Cricket
ಆರ್‌ಸಿಬಿ ಫ್ರಾಂಚೈಸಿಯು ಅತಿಹೆಚ್ಚು ಲಾಯಲ್(ನಂಬಿಗಸ್ಥ) ಫ್ಯಾನ್ಸ್ ಹೊಂದಿರುವ ತಂಡವಾಗಿದೆ.
ಇನ್ನು ಕೆಲವು ಆಟಗಾರರು ತಮ್ಮ ಐಪಿಎಲ್ ಇತಿಹಾಸದಲ್ಲಿ ಕೇವಲ ಆರ್‌ಸಿಬಿ ತಂಡವನ್ನು ಮಾತ್ರ ಪ್ರತಿನಿಧಿಸಿದ್ದಾರೆ. ಯಾರವರು ನೋಡಿ
ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್ 2021ರಿಂದ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
ಎಡಗೈ ವೇಗಿಯಾಗಿ ಶ್ರೀನಾಥ್ ಅರವಿಂದ್ 2011ರಿಂದ 2017ರ ವರೆಗೆ ಆರ್‌ಸಿಬಿ ತಂಡ ಪ್ರತಿನಿಧಿಸಿದ್ದರು. ಎಸ್ ಅರವಿಂದ್ ಆರ್‌ಸಿಬಿ ಬಿಟ್ಟು ಬೇರೆ ತಂಡವನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸಿಲ್ಲ.
ಆರ್‌ಸಿಬಿ ಮಾಜಿ ನಾಯಕ ಅನಿಲ್ ಕುಂಬ್ಳೆ 2008ರಿಂದ 2010ರ ವರೆಗೆ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿ ಆ ಬಳಿಕ ಐಪಿಎಲ್‌ಗೆ ಗುಡ್‌ಬೈ ಹೇಳಿದರು.
ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್‌ನಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.