Cine World

ಸಾಯಿ ಪಲ್ಲವಿ ಏಕೆ PR ಸಂಸ್ಥೆ ಬೇಡವೆನ್ನುತ್ತಾರೆ?

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಆಗಿರುವ ಸಾಯಿ ಪಲ್ಲವಿ ಅವರು ಪಿಆರ್‌ ಏಜೆನ್ಸಿಗಳನ್ನು ತಮ್ಮಿಂದ ದೂರ ಇಟ್ಟಿರುವ ನಟಿ. ಅದಕ್ಕೆ ಕಾರಣವನ್ನು ಈಗ ನೀಡಿದ್ದಾರೆ.

'ರಾಮಾಯಣ'ದ ಸೀತೆ ಸರಳವಾಗಿದ್ದಾರೆ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ.

ಪ್ರಸಿದ್ಧಿಯ ಒತ್ತಡ ಸಹಿಸಲಾಗದು.

ಪ್ರಸಿದ್ಧಿಯಿಂದ ದೂರ ಉಳಿಯಲು ಬಯಸುವ ಅವರು ನಿರಂತರವಾಗಿ ಲೈಮ್‌ಲೈಟ್‌ನಲ್ಲಿರುವ ಒತ್ತಡವನ್ನು ತಡೆಯಲಾಗದು, ನನ್ನ ವೈದ್ಯಕೀಯ ಪದವಿ ನನಗೆ ಸರಳವಾಗಿರಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

'ಪ್ರೇಮಂ' ನಂತರ ಸಾಯಿ ಪದವಿ ಮುಗಿಸಿದರು

ತಮ್ಮ ಚೊಚ್ಚಲ ಪ್ರೇಮಂ ಮಲಯಾಳಂ ಚಿತ್ರದ ನಂತರ ತಕ್ಷಣ ಹೊಸ ಚಿತ್ರಕ್ಕೆ ಸಹಿ ಹಾಕಲು ಹೇಳಿದರು, ಆದರೆ ಯಾವುದೇ ಒತ್ತಡವಿಲ್ಲದೆ ಕಾಲೇಜು ಮುಗಿಸಲು ಬಯಸಿದ್ದೆ ಎಂದಿದ್ದಾರೆ ಸಾಯಿ ಪಲ್ಲವಿ.

PR ಸಂಸ್ಥೆಯನ್ನು ದೂರ ಇಟ್ಟಿರುವ ಸಾಯಿ

ಬಾಲಿವುಡ್‌ನಲ್ಲಿ ನನಗೆ ತಿಳಿದಿರುವ ಓರ್ವ ಮಹಿಳೆ ನನಗಾಗಿ ಪಿಆರ್‌ ಸಂಸ್ಥೆಯನ್ನು ನೇಮಿಸಿಕೊಳ್ಳಲು ಹೇಳಿದರು. ಆದರೆ ನನಗೆ ಅದು ಅಗತ್ಯವಿಲ್ಲ ಎಂದು ಅನಿಸಿತು ಎನ್ನುತ್ತಾರೆ ಸಾಯಿ.

ಮಹಿಳೆಯನ್ನು ಮರುಪ್ರಶ್ನಿಸಿದ ಸಾಯಿ

ನಾನು ಚಿತ್ರಗಳಲ್ಲಿ ನಟಿಸುವಾಗ ಸಂದರ್ಶನಗಳನ್ನು ನೀಡುತ್ತೇನೆ. ಹಾಗಿದ್ದಾಗ ನನಗೆ ಏಕೆ  ವಿಶೇಷವಾಗಿ PR ಸಂಸ್ಥೆ ಬೇಕು ಎಂದು ಕೇಳಿದೆ.ಅದಕ್ಕೆ ಅವರ ಬಳಿಯೂ ಸ್ಪಷ್ಟ ಉತ್ತರವಿರಲಿಲ್ಲ ಎಂದರು ಸಾಯಿ.

ಸಾಯಿ ಏಕೆ PR ಸಂಸ್ಥೆ ಬೇಡವೆನ್ನುತ್ತಾರೆ?

ನಾನು ಚಿತ್ರಗಳಲ್ಲಿ ನಟಿಸದಿದ್ದಾಗಲೂ ನನ್ನ ಬಗ್ಗೆ ಮಾತನಾಡುವುದು ಅಗತ್ಯ ಎಂದು ಅವರು ಹೇಳಿದರು  ಏಕೆ ಎಂದು ಕೇಳಿದೆ. ಎಲ್ಲರೂ ನನ್ನ ಬಗ್ಗೆ ಮಾತನಾಡಿದರೆ ಅದು ನನಗೆ ಬೇಸರವಾಗುವುದಿಲ್ಲವೇ? ಎಂದಿದ್ದಾರೆ ಸಾಯಿ.

'ರಾಮಾಯಣ'ದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಅವರ ಮುಂದಿನ ಚಿತ್ರ 'ರಾಮಾಯಣ' ಸುಮಾರು 835 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದರಲ್ಲಿ ರಣಬೀರ್ ಕಪೂರ್, ಯಶ್, ಸನ್ನಿ ಡಿಯೋಲ್, ಅರುಣ್ ಗೋವಿಲ್ ಮುಂತಾದ ನಟರು ನಟಿಸುತ್ತಿದ್ದಾರೆ.

ಅಮರನ್:

ಇದರ ಜೊತೆ ದೀಪಾವಳಿಗೆ ಮುನ್ನ ಬಿಡುಗಡೆಯಾಗಲಿರುವ 'ಅಮರನ್' ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೊತೆ ನಟಿಸಿದ್ದಾರೆ ಸಾಯಿ ಪಲ್ಲವಿ.

Image credits: Google

'ರಾಮಾಯಣ'ದ ಸೀತೆ PR ಏಜೆನ್ಸಿ ಬೇಡ ಎಂದಿದ್ದು ಏಕೆ?

ಯಶ್ ಸೇರಿದಂತೆ ಈ 7 ತಾರೆಯರೂ ಪಾನ್ ಮಸಾಲಾ ಜಾಹೀರಾತುಗಳನ್ನು ತಿರಸ್ಕರಿಸಿದ್ದರು!

ಬಾಲಿವುಡ್‌ನ ಈ ಎಲ್ಲ ಮುಸ್ಲಿಂ ತಾರೆಯರ ಮನೆಯಲ್ಲಿ ನಡೆಯುತ್ತೆ ದೀಪಾವಳಿ ಹಬ್ಬ!

ಕೃಷ್ಣಮೃಗ ಬೇಟೆ ಪ್ರಕರಣ; ಲಾರೆನ್ಸ್ ಬಿಷ್ಣೋಯ್ ಸೋದರ ಸಂಬಂಧ ಸ್ಫೋಟಕ ಹೇಳಿಕೆ!