Kannada

ಮ್ಯಾಜಿಕ್ ಮಾಡಿದ ಚಹಲ್

ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಯುಜುವೇಂದ್ರ ಚಹಲ್ ಮ್ಯಾಜಿಕ್ ಮಾಡಿದ್ದಾರೆ.

Kannada

ಒಂದು ಓವರ್‌ನಲ್ಲಿ 4 ಬಲಿ ಪಡೆದ ಚಹಲ್

19ನೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವುದರ ಜತೆಗೆ ಒಂದೇ ಓವರ್‌ನಲ್ಲಿ 4 ವಿಕೆಟ್‌ ಕಬಳಿಸಿ ಚಹಲ್ ಹೊಸ ದಾಖಲೆ ಬರೆದಿದ್ದಾರೆ.

Image credits: Insta/yuzi_chahal23
Kannada

32 ರನ್‌ 4 ವಿಕೆಟ್‌

ಚೆನ್ನೈ ಸೂಪರ್ ಕಿಂಗ್ಸ್ ಎದುರು ಯುಜುವೇಂದ್ರ ಚಹಲ್ 3 ಓವರ್ ಬೌಲಿಂಗ್ ಮಾಡಿ 32  ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಧೋನಿ ಪಡೆಗೆ ಶಾಕ್ ನೀಡಿದ್ದಾರೆ.

Image credits: ANI
Kannada

ಧೋನಿ ಮೇಲೆ ಸೇಡು

19ನೇ ಓವರ್ ಬೌಲಿಂಗ್ ಮಾಡಲಿಳಿದ ಚಹಲ್‌ಗೆ ಧೋನಿ ಮೊದಲ ಎಸೆತದಲ್ಲೇ ಬಿಗ್ ಸಿಕ್ಸರ್ ಸಿಡಿಸಿದರು. ಆದರೆ ಮರು ಎಸೆತದಲ್ಲೇ ಚಹಲ್, ಧೋನಿಯ ಬಲಿ ಪಡೆಯುವಲ್ಲಿ ಯಶಸ್ವಿಯಾದರು.

Image credits: ANI
Kannada

ಯುಜಿ ಹ್ಯಾಟ್ರಿಕ್ ವಿಕೆಟ್

ಇದಾದ ಬಳಿಕ ಕೊನೆಯ 3 ಎಸೆತಗಳಲ್ಲಿ ದೀಪಕ್ ಹೂಡ, ಅನ್ಸೂಲ್ ಕಂಬೋಜ್ ಹಾಗೂ ನೂರ್ ಅಹಮದ್ ಅವರನ್ನು ಬಲಿ ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಎದುರು ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡರು.

Image credits: ANI
Kannada

ಅತಿಹೆಚ್ಚು ಬಾರಿ 4+ ವಿಕೆಟ್

ಚಹಲ್ ಇದೀಗ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ 4+ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ನರೈನ್ 8 ಬಾರಿ 4+ ವಿಕೆಟ್ ಕಬಳಿಸಿದರೆ, ಯುಜಿ 9 ಬಾರಿ 4+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

Image credits: ANI
Kannada

ಎರಡು ಸಲ ಓವರ್‌ನಲ್ಲಿ 4+ ವಿಕೆಟ್

ಐಪಿಎಲ್ ಇತಿಹಾಸದಲ್ಲಿ ಓವರ್‌ ಒಂದರಲ್ಲಿ ಎರಡು ಬಾರಿ 4+ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎನ್ನುವ ಅಪರೂಪದ ದಾಖಲೆಗೂ ಚಹಲ್ ಪಾತ್ರರಾಗಿದ್ದಾರೆ.

Image credits: ANI

ಅಭಿಷೇಕ್ ಶರ್ಮಾ ಆಟಕ್ಕೆ ಮನಸೋತ ಬಾಲಿವುಡ್ ನಟಿ; ಗಿಲ್ ಕಥೆಯೇನು?

IPL ಆರೆಂಜ್ ಕ್ಯಾಪ್ ಗೆದ್ದ ಭಾರತೀಯ ಕೊಹ್ಲಿಯೂ ಅಲ್ಲ, ಉತ್ತಪ್ಪ ಅಲ್ಲ! ಮತ್ತ್ಯಾರು?

ಕೊನೆಗೂ ತನ್ನ 'ಹ್ಯಾಂಡ್ಸಮ್ ಜಂಟಲ್ಮನ್' ಪರಿಚಯಿಸಿದ ಸಾರಾ ತೆಂಡೂಲ್ಕರ್!

ಐಪಿಎಲ್ 2025ರಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!