Cine World

ಸತ್ಯಪ್ರೇಮ್ ಕಿ ಕಥಾ

ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅವರ ಮುಂಬರುವ ಚಿತ್ರ 'ಸತ್ಯಪ್ರೇಮ್ ಕಿ ಕಥಾ' ಚಿತ್ರ ಜನರಲ್ಲಿ ಕುತೂಹಲ ಸೃಷ್ಟಿಸಿದೆ.
 

Image credits: our own

ಜೂನ್ 29ಕ್ಕೆ ಬಿಡುಗಡೆ

ಸಮೀರ್ ವಿದ್ವಾನ್ ನಿರ್ದೇಶನದ ಈ ಚಿತ್ರ ಜೂನ್ 29 ರಂದು ಬಿಡುಗಡೆಯಾಗಲು ಸಿದ್ಧವಾಗಿದ್ದು, ಈ ನಡುವೆ ಪಾಕಿಸ್ತಾನದಿಂದ ಭಾರಿ ಟೀಕೆಗಳು ಕೇಳಿ ಬರುತ್ತಿದೆ. 
 

Image credits: our own

ಪಾಕ್‌ನ ಪಸೂರಿ ಹಾಡಿನ ರಿಮೇಕ್

ಈ ಚಿತ್ರದಲ್ಲಿ ಜನಪ್ರಿಯ ಪಾಕಿಸ್ತಾನಿ ಹಾಡು 'ಪಸೂರಿ' ರಿಮೇಕ್ ಮಾಡಲಾಗಿದೆ ಎಂಬ ಸುದ್ದಿ ಬಂದ ಕೂಡಲೇ, ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಲಿವುಡ್ ಅನ್ನು ಟೀಕಿಸುತ್ತಿದ್ದಾರೆ. 
 

Image credits: our own

ಪಾಕ್‌ಗೇನು ಕಷ್ಟ?

ಮೂಲತಃ ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿದ 'ಪಸೂರಿ’ ಹಾಡು ರೀಮೇಕ್ ಆಗಿರುವುದು ಪಾಕಿಸ್ತಾನಿ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ.
 

Image credits: our own

ರಿಮೇಕ್ ಗೆ ಅನುಮತಿ ಸಿಕ್ಕಿದ್ಯಾ?

ಪಸೂರಿ ಹಾಡನ್ನು ಹೀಗೆ ರಿಮೇಕ್ ಮಾಡಲು ಹೇಗೆ ಸಾಧ್ಯ? ಸಂಗೀತ ನಿರ್ದೇಶಕರಿಂದ ಅದಕ್ಕಾಗಿ ಅನುಮತಿ ಕೇಳಿದ್ರಾ? ಅಥವಾ  ಅವರು ನಾಚಿಕೆಯಿಲ್ಲದೆ ಬೈಪಾಸ್ ಮಾಡಲು ಹೊರಟಿದ್ದಾರೆಯೇ? ಎಂದ ಟ್ವಿಟರ್ ಬಳಕೆದಾರ.
 

Image credits: our own

ಥರ್ಡ್ ಕ್ಲಾಸ್ ಬಾಲಿವುಡ್

ಪಸೂರಿಯನ್ನು ರಿಮೇಕ್ ಮಾಡಬೇಕಾದರೆ, ಅದು ಪಾಕಿಸ್ತಾನಿ ಚಿತ್ರಕ್ಕಾಗಿ ಇರಬೇಕು, ಥರ್ಡ್ ಕ್ಲಾಸ್ ಬಾಲಿವುಡ್ ಚಿತ್ರಕ್ಕಾಗಿ ಅಲ್ಲ! ಎಂದು ಇನ್ನೊಬ್ಬರು ಹೇಳಿದ್ದಾರೆ.
 

Image credits: our own

ಪಾಕ್‌ಗೆ ಆಗೌರವವಂತೆ!

ಬಾಲಿವುಡ್ ತಮ್ಮ ಚಲನಚಿತ್ರಗಳಲ್ಲಿ ನಮ್ಮ ಕಲಾವಿದರಿಗೆ, ನಮ್ಮ ದೇಶಕ್ಕೆ ಅಗೌರವ ತೋರಿಸುತ್ತಾರೆ ನಂತರ ನಾಚಿಕೆಯಿಲ್ಲದೆ ನಮ್ಮ ಹಾಡುಗಳನ್ನು ನಕಲು ಮಾಡುತ್ತಾರೆ ಎಂದು ಟೀಕಿಸಿದ ನೆಟ್ಟಿಗ.
 

Image credits: our own

ಹಣ ಹೆಚ್ಚಾದ್ರೆ ಸೋಮಾರಿಯಾಗ್ತಾರೆ

ಬಾಲಿವುಡ್ ಜನ ಮೂರ್ಖರು. ಹಣದ ಹೆಚ್ಚಾದ್ರೆ ನಿಜವಾಗಿಯೂ ಮನುಷ್ಯ ಸೋಮಾರಿಯಾಗ್ತಾನೆ, ಕ್ರಿಯೇಟಿವಿಯೇ ಇರೋದಿಲ್ಲ. ಅಲ್ಲಿನ ನಟರು ನಮ್ಮ ಹಾಡಿಗೆ ಡ್ಯಾನ್ಸ್ ಮಾಡೋದು ಬೇಡ ಎಂದ ಮತ್ತೊಬ್ಬ ಅಭಿಮಾನಿ.
 

Image credits: our own

ಅಲಿ ಸೇಥಿ ಮತ್ತು ಶೇ ಗಿಲ್ ಗೆ ಕ್ರೆಡಿಟ್

ನಾಚ್ ಪಂಜಾಬ್‌ಗೆ ಮಾಡಿದಂತೆ, ಈ ಸಲ ಪಸೂರಿ ಹಾಡು ನಮ್ಮದು ಎಂದು ನಾಚಿಕೆಯಿಲ್ಲದೇ ಹೇಳುವಿರಿ, ನೀವು ಅಲಿ ಸೇಥಿ ಮತ್ತು ಶೇ ಗಿಲ್ ಗೆ ಯಾವುದೇ ಕ್ರೆಡಿಟ್ ಸಹ ನೀಡೋದಿಲ್ಲ ಎಂದು ದೂರಿದ ಅಭಿಮಾನಿ.
 

Image credits: our own

ಮುಂದೇನು?

ಸದ್ಯ ಪಾಕಿಸ್ತಾನದಲ್ಲಿ ಈ ಕುರಿತು ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದ್ದು, ವಿವಾದ ಹೆಚ್ಚಾಗುವ ಮುನ್ನ ಸತ್ಯಪ್ರೇಮ್ ಕಿ ಕಥಾ ಟೀಮ್ ಈ ಬಗ್ಗೆ ಸ್ಪಷ್ಟನೆ ನೀಡುತ್ತಾ ಕಾದು ನೋಡಬೇಕು? 
 

Image credits: our own

ಅಯ್ಯೋ.. ಸೆರಗು ಮುಚ್ಕಳಮ್ಮ: ಬಿಕಿನಿ ತರ ಸೀರೆ ಧರಿಸಿದ ದಿಶಾಗೆ ನೆಟ್ಟಿಗರ ಕ್ಲಾಸ್

ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ದೀಪಿಕಾ: ಪತಿಯ ರಿಯಾಕ್ಷನ್ ಹೀಗಿತ್ತು

ತಮನ್ನಾ ತೊಡೆಮೇಲೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ: ರೊಮ್ಯಾಂಟಿಕ್ ಫೋಟೋ ವೈರಲ್

ಸೀರೆಯಲ್ಲಿ ಮಿಂಚುತ್ತಿದ್ದ 'ಪಾರು' ದಾಮಿನಿಯ ಬೋಲ್ಡ್ ಲುಕ್ ವೈರಲ್