೆಂಟ್

ಹಬ್ಬದ ಋತುವಿನಲ್ಲಿ ಕೃಷ್ಣನ ಬಾಸುರಿ ಚಿನ್ನದ ಪೆಂಡೆಂಟ್‌ಗಿಂತ ಉತ್ತಮ ಉಡುಗೊರೆ ಇನ್ನೇನು ಇರಬಹುದು. ಈ ಹೊಸ ಸಂಗ್ರಹಣೆಯ 18K ಹಳದಿ ಚಿನ್ನದ ಪೆಂಡೆಂಟ್ ಅನ್ನು ನೀವು ಸ್ಥಳೀಯ ಆಭರಣ ವ್ಯಾಪಾರಿಯಿಂದ ಕಸ್ಟಮೈಸ್ ಮಾಡಿಸಬಹುದು.

ಟ್ರಿಪಲ್ ಲೇಯರ್ ರೌಂಡ್ ಪೆಂಡೆಂಟ್

ಟ್ರಿಪಲ್ ಲೇಯರ್ ರೌಂಡ್ ವಿನ್ಯಾಸದ ಈ ಸುಂದರವಾದ ಪೆಂಡೆಂಟ್ ಯಾವುದೇ ಹುಡುಗಿಯ ಕುತ್ತಿಗೆಯ ಸೌಂದರ್ಯವನ್ನು ಹೆಚ್ಚಿಸಲು ಸಾಕು. ಇದನ್ನು ನೀವು 18KT ಹಳದಿ ಚಿನ್ನದಲ್ಲಿ ಕಡಿಮೆ ಬೆಲೆಯಲ್ಲಿ ಪಡೆಯಬಹುದು.

ಮಿನಿಯೇಚರ್ ಚಿನ್ನದ ಪೆಂಡೆಂಟ್ ವಿನ್ಯಾಸ

ನಿಮ್ಮ ಮಗಳ ನೆಚ್ಚಿನ ಹವ್ಯಾಸ ಅಬಿರುಚಿ ಗಮನದಲ್ಲಿಟ್ಟುಕೊಂಡು ನೀವು ಈ ರೀತಿಯ ಮಿನಿಯೇಚರ್ ಚಿನ್ನದ ಪೆಂಡೆಂಟ್  2 ಗ್ರಾಂನಲ್ಲಿ ಇದು ಸುಲಭವಾಗಿ ತಯಾರಾಗುತ್ತದೆ ಮತ್ತು ತುಂಬಾ ವಿಶಿಷ್ಟವಾಗಿ ಕಾಣುತ್ತದೆ.

ಹಾರ್ಟ್ ಪ್ಯಾಟರ್ನ್ ಚಿನ್ನದ ಪೆಂಡೆಂಟ್

ಯಾವುದೇ ಬಣ್ಣದ ಉಡುಪು ಅಥವಾ ಸೀರೆಯೊಂದಿಗೆ ಹೊಂದಿಕೊಳ್ಳುವ ಪೆಂಡೆಂಟ್ ಅನ್ನು ನೀವು ಹುಡುಕುತ್ತಿದ್ದರೆ, ಈ ಹಾರ್ಟ್ ಪ್ಯಾಟರ್ನ್ ಚಿನ್ನದ ಪೆಂಡೆಂಟ್ ಅತ್ಯುತ್ತಮ ವಿನ್ಯಾಸಗಳಲ್ಲಿ ಒಂದಾಗಿದೆ.

ಹೂವಿನ ವಿನ್ಯಾಸದ ಸ್ಟೋನ್ ಪೆಂಡೆಂಟ್

ಈ ರೀತಿಯ ಹೂವಿನ ವಿನ್ಯಾಸದ ಸ್ಟೋನ್ ಪೆಂಡೆಂಟ್‌ಗಳನ್ನು ಸಹ ನೀವು ನೋಡಬಹುದು. ಕಲ್ಲಿನಿಂದಾಗಿ ಇದು ನಿಮಗೆ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುತ್ತದೆ. ಜೊತೆಗೆ ಧರಿಸಿದಾಗ ಅದ್ಭುತವಾದ ನೋಟವನ್ನು ನೀಡುತ್ತದೆ.

ಹೆಸರಿನ ಅಕ್ಷರ ಚಿನ್ನದ ಪೆಂಡೆಂಟ್

ನೀವು ಬಯಸಿದರೆ ನಿಮ್ಮ ಪ್ರೀತಿಯ ಮಗಳಿಗೆ ಈ ರೀತಿಯ ಹೆಸರಿನ ಅಕ್ಷರ ಚಿನ್ನದ ಪೆಂಡೆಂಟ್ ಅನ್ನು ಸಹ ಮಾಡಿಸಬಹುದು. ಯುವಜನರಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.

ನಿಮ್ಮಕಲರ್ ಚೆನ್ನಾಗಿದ್ದರೆ ಈ ಮೇಹಂದಿ ಕಲರ್ ಸೂಟ್ ಪರ್ಫೆಕ್ಟ್!

ಕೃಷ್ಣವರ್ಣದ ಸುಂದರಿಯರಿಗೆ ಸೂಟ್ ಆಗುವ 5 ಅತ್ಯುತ್ತಮ ನ್ಯೂಡ್ ಲಿಪ್‌ಸ್ಟಿಕ್‌ಗಳು

WWE ಜಾನ್ ಸೀನಾ ಪತ್ನಿ ಯಾವ ನಾಯಕಿಗೂ ಕಮ್ಮಿ ಇಲ್ಲದ ತ್ರಿಪುರ ಸುಂದರಿ!

ಸಖತ್‌ ಸೈಲಿಶ್ ಆಗಿರುವ ಲೇಟೆಸ್ಟ್ ಡಿಸೈನ್‌ನ ಗೋಲ್ಡ್‌ ಪೆಂಡೆಂಟ್