Cine World
ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಹಾಗೂ ತಮ್ಮ ಅಭಿನಯದಿಂದಲೇ ಮೋಡಿ ಮಾಡುವ, ಸಿಂಪ್ಲಿಸಿಟಿಗೆ ಹೆಸರುವಾಸಿಯಾಗಿರುವ ನಟಿ ಅಂದ್ರೆ ಅದು ಸಾಯಿ ಪಲ್ಲವಿ.
ಅದು ಸಿನಿಮಾವೇ ಆಗಿರಲಿ, ಫ್ಯಾಮಿಲಿ ಫಂಕ್ಷನ್ ಆಗಿರಲಿ, ಟ್ರಾವೆಲ್ ಆಗಿರಲಿ ಸಾಯಿ ಪಲ್ಲವಿ ಯಾವತ್ತಿಗೂ ಮೇಕಪ್ ಇಲ್ಲದೇನೆ ಕಾಣಿಸಿಕೊಳ್ಳುವ ಸಿಂಪಲ್ ಬ್ಯೂಟಿ.
ಮೇಕಪ್ ಅಷ್ಟೊಂದು ಇಷ್ಟಪಡದ ಸಾಯಿ ಪಲ್ಲವಿ, ಸಿನಿಮಾದಲ್ಲೂ ಮೇಕಪ್ ಬಳಸೋದು ಕಡಿಮೆ, ಗ್ಲಾಮರಸ್ ರೋಲ್ ಗಳನ್ನಂತೂ ಒಪ್ಪಿಕೊಳ್ಳೋದೆ ಕಡಿಮೆ.
ಸಾಯಿ ಪಲ್ಲವಿ ತಂಗಿ ಪೂಜಾ ಕಣ್ಣನ್, ಮೂರು ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ನಟಿ ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆಯಲ್ಲಿ ಸಂಭ್ರಮಿಸಿದ ಫೋಟೊ ಶೇರ್ ಮಾಡಿದ್ದಾರೆ.
ಸಾಯಿ ಪಲ್ಲವಿ ತಮ್ಮ ಒಂದಷ್ಟು ಕ್ಯಾಂಡಿಡ್ ಫೋಟೊಗಳನ್ನು ಹಂಚಿಕೊಂಡಿರುವ ನಟಿ, ಈವಾಗ ಎಲಿಜಿಬಲ್ ಬ್ಯಾಚುಲರೇಟ್ ಹಾಗೂ ವಧುವಿನ ಅಕ್ಕನ ಮೇಲೆ ಫೋಕಸ್ ಮಾಡೋಣ ಎಂದು ಬರೆದುಕೊಂಡಿದ್ದಾರೆ.
ಪಲ್ಲವಿ ಹಾಫ್ ವೈಟ್ ಸೀರೆಯುಟ್ಟು ಹಣೆ ಮೇಲೆ ಕುಂಕುಮದ ಬೊಟ್ಟು, ಕೈಯಲ್ಲಿ ಜಪ ಮಾಲೆ, ಕುತ್ತಿಗೆಯಲ್ಲಿ ಮುತ್ತಿನ ಹಾರ, ಮುಡಿಗೆ ಮಲ್ಲಿಗೆ ಹೂವು ಮುಡಿದು ಮದುವೆಯಲ್ಲಿ ಮಿಂಚಿದ್ದಾರೆ.
ಮತ್ತೊಂದು ಫೋಟೊದಲ್ಲಿ ಸಾಯಿ ಪಲ್ಲವಿ ಕಪ್ಪು ಬಾರ್ಡರ್ ಇರುವ ಕೆಂಪು ಬಣ್ಣದ ಜರಿ ಸೀರೆ ಉಟ್ಟಿದ್ದು, ಒಬ್ಬ ಹೀರೋಯಿನ್ ಆಗಿ ಇಷ್ಟೊಂದು ಸಿಂಪಲ್ ಆಗಿರೋದಕ್ಕೆ ಹೇಗೆ ಸಾಧ್ಯ ಅಂತಿದ್ದಾರೆ ಫ್ಯಾನ್ಸ್.
ಮತ್ತೊಂದಿಷ್ಟು ಫೋಟೊಗಳು ಹಳದಿ ಸಮಾರಂಭದ್ದಾಗಿದ್ದು, ನಟಿ ಆಫ್ ವೈಟ್, ಹಳದಿ ಬಣ್ಣದ ಸ್ಲೀವ್ ಲೆಸ್ ಸಲ್ವಾರ್ ಧರಿಸಿ, ತಂಗಿ ಮತ್ತು ಅವರ ಪತಿ ಜೊತೆ ಹರಟೆ, ಫೋಟೊ ಕ್ಲಿಕ್, ಅರಿಶಿನ ಹಚ್ಚೋದನ್ನು ಕಾಣಬಹುದು.
ಸಾಯಿ ಪಲ್ಲವಿ ಫೋಟೊಗಳಿಗೆ ಒಂದೇ ದಿನದಲ್ಲಿ ಬರೋಬರಿ 25 ಲಕ್ಷಕ್ಕೂ ಅಧಿಕ ಲೈಕ್ ಬಂದಿದ್ದು, 9280 ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿ ನಟಿಯ ಮೇಲೆ ಪ್ರೀತಿಯ ಸುರಿಮಳೆ ಸುರಿದಿದ್ದಾರೆ.
ಮೇಕಪ್ ಇಲ್ಲ, ಗ್ಲಾಮರಸ್ ಆಗಿ ಕಾಣಿಸೋದು ಇಲ್ಲ, ತನ್ನ ಸಿಂಪ್ಲಿಸಿಟಿಯಿಂದಲೇ ಎದ್ದು ಕಾಣುವ ಈಕೆ ಸೌಂದರ್ಯಕ್ಕೆ ಮತ್ತೊಂದ ಹೆಸರು ಅಂದ್ರೆ ಸಾಯಿ ಪಲ್ಲವಿ ಅಂದಿದಾರೆ ಫ್ಯಾನ್ಸ್.