Kannada

ಹೆಲೆನ್ @86

1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಅತ್ಯುತ್ತಮ ಕ್ಯಾಬರೆ ನರ್ತಕಿ ಮತ್ತು ನಟಿ ಹೆಲೆನ್ ಅವರು ಆಗಲೇ ಮದುವೆಯಾಗಿದ್ದ ಸಲೀಂ ಖಾನ್  ಅವರನ್ನು ಮದುವೆಯಾದಾಗ  ಖಾನ್ ಕುಟುಂಬದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿತ್ತು.

Kannada

ಸಲ್ಮಾನ್ ಖಾನ್ ಮಲತಾಯಿ

ಹೆಲೆನ್‌  ಅವರಿಗೀಗ 86ರ ಹರೆಯ. ಸಲ್ಮಾನ್ ಖಾನ್ ಮಲತಾಯಿ ಸಲೀಂ ಖಾನ್ ಪತ್ನಿಗೆ ಸವತಿಯಾಗಿ ಬಂದ ಅವರು ಮಲ ಮಕ್ಕಳಿಗೂ ಪ್ರೀತಿಯ ಅಮ್ಮನಾದರು. ಕುಟುಂಬ ಒಡೆಯದೇ ಅವರಲ್ಲೇ ಒಂದಾಗಿ ಬೆರೆತ ಹೆಲೆನ್ ಲೈಫ್ ಜರ್ನಿ ಇಲ್ಲಿದೆ.

Kannada

ಕ್ಯಾಬರೆ ನರ್ತಕಿ ಹೆಲೆನ್

ಹೆಲೆನ್ 1938 ರಲ್ಲಿ ಮ್ಯಾನ್ಮಾರ್‌ನ ಯಾಂಗೂನ್‌ನಲ್ಲಿ ಜನಿಸಿದರು. ಈಗ ಚಿತ್ರರಂಗದಿಂದ ದೂರವುಳಿದಿರುವ ಹೆಲೆನ್ ಕೊನೆಯದಾಗಿ 2012 ರ 'ಹೀರೋಯಿನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Kannada

1000 ಚಿತ್ರಗಳಲ್ಲಿ ನಟಿಸಿದ ಹೆಲೆನ್

ಹೆಲೆನ್ ತಮ್ಮ 70 ವರ್ಷಗಳ ಚಿತ್ರರಂಗದ ವೃತ್ತಿಜೀವನದಲ್ಲಿ ಸುಮಾರು 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹೆಲೆನ್ ಚಿತ್ರರಂಗದ ಪ್ರತಿಯೊಬ್ಬ ದೊಡ್ಡ-ಸಣ್ಣ ತಾರೆಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

Kannada

ದಿಬ್ರುಗಢಕ್ಕೆ ಬಂದ ಹೆಲೆನ್

ಎರಡನೇ ಮಹಾಯುದ್ಧದ ಸಮಯದಲ್ಲಿ ಹೆಲೆನ್ ಬರ್ಮಾದಿಂದ ದಿಬ್ರುಗಢಕ್ಕೆ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಬಂದರು. ಕಠಿಣ ಪರಿಶ್ರಮದ ನಂತರ ಹೆಲೆನ್ ಮುಂಬೈಗೆ ಬಂದು ಚಿತ್ರರಂಗದಲ್ಲಿ ಅವಕಾಶ ಪಡೆದರು.

Kannada

'ಹೌರಾ ಬ್ರಿಡ್ಜ್' ನಿಂದ ಬ್ರೇಕ್

1958 ರಲ್ಲಿ ಬಿಡುಗಡೆಯಾದ 'ಹೌರಾ ಬ್ರಿಡ್ಜ್' ಚಿತ್ರದಲ್ಲಿ ಹೆಲೆನ್‌ಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ನಂತರ ಅವರಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ಸಿಕ್ಕಿತು. .

Kannada

ಸಲೀಂ ಖಾನ್ ಭೇಟಿ

ಚಿತ್ರಗಳಲ್ಲಿ ಕೆಲಸ ಮಾಡುವಾಗ ಹೆಲೆನ್‌ಗೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಭೇಟಿಯಾಗಿದ್ದು, ಸಲೀಂ ಹೆಲೆನ್ ನೃತ್ಯಕ್ಕೆ ಮನಸೋತಿದ್ದರು.ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ 1980 ರಲ್ಲಿ ಇಬ್ಬರೂ ವಿವಾಹವಾದರು.

Kannada

ಹೆಲೆನ್ ನಿಂದ ಸಂಚಲನ

ಆದರೆ ಸಲೀಂ ಖಾನ್‌ಗೆ ಆಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದರು. ಹೀಗಾಗಿ ಈ ಮದುವೆ ಮನೆಯ ಯಾರಿಗೂ ಇಷ್ಟ ಇರಲಿಲ್ಲ, ಪತ್ನಿ ಸೇರಿದಂತೆ ನಾಲ್ವರು ಮಕ್ಕಳು ಕೂಡ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

Kannada

ಖಿನ್ನತೆಗೆ ಒಳಗಾದ ಸಲ್ಮಾನ್ ತಾಯಿ

ಗಂಡ ಎರಡನೇ ಮದುವೆ ಮಾಡಿಕೊಂಡಿದ್ದರಿಂದ ಸಲ್ಮಾನ್ ಖಾನ್ ತಾಯಿ ಸಲ್ಮಾ ಖಿನ್ನತೆಗೆ ಒಳಗಾದರು. ಈ ವಿಷಯವನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದರು. ಸಲ್ಮಾನ್, ಅರ್ಬಾಜ್, ಸೋಹೆಲ್ ಹೆಲೆನ್ ಜೊತೆ ಮಾತನಾಡುತ್ತಿರಲಿಲ್ಲ.

Kannada

ಹೆಲೆನ್ ಅವರನ್ನು ಇಷ್ಟಪಡಲು ಶುರು

ಆದರೆ ಒಟ್ಟಿಗೆ ವಾಸಿಸುವಾಗ ಸಲ್ಮಾನ್, ಅರ್ಬಾಜ್-ಸೋಹೆಲ್‌ಗೆ ನಾವು ಹೆಲೆನ್ ಬಗ್ಗೆ ಏನು ಯೋಚಿಸುತ್ತಿದ್ದೆವೋ ಅದು ನಿಜವಲ್ಲ ಎಂಬುದು ಅರ್ಥವಾಯ್ತು.ಹಾಗೂ ಕುಟುಂಬದ ವಾತಾವರಣ ಮತ್ತೆ ಸಂತೋಷದಿಂದ ಕೂಡಿತ್ತು.

90ರ ದಶಕದ ನಟಿಯರ ಮೇಕಪ್ ರಹಿತ ಫೋಟೋಗಳು ಈಗ ಹೇಗೆ ಕಾಣುತ್ತಾರೆ ನೋಡಿ!

ಅಲ್ಲು ಅರ್ಜುನ್ 100 ಕೋಟಿ ಮೌಲ್ಯದ ಗಾಜಿನ ಬಂಗಲೆಯೊಳಗೆ ಒಂದು ನೋಟ!

90ರ ದಶಕದಲ್ಲಿ ಮಿಂಚಿದ ನಟಿಯರ ಮೇಕಪ್ ಇಲ್ಲದ ಫೋಟೋಗಳು ವೈರಲ್! ಮಾಧುರಿ ಫೋಟೋ ನೋಡಿ

ಒಂದೇ ಹೆಸರಿನ ಈ ಚಿತ್ರ 6 ಬಾರಿ ತೆರೆಗೆ; ಆರಕ್ಕೆ ಆರು ಬಾರಿಯೂ ಸೂಪರ್ ಹಿಟ್‌!