Cricket
ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ 12 ರನ್ಗಳ ಜಯದೊಂದಿಗೆ ಸತತ ಮೂರು ಸೋಲುಗಳ ನಂತರ ಭರ್ಜರಿ ಕಮ್ಬ್ಯಾಕ್ ಮಾಡಿದೆ.
DC ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನಂತರ, MI ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (18) ಮತ್ತು ರಿಯಾನ್ ರಿಕೆಲ್ಟನ್ (45) 4.5 ಓವರ್ಗಳಲ್ಲಿ 47/0 ರನ್ ಗಳಿಸಿ ಉತ್ತಮ ಆರಂಭ ನೀಡಿದರು.
ಸೂರ್ಯಕುಮಾರ್ ಯಾದವ್ ಅದ್ಭುತ ಆರಂಭವನ್ನು ಪಡೆದರು, ಆದರೆ 28 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು.
ತಿಲಕ್ ವರ್ಮಾ ಬ್ಯಾಟ್ನಿಂದ ಮಿಂಚಿನ ಪ್ರದರ್ಶನ ನೀಡಿದರು. 33 ಎಸೆತಗಳಲ್ಲಿ 59 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ನಮನ್ ಧೀರ್ 17 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿ MI ತಂಡವು 205/5 ರನ್ ಗಳಿಸಲು ಸಹಾಯ ಮಾಡಿದರು.
DC 206 ರನ್ಗಳ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ದೀಪಕ್ ಚಹರ್ ಜೇಕ್ ಫ್ರೇಸರ್-ಮೆಕ್ಗುರ್ಕ್ ಅವರನ್ನು ಗೋಲ್ಡನ್ ಡಕ್ಗೆ ಔಟ್ ಮಾಡುವ ಮೂಲಕ MI ಗೆ ಆರಂಭಿಕ ಯಶಸ್ಸು ತಂದುಕೊಟ್ಟರು.
ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ ಕರುಣ್ ನಾಯರ್ 40 ಎಸೆತಗಳಲ್ಲಿ 89 ರನ್ ಗಳಿಸಿ ಮುಂಬೈಗೆ ತಿರುಗೇಟು ನೀರುವಲ್ಲಿ ಯಶಸ್ವಿಯಾದರು.
ಕರುಣ್ ನಾಯರ್ ಔಟಾದ ನಂತರ, ಡೆಲ್ಲಿ ಕ್ಯಾಪಿಟಲ್ಸ್ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ರನ್ ಗಳಿಸಲಿ ಪರದಾಡಿದರು. ಒಂದು ಹಂತದಲ್ಲಿ 135/3 ಗಳಿಸಿದ್ದ ಡೆಲ್ಲಿ 180/7 ಕ್ಕೆ ಕುಸಿಯಿತು.
DC ಯ 206 ರನ್ಗಳ ಬೆನ್ನಟ್ಟುವಿಕೆ ಹಂತದಲ್ಲಿ 19ನೇ ಓವರ್ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ರನೌಟ್ ಆಗುವ ಮೂಲಕ ಮ್ಯಾಚ್ ಕೈಚೆಲ್ಲಿತು.
ಕರ್ಣ್ ಶರ್ಮಾ ಮುಂಬೈ ಇಂಡಿಯನ್ಸ್ಗೆ ಹೀರೋ ಆಗಿ ಹೊರಹೊಮ್ಮಿದರು. ಅಭಿಷೇಕ್ ಪೊರೆಲ್, ಕೆ.ಎಲ್. ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಪ್ರಮುಖ ವಿಕೆಟ್ಗಳನ್ನು ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಈ ಸೀಸನ್ನಲ್ಲಿ ಮೊದಲ ಸೋಲು ಅನುಭವಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿತ್ತು.