Cine World
ಅಪ್ಪನ ಹೆಸರು ಹೇಳಿಕೊಂಡು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ಬಾಲಿವುಡ್ ಸೆಲಿಬ್ರಿಟಿಗಳ ಪೈಕಿ ಅನನ್ಯ ಪಾಂಡೆ ಹೆಸರು ಮೊದಲ ಸ್ಥಾನದಲ್ಲಿದೆ.
ಅನನ್ಯ ಪಾಂಡೆ ಬಾಲಿವುಡ್‌ನ ಪ್ರಖ್ಯಾತ ಸೆಲಿಬ್ರಿಟಿ ಚಂಕಿ ಪಾಂಡೆ ಅವರ ಮುದ್ದಿನ ಮಗಳು. ಅನನ್ಯ ನಟಿಸಿದ ಬಹುತೇಕ ಸಿನಿಮಾಗಳು ಪ್ಲಾಪ್ ಆಗಿವೆ. ಹೀಗಿದ್ದರೂ ಆಕೆಗೆ ಒಳ್ಳೆಯ ಫ್ಯಾನ್ಸ್ ಇದ್ದಾರೆ
ವರುಣ್ ಧವನ್ ಬಾಲಿವುಡ್‌ನ ಫೇಮಸ್ ಡೈರೆಕ್ಟರ್ ಡೇವಿಡ್ ಧವನ್ ಅವರ ಪುತ್ರ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.
ಡೇವಿಡ್ ಧವನ್ ಅವರಿಂದಾಗಿಯೇ ವರುಣ್‌ಗೆ ಒಂದರ ಮೇಲೊಂದರಂತೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿವೆ. ವರುಣ್ ತಂದೆ ಬೇರೆಯವರಾಗಿದ್ದರೇ ಇಷ್ಟರಲ್ಲಾಗಲೇ ಬಾಲಿವುಡ್‌ನಿಂದ ನಾಪತ್ತೆಯಾಗುತ್ತಿದ್ದರು.
ಬಾಲಿವುಡ್‌ನ ಮೋಹಕ ಸುಂದರಿ ಶ್ರೀದೇವಿ ಹಾಗೂ ಬೋನಿ ಕಪೂರ್ ಮಗಳು ಜಾನ್ಹವಿ ಕಪೂರ್ ನೋಡೋಕೆ ಚೆನ್ನಾಗಿಯೇ ಇದ್ದರೂ ಅಭಿನಯ ಮಾತ್ರ ಅಷ್ಟಕ್ಕಷ್ಟೇ.
ಜಾನ್ಹವಿ ಅವರ ನಟನೆ ಅವರ ಫ್ಯಾನ್ಸ್‌ಗೆ ಅಷ್ಟೊಂದು ಇಷ್ಟವಾಗಿಲ್ಲ. ತಮ್ಮ ಲುಕ್ ಹಾಗೂ ಪೋಷಕರ ಹೆಸರು ಇಲ್ಲದೇ ಇದ್ದಿದ್ದರೇ ಜಾನ್ಹವಿ ಹೆಸರು ಬಹುತೇಕ ಮಂದಿ ಮರೆತು ಬಿಡುತ್ತಿದ್ದರು.
ಸೋನಾಕ್ಷಿಯನ್ನು ಸಲ್ಮಾನ್ ಖಾನ್ ಬಾಲಿವುಡ್‌ಗೆ ಪರಿಚಯಿಸಿದಾಗ ಈಕೆ ಬಾಲಿವುಡ್ ಆಳಲಿದ್ದಾರೆ ಎಂದಿದ್ದರು. ಸಾಕಷ್ಟು ವರ್ಷಗಳಿಂದ ಸೋನಾಕ್ಷಿ ಹಿಟ್ ಫಿಲಂ ನೀಡಲು ವಿಫಲರಾಗಿದ್ದಾರೆ.
ಫ್ಲಾಪ್ ಸಿನಿಮಾದಿಂದಾಗಿ ಆಕೆಯನ್ನು ಜನರು ಇಷ್ಟಪಡುತ್ತಿಲ್ಲ. ಶತೃಘ್ನ ಸಿನ್ಹಾ ಹೆಸರು ಇಲ್ಲದೇ ಹೋಗಿದ್ದರೇ ಸೋನಾಕ್ಷಿ ಇಷ್ಟರಲ್ಲಾಗಲೂ ಜನಮಾನಸದಿಂದ ಮರೆಯಾಗುತ್ತಿದ್ದರು.
ಅಭಿಷೇಕ್ ಬಚ್ಚನ್ ಬಾಲಿವುಡ್‌ಗೆ ಎಂಟ್ರಿಕೊಟ್ಟಾಗ ಸಾಕಷ್ಟು ನಿರೀಕ್ಷೆಗಳಿದ್ದವು, ಕೆಲ ಹಿಟ್ ಫಿಲಂಗಳನ್ನು ಹೊರತುಪಡಿಸಿ ಅಭಿಷೇಕ್ ಬಚ್ಚನ್ ವೈಫಲ್ಯ ಅನುಭವಿಸಿದ್ದೇ ಹೆಚ್ಚು.
ತಂದೆಯಂತೆ ದೀರ್ಘಕಾಲ ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ ಮಿಂಚುವ ನಿರೀಕ್ಷೆ ಹುಸಿಯಾಗಿದೆ. ತಂದೆಯ ಹೆಸರಿಲ್ಲದಿದ್ದರೇ ಅಭಿಷೇಕ್ ಕೂಡಾ ಎಲ್ಲರ ನೆನಪಿನಲ್ಲಿ ಉಫಿಯುತ್ತಿರಲಿಲ್ಲ