Fashion

8 ಅದ್ಭುತ ಮಂಗಳಸೂತ್ರ ವಿನ್ಯಾಸಗಳು

ಗಿಡ್ಡ, ಮಾಡರ್ನ್ ತಾಳಿಗಳು ಈಗ ಟ್ರೆಂಡ್ ಆಗಿದ್ದು, ಯಾವುದು ಚಂದವೆಂದು ಇಲ್ಲಿ ನೋಡಿ.

ಕ್ಲಾಸಿಕ್ ಚಿನ್ನದ ಮಂಗಳಸೂತ್ರ

ಚಿನ್ನದ ಸಾಂಪ್ರದಾಯಿಕ ಮಂಗಳಸೂತ್ರ ಇಷ್ಟಪಡೋರಿಗೆ ಈ ಡಿಸೈನ್ ಬೆಸ್ಟ್. ಈ ಸದಾಬಹಾರ್ ವಿನ್ಯಾಸ ಪ್ರತಿಯೊಂದೂ ಸಂದರ್ಭಕ್ಕೂ ಸೂಕ್ತ ಮತ್ತು ಇದನ್ನು ಧರಿಸುವುದರಿಂದ ಸಾಂಪ್ರದಾಯಿಕ ಮತ್ತು ರಾಯಲ್ ಲುಕ್ ಸಿಗುತ್ತದೆ.

ವಜ್ರದ ಮಂಗಳಸೂತ್ರ

ವಜ್ರಗಳಿಂದ ಕೂಡಿದ ಮಂಗಳಸೂತ್ರ ಈಗ ಟ್ರೆಂಡ್‌. ಇದು ಆಧುನಿಕ ಮದುಮಗಳಿಗೆ ಸೂಕ್ತ. ವಿಶೇಷ ಸಂದರ್ಭಗಳಲ್ಲಿ ವಜ್ರದ ಮಂಗಳಸೂತ್ರವನ್ನು ಧರಿಸುವುದರಿಂದ ಲುಕ್ ಹೆಚ್ಚಾಗುತ್ತದೆ.

ಕಿವಿಯೋಲೆಗಳೊಂದಿಗೆ ಮಂಗಳಸೂತ್ರ

ಈಗ ಮಂಗಳಸೂತ್ರದ ಜೊತೆಗೆ ಹೊಂದಿಕೆಯಾಗುವ ಕಿವಿಯೋಲೆಗಳು ಸಹ ಲಭ್ಯ. ಕಪ್ಪು ಮಣಿಗಳಲ್ಲಿ ವಜ್ರಗಳನ್ನು ಸುಂದರವಾಗಿ ಹೆಣೆಯಲಾಗಿದೆ. ಸೀರೆ ಅಥವಾ ಸೂಟ್‌ನಲ್ಲಿ ಈ ಮಂಗಳಸೂತ್ರ ತುಂಬಾ ಸುಂದರವಾಗಿ ಕಾಣುತ್ತದೆ.

ದೇವಸ್ಥಾನದ ಆಭರಣ ಶೈಲಿ

ದೇವಸ್ಥಾನದ ಆಭರಣ ವಿನ್ಯಾಸದ ಮಂಗಳಸೂತ್ರಗಳು ಇತ್ತೀಚೆಗೆ ಬಹಳ ಜನಪ್ರಿಯ. ಟೆಂಪಲ್ ಆರ್ಟ್ ಇರೋ ಈ ವಿನ್ಯಾಸದಲ್ಲಿ ದೇವರು ಅಥವಾ ಧಾರ್ಮಿಕ ಚಿಹ್ನೆಗಳ ಚಿತ್ರಣವಿರುತ್ತದೆ.

ಉದ್ದನೆಯ ಮಂಗಳಸೂತ್ರ

ಸಾಂಪ್ರದಾಯಿಕ ಉದ್ದ ಮಂಗಳಸೂತ್ರ ಯಾವಾಗಲೂ ಫ್ಯಾಷನ್‌ನಲ್ಲಿರುವ ವಿನ್ಯಾಸ. ಇದು ಉದ್ದವಾಗಿರೋದ್ರಿಂದ ಸೀರೆಗೆ ಸೂಟ್ ಆಗುತ್ತೆ. ವಿಶೇಷವಾಗಿ ಮದುವೆ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಧರಿಸಬಹುದು.

ಏಕ ವಜ್ರದ ಮಂಗಳಸೂತ್ರ

ನಿಮ್ಮ ಬಜೆಟ್ ಅನುಮತಿಸಿದರೆ, ನೀವು ಈ ರೀತಿಯ ದೊಡ್ಡ ವಜ್ರದ ಮಂಗಳಸೂತ್ರವನ್ನು ಖರೀದಿಸಬಹುದು. ಇದನ್ನು ಧರಿಸಿದ ನಂತರ ಶ್ರೀಮಂತಿಕೆ ಎದ್ದು ಕಾಣುತ್ತದೆ.

ಪೆಂಡೆಂಟ್ ಶೈಲಿ

ಹಗುರ ಮತ್ತು ಸ್ಟೈಲಿಶ್ ಮಂಗಳಸೂತ್ರ ಇಷ್ಟವಾಗುವವರಿಗೆ ಪೆಂಡೆಂಟ್ ಶೈಲಿ ಬೆಸ್ಟ್. ಇದರಲ್ಲಿ ಚಿನ್ನದ ತೆಳು ಚೈನಿನೊಂದಿಗೆ ಪೆಂಡೆಂಟ್ ಇರುತ್ತದೆ, ಇದು ಆಧುನಿಕ ಮತ್ತು ಟ್ರೆಂಡಿ ಲುಕ್ ನೀಡುತ್ತದೆ.

Find Next One