Fashion
ಬಂಧನಿ, ಬಂಧೇಜ್ ಎಂದೂ ಕರೆಯುವ ಇದು ಭಾರತದಲ್ಲಿ ಪ್ರಾಚೀನ ಜವಳಿ ಸೀರೆ. ಇದು ಕ್ರಿ.ಪೂ. 4000 ಕ್ಕೆ ಹಿಂದಿನದು ಎಂದರೆ ನಂಬುತ್ತೀರ? 'ಬಂಧನಿ' ಎಂಬ ಪದವು ಸಂಸ್ಕೃತ ಪದ 'ಬಂಧ್' ನಿಂದ ಬಂದಿದೆ, ಅಂದರೆ ಕಟ್ಟುವುದು ಎಂದರ್ಥ.
ಬಂಧನಿ ಸೀರೆಗಳು ರಾಜಸ್ಥಾನ ಮತ್ತು ಗುಜರಾತ್ ಎರಡೂ ಕಡೆ ತಯಾರಾಗುತ್ತವೆ. ಈ ಸೀರೆ ಟೈ-ಡೈ ತಂತ್ರಜ್ಞಾನವನ್ನು ಆಧರಿಸಿದೆ. ಬಟ್ಟೆಗೆ ಗಂಟುಗಳನ್ನು ಕಟ್ಟಿ ಬಣ್ಣ ಹಾಕಲಾಗುತ್ತದೆ. ವಿವಿಧ ವಿನ್ಯಾಸಗಳಲ್ಲಿ ತಯಾರಿಸಲಾಗುತ್ತದೆ.
ಕೆಂಪು, ಹಳದಿ, ಹಸಿರು ಮತ್ತು ನೀಲಿ ಬಣ್ಣದ ಬಂಧನಿ ಸೀರೆಗಳು ಹೆಚ್ಚು ತಯಾರಾಗುತ್ತವೆ. ಈ ಸೀರೆಗಳಲ್ಲಿ ಚಾಂದನಿ, ಲೆಹರಿಯಾ, ಮೋಥ್ರಾ ವಿನ್ಯಾಸಗಳನ್ನು ಹಾಕಲಾಗುತ್ತೆ.. ಹತ್ತಿ, ಶಿಫಾನ್ ಜಾರ್ಜೆಟ್ ಬಟ್ಟೆಬಳಸಲಾಗುತ್ತದೆ.
ಬಂಧನಿ ಸೀರೆ ಹಗುರ ಮತ್ತು ಆರಾಮದಾಯಕ. ಮದುವೆ, ಹಬ್ಬ ಮತ್ತು ಪೂಜೆಯಲ್ಲಿ ಹೆಚ್ಚಿನ ಮಹಿಳೆಯರು ಇದನ್ನು ಧರಿಸುತ್ತಾರೆ.
ಪಟೋಲ ಸೀರೆ ಗುಜರಾತಿನ ಪಾಟಣ ನಗರದಲ್ಲಿ ತಯಾರಾಗುತ್ತದೆ. ಇದು "ಡಬಲ್ ಇಕತ್" ತಂತ್ರಜ್ಞಾನದಿಂದ ತಯಾರಾಗುವ ದುಬಾರಿ ಸೀರೆಯಾಗಿದೆ.
ಮೊದಲು ದಾರಗಳಿಗೆ ಬಣ್ಣ ಹಾಕಲಾಗುತ್ತದೆ, ನಂತರ ನೇಯಲಾಗುತ್ತದೆ. ಹೂವುಗಳು, ಆನೆಗಳು, ಗಿಳಿಗಳು ಮತ್ತು ಇತರ ಸಾಂಪ್ರದಾಯಿಕ ವಿನ್ಯಾಸಗಳನ್ನು ಇದರಲ್ಲಿ ಸೇರಿಸಲಾಗುತ್ತದೆ.
ಪಟೋಲ ಸೀರೆಯಲ್ಲಿ ಹಲವು ಬಣ್ಣಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ರಾಯಲ್ ಕೆಂಪು, ಹಸಿರು, ಮರೂನ್ ಮತ್ತು ಹಳದಿ. ಬಟ್ಟೆಯ ವಿಷಯಕ್ಕೆ ಬಂದರೆ, ಈ ಸೀರೆ ಶುದ್ಧ ರೇಷ್ಮೆಯದ್ದಾಗಿರುತ್ತದೆ.
ಪಟೋಲ ಸೀರೆಯನ್ನು ತಯಾರಿಸಲು ಆರು ತಿಂಗಳಿಂದ ಹಲವು ವರ್ಷಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ ಇದರ ಬೆಲೆ ಲಕ್ಷಗಳಲ್ಲಿ ಇರುತ್ತದೆ. ಶ್ರೀಮಂತ ಮನೆತನದ ಮಹಿಳೆಯರು ಮಾತ್ರ ಇದನ್ನು ಧರಿಸಲು ಸಾಧ್ಯ.