ಉತ್ತಮ ಶಿಕ್ಷಣದ ಬಯಕೆಯಲ್ಲಿ ಜನರು ದೊಡ್ಡ ಶಾಲೆಗಳತ್ತ ಮುಖ ಮಾಡುತ್ತಾರೆ. ಈ ಶಾಲೆಗಳು ಶಿಕ್ಷಣದಲ್ಲಿ ಮಾತ್ರವಲ್ಲದೆ ತಮ್ಮ ಅದ್ಭುತ ಸೌಲಭ್ಯಗಳಿಗೂ ಹೆಸರುವಾಸಿಯಾಗಿವೆ.
Kannada
ಇಷ್ಟು ಶುಲ್ಕದಲ್ಲಿ ಕಾರು ಖರೀದಿಸಬಹುದು
ಭಾರತದಲ್ಲಿ ಕೆಲವು ಶಾಲೆಗಳಿವೆ. ಅವುಗಳ ವಾರ್ಷಿಕ ಶುಲ್ಕವು ಐಷಾರಾಮಿ ಕಾರನ್ನು ಖರೀದಿಸುವಷ್ಟು ಇರುತ್ತದೆ ಎಂಬುದು ತಿಳಿದಿದೆಯೇ?
Kannada
ಸಿಂಧಿಯಾ ಶಾಲೆ, ಗ್ವಾಲಿಯರ್
ಸಿಂಧಿಯಾ ಶಾಲೆ ಭಾರತದ ಅತ್ಯಂತ ದುಬಾರಿ ಶಾಲೆಯಾಗಿದೆ. 1897 ರಲ್ಲಿ ಮಹಾರಾಜ ಮಾಧವ ರಾವ್ ಸಿಂಧಿಯಾ ಸ್ಥಾಪಿಸಿದ ಈ ಶಾಲೆ ಗ್ವಾಲಿಯರ್ ಕೋಟೆಯ ಮೇಲೆ 110 ಎಕರೆಗಳಲ್ಲಿ ಹರಡಿದೆ. ಈ ಶಾಲೆಯ ಶುಲ್ಕ ವರ್ಷಕ್ಕೆ 12 ಲಕ್ಷ.
Kannada
ಇಕೋಲ್ ಮೊಂಡಿಯಲ್ ವರ್ಲ್ಡ್ ಸ್ಕೂಲ್, ಮುಂಬೈ
ಜುಹುನಲ್ಲಿರುವ ಇದು ಮುಂಬೈನ ಮೊದಲ IB ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಶಾಲೆ. ಇಲ್ಲಿ ಪ್ರಾಥಮಿಕದಿಂದ ಡಿಪ್ಲೊಮಾ ಕಾರ್ಯಕ್ರಮದವರೆಗೆ ಶಿಕ್ಷಣ ನೀಡಲಾಗುತ್ತದೆ. ಇಲ್ಲಿನ ಶುಲ್ಕ ವರ್ಷಕ್ಕೆ 10.9 ಲಕ್ಷ ರೂಪಾಯಿ.
Kannada
ದಿ ಡೂನ್ ಸ್ಕೂಲ್, ಡೆಹ್ರಾಡೂನ್
ಉತ್ತರಾಖಂಡದಲ್ಲಿರುವ ಈ ಪ್ರತಿಷ್ಠಿತ ಬಾಲಕರ ಬೋರ್ಡಿಂಗ್ ಶಾಲೆ 1929 ರಲ್ಲಿ ಸ್ಥಾಪಿಸಲಾಯಿತು. ರಾಜೀವ್ ಗಾಂಧಿ ಮತ್ತು ಸುನೀಲ್ ಮುಂಜಾಲ್ ಅವರಂತಹವರು ಇಲ್ಲಿ ಓದಿದ್ದಾರೆ. ಇಲ್ಲಿನ ಶುಲ್ಕ ವರ್ಷಕ್ಕೆ 9.7 ಲಕ್ಷ ರೂಪಾಯಿ.