2024ರ ಭಯಾನಕ ಸಿನಿಮಾಗಳು ಯಾವವು ಎಂದು ಹುಡುಕುತ್ತಿದ್ದೀರಾ? ಹಾಗಾದ್ರೆ ಸರಿಯಾದ ಪೋಸ್ಟ್ ಓದುತ್ತಿದ್ದೀರಿ. 2024 ಟಾಪ್ ಹಾರರ್ ಮೂವಿಗಳು ಬಗ್ಗೆ ಮತ್ತು ಅವುಗಳನ್ನು ಎಲ್ಲಿ ವೀಕ್ಷಿಸಬಹುದು ಎಂಬುದನ್ನು ಹೇಳುತ್ತೇವೆ.
ಸ್ತ್ರೀ ೨ (ವಿಶ್ವಾದ್ಯಂತ: 874.58 ಕೋಟಿ)
ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ನಟಿಸಿರುವ ಭಯಾನಕ ಹಾಸ್ಯ ಚಿತ್ರ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರ. ಈ ಚಿತ್ರವನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
ಭೂಲ್ ಭುಲೈಯಾ 3 (ವಿಶ್ವಾದ್ಯಂತ: 421.03 ಕೋಟಿ)
ಈ ಹಿಂದಿ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ತೃಪ್ತಿ ಡಿಮಿರಿ ನಟಿಸಿದ್ದಾರೆ. ಡಿಸೆಂಬರ್ 27 ರಿಂದ ನೀವು ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
ಶೈತಾನ್ (ವಿಶ್ವಾದ್ಯಂತ: 211.06 ಕೋಟಿ)
ಈ ಹಿಂದಿ ಚಿತ್ರದಲ್ಲಿ ಅಜಯ್ ದೇವಗನ್, ಆರ್. ಮಾಧವನ್, ಜ್ಯೋತಿಕಾ, ಜಾನಕಿ ಬೋಡಿವಾಲಾ ನಟಿಸಿದ್ದಾರೆ. ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
ಮುಂಜ್ಯಾ (ವಿಶ್ವಾದ್ಯಂತ: 132.13 ಕೋಟಿ)
ಈ ಹಿಂದಿ ಚಿತ್ರದಲ್ಲಿ ಶರ್ವರಿ ವಾಗ್, ಅಭಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನೀವು ಡಿಸ್ನೀ+ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಅರಣ್ಮನೈ 4 (ವಿಶ್ವಾದ್ಯಂತ: 98 ಕೋಟಿ)
ಈ ತಮಿಳು ಚಿತ್ರದಲ್ಲಿ ತಮನ್ನಾ ಭಾಟಿಯಾ, ರಾಶಿ ಖನ್ನಾ ಮುಂತಾದ ನಟರು ನಟಿಸಿದ್ದಾರೆ. ಈ ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿಯನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.
ಬ್ರಹ್ಮಯುಗಂ (ವಿಶ್ವಾದ್ಯಂತ: 58.2 ಕೋಟಿ)
ಇದು ಮಲಯಾಳಂ ಭಯಾನಕ ಥ್ರಿಲ್ಲರ್ ಚಿತ್ರ. ಇದರಲ್ಲಿ ಮಮ್ಮೂಟ್ಟಿ, ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭಾರತಂ ಮುಂತಾದ ನಟರು ನಟಿಸಿದ್ದಾರೆ. ಈ ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿಯನ್ನು ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು.